Skip to main content

Posts

Showing posts from April, 2017

ಒಬ್ಬಟ್ಟಿನ ಮಹಾತ್ಮ

ಸಕಲ ಲೋಕಗಳ ಒಡೆಯನಾದ ಇಂದ್ರನಿಗೆ ಸಿಹಿ ತಿನಿಸು ತಿನ್ನುವ ಬಯಕೆಯಾಗಿ ಶೌನಕಾದಿ ಮಹಾಮುನಿಗಳನ್ನು ಕುರಿತು ಹೀಗೆಂದನು. "ಮುನಿವರ್ಯರೇ, ಬಹುದಿನಗಳಿಂದ ನನಗೆ ಸಿಹಿ ತಿನಿಸು ತಿನ್ನುವ ಬಯಕೆಯಾಗಿದೆ. ಬೆಳಗಿನ ಕನಸಲ್ಲೂ ಸಿಹಿಯದ್ದೇ ಧ್ಯಾನ, ರಾತ್ರಿ ಹಂಸತೂಲಿಕಾ ತಲ್ಪದ ಮೇಲೆ ಮಲಗಿರುವಾಗಲೂ ಸಿಹಿಯದ್ದೇ ಧ್ಯಾನ, ನನಗೆ ಸಿಹಿ ತಿನಿಸು ಬಿಟ್ಟು ಜೀವನದ ಬೇರಾವ ಭೋಗಗಳ ಬಗ್ಗೆಯೂ ಆಸೆ ಹೊರಟು ಹೋಗಿದೆ. ಹೀಗಾಗಿ, ಪ್ರಪಂಚದ ಅತಿ ಸುಮಧುರ ಸವಿಯಾದ ಸಿಹಿ ತಿನಿಸು ಯಾವುದು? ಎಲ್ಲಿ ಸಿಗುತ್ತದೆ, ಮಾಡುವ ವಿಧಾನವನ್ನಾದರೂ ವಿವರಿಸಿ " ಎಂದು ಕೇಳಲು, ಮಹಾಮುನಿಗಳು ಇಂದ್ರನನ್ನು ಕುರಿತು ಹೀಗೆಂದರು.. " "ಎಲೈ ಇಂದ್ರನೇ ಕೇಳು... ಹಿಂದೆ ದ್ವಾಪರಯುಗದಲ್ಲಿ ಗೊಲ್ಲ ಶ್ರೀ ಕೃಷ್ಣನಿಗೆ ಶ್ಯಮಂತಕ ಮಣಿಯ ಸಾಹಸವೆಲ್ಲ ಮುಗಿದ ಮೇಲೆ ಸಿಹಿ ತಿನಿಸು ತಿನ್ನುವ ಬಯಕೆ ಆಯಿತು. ಆಗ ಆತನು ಸಭದ್ರೆಯೊಡನೆ ಹೀಗೆಂದನು.. ತಂಗಿ, ನನಗೆ ಹಲವಾರು ದಿನಗಳಿಂದ ಕವಿದಿದ್ದ ನೋವು ಅವಮಾನವೆಲ್ಲ ಕರಗಿ ಮನಸ್ಸಿಗೆ ನೆಮ್ಮದಿ ಆಗಿದೆ, ಹೀಗಾಗಿ ಸಿಹಿ ತಿನಿಸು ತಿನ್ನುವ ಬಯಕೆ ಆಗಿದೆ, ನನಗೆ ಸಿಹಿ ಮಾಡಿಕೊಡು ಎಂದು ಹೇಳಲು, ಚಿಂತಾಕ್ರಾಂತಳಾದ ಸುಭದ್ರೆಯು ಅಣ್ಣ ಬಲರಾಮನ ಬಳಿ ಓಡಿದಳು. ಅಣ್ಣ, ಕೃಷ್ಣನಿಗೆ ಸಿಹಿ ತಿನಿಸು ತಿನ್ನುವ ಬಯಕೆಯಾಗಿದೆ, ಅವನ ಮನಸ್ಸಂತೋಷ ಪಡಿಸುವಂತಹ ಯಾವುದಾದರೂ ಒಂದು ಸಿಹಿ ತಿನಿಸು ಮಾಡಲು ಸಹಾಯ ಮಾಡಬೇಕು, ಎಂದಳು. ಬಲರಾಮನು ಕೂಡ ಯೋಚಿಸುತ್...