Skip to main content

Posts

Showing posts from October, 2017

ಕೌತುಕಗಳ ಆಗರ - ಐಸ್ಲ್ಯಾಂಡ್

ಐಸ್ಲ್ಯಾಂಡ್ / ಐಸ್ ಲ್ಯಾಂಡ್ ಯುರೋಪ್ ಖಂಡದ ದ್ವೀಪಗಳಲ್ಲೊಂದು . ಯುರೋಪ್ ಭೂಖಂಡದಿಂದ ಸುಮಾರು ೧೨೦೦ ಕಿಲೋಮೀಟರ್ಗಳಷ್ಟು ದೂರದ ದ್ವೀಪ ರಾಷ್ಟ್ರ . ಸುಮಾರು ೪೦೦೦೦ ಚದರ ಮೈಲುಗಳ ವಿಸ್ತೀರ್ಣದ ( ಕರ್ನಾಟಕದ ಅರ್ಧದಷ್ಟು ) ದೇಶದ ಜನಸಂಖ್ಯೆ ಕೇವಲ ಮೂರೂವರೆ ಲಕ್ಷ . ಉತ್ತರ ಧೃವಕ್ಕೆ ಸಮೀಪದ ಈ ದ್ವೀಪ ರಾಷ್ಟ್ರ ಸದಾ ಹಿಮ ಮುಚ್ಚಿದ ಪರ್ವತ , ಗ್ಲೇಶಿಯರ್ಗಳಿಂದ ಚಿರಪರಿಚಿತ . ಇಲ್ಲಿಂದ ಬೇಸಿಗೆಯ ಸರಾಸರಿ ತಾಪಮಾನ ೧೩ ಡಿಗ್ರೀ   ಅಂದ್ರೆ ಅಲ್ಲಿನ ಚಳಿಗಾಲದ ಪರಿಸ್ಥಿತಿ ಹೇಗಿರಬೇಡ . ಇನ್ತಿರ್ಪ ಐಸ್ಲ್ಯಾಂಡ್ ಹಲವಾರು ವಿಷಯಗಳಿಗೆ ಪ್ರಖ್ಯಾತಿ ಪಡೆದಿದೆ . ಐಸ್ಲ್ಯಾಂಡ್ನಲ್ಲಿ ಕಾಣಸಿಗುವ ರಾತ್ರಿಯ ಕಾರ್ಗತ್ತಲ್ಲನ್ನು ಸೀಳಿ ಕಣ್ಣಿಗೆ ಹಬ್ಬ ಉಂಟುಮಾಡುವ ಅರೋರಾ ಬೋರೆಲಿಸ್ , ಮುನ್ಸೂಚನೆಯನ್ನೇ ಕೊಡದೆ ಬೆಂಕಿ ಧೂಳು ಉಗುಳುವ ಜ್ವಾಲಾಮುಖಿಗಳು , ನೀಲ ಬಣ್ಣದ ಸಮುದ್ರತೀರಗಳು , ಬಿಸಿನೀರಿನ ಬುಗ್ಗೆಗಳು , ಪಿಕ್ಚರ್ ಪರ್ಫೆಕ್ಟ್ ಜಲಪಾತಗಳು .. ಹೀಗೆ ಲಿಸ್ಟ್ ಮುಗಿಯುವುದೇ ಇಲ್ಲ . ಐಸ್ಲ್ಯಾಂಡ್ ನೋಡಲು ಒಂದು ವಾರ ಸಾಕಾಗಾವುದಿಲ್ಲ . ಐಸ್ಲ್ಯಾಂಡ್ ಸುತ್ತ ನಿರ್ಮಿಸಿರುವ ವರ್ತುಲ ರಸ್ತೆ ಅರ್ಥಾತ್ ರಿಂಗ್ ರೋಡ್ ಐಸ್ಲ್ಯಾಂಡ್ ನ ಹಲವು ಕೌತುಕಗಳಿಗೆ ರಹದಾರಿ . ನಮ್ಮ ಬೆಂಗಳೂರಿನ ರಿಂಗ್ ರೋಡ್ ಬೆಳ್ಳಂದೂರು ಕೆರೆಯ ನೊರೆ , ಸಿಲ...