Skip to main content

Posts

Showing posts from June, 2017

Himalayas Calling - Solo Trip to McLeod

It is 15:10 and I am on my way to airport. It’s a long 50 km journey to KIAL. It has been almost 3 months since I am back from my last Himalayan trek, which was Har Ki Dun in Uttarakhand. Since I came back, I felt an emptiness inside me. I was not complete. It took me a while to understand, it’s the mountains I am missing.   This is not the first time. This has happened to me every time I came back from a Himalayan trek. I try to go to Himalayas in search of my lost soul at least once every 6 months. Now, I am off to McLeodGanj, the hippie capital, the unofficial capital city of Tibet. McLeod is situated at the foothills of Dhauladhar range of Himalayas, at a height of 7000+ ft.   I plan to roam, travel, work, trek, explore and eat for the next 10 days. That’s right! I plan to work from a remote Himalayan town. I am doing all these Solo. I will try to capture my exploration in this blog for the next 10 days.   Himalayas calling and here I’m returning to you, a...

Mallory and Irvine - Unknown heroes of Mt. Everest

ಜಗತ್ತಿನ ಅತ್ಯಂತ ಎತ್ತರದ ಪರ್ವತ ಯಾವುದು ? ಯಾವುದೇ ೫ನೆ ಕ್ಲಾಸ್ ಮಕ್ಕಳಿಗೆ ಈ ಪ್ರಶ್ನೆ ಕೇಳಿ , ಥಟ್ಟನೆ ಬರುವ ಉತ್ತರ - ಮೌಂಟ್ ಎವರೆಸ್ಟ್ . ಮುಂದಿನ ಪ್ರಶ್ನೆ - ಈ ಪರ್ವತವನ್ನು ಮೊದಲು ಹತ್ತಿದ್ದು ಯಾರು ? ಬರುವ ಉತ್ತರ - ಎಡ್ಮಂಡ್ ಹಿಲ್ಲರಿ ಮತ್ತು ತೇನ್ ಸಿಂಗ್ ನೋರ್ಗೆ . ೧೯೫೩ರ ಮೇ ೨೯ ರಂದು ಎವರೆಸ್ಟ್ ನ ತುತ್ತ ತುದಿಗೆ ಮೊದಲ ಬಾರಿಗೆ ಏರಿದ ಕೀರ್ತಿ ಇವರೀರ್ವರಿಗೆ ಸಲ್ಲುತ್ತದೆ . ಸುಮಾರು ೧೯೨೧ರಿಂದ ವಿವಿಧ ತಂಡಗಳ ಹಲವಾರು ಪ್ರಯತ್ನಗಳು ವಿಫಲವಾಗಿ ಹಲವಾರು ಜೀವಗಳು ಬಲಿಯಾದ್ದರಿಂದ ಈ ಮೊದಲ ಏರುವಿಕೆಗೆ ಇರುವ ಬೆಲೆ ಅಪಾರ . ಆದರೆ ಜಗತ್ತಿನಿಂದ ಹಲವಾರು ಪರ್ವತಾರೋಹಿಗಳು , ಇತಿಹಾಸಕಾರರು ಈ ಮಾತು ನಂಬುವುದಿಲ್ಲ . ಹಲವರ ಪ್ರಕಾರ ಇಬ್ಬರು ಪರ್ವತಾರೋಹಿಗಳು ೧೯೨೪ರಲ್ಲೇ ಎವರೆಸ್ಟ್ ನ ತುತ್ತ ತುದಿಗೇರಿದ್ದರು ಎಂಬ ಬಲವಾದ ನಂಬಿಕೆ . ಆ ಇಬ್ಬರು ಪರ್ವತಾರೋಹಿಗಳು - ಜಾರ್ಜ್ ಮ್ಯಾಲೋರಿ ಮತ್ತು ಆಂಡ್ರೂ ಇರ್ವಿನ್ . ಈ ದಂಡಯಾತ್ರೆಯ ಕಥೆ ಮುಂದೆ ಓದಿ . ಅದು , ೧೯೨೪ . ಪ್ರಥಮ ಮಹಾ ಯುದ್ಧದ ನಂತರದ ಕಾಲ . ೧೯೦೯ರಲ್ಲಿ ಅಮೆರಿಕಾದ ನಾವಿಕರು ಮೊದಲು ಉತ್ತರ ದ್ರುವಕ್ಕೆ ಹೆಜ್ಜೆ ಇಟ್ಟಮೇಲೆ ೧೯೧೧ ರ ದಕ್ಷಿಣ ದ್ರುವ ಮೊದಲು ತಲುಪುವ ಗುರಿ ಹೊತ್ತು ಹೋಗಿದ್ದ ಬ್ರಿಟಿಷ್ ನಾವಿಕರಿಗೆ ತಿಳಿದು ಬಂದಿದ್ದು ೫ ವಾರಗಳ ಮುಂಚೆಯೇ ನಾರ್ವೆಯ ನಾವಿಕರು ದಕ್ಷಿಣ ಧ್ರುವ ಮುಟ್ಟಿ ಪತಾಕೆ ಹಾರಿಸಿದ್ದಾರೆಂದು . ಇದರಿಂದ ಅವಮಾನಿತರಾದ ಬ್ರಿ...

Charm of ಚಾರ್ಮಾಡಿ

ಚಾರ್ಮಾಡಿ . ಈ ಹೆಸರು ಕೇಳಿದೊಡನೆ ಮನಸ್ಸಿನಲ್ಲಿ ಮೂಡುವ ಭಾವನೆಗಳು ಹಲವಾರು . ಉಲ್ಲಾಸ , ಉದ್ವೇಗ , ಸಂತೋಷ , ಭಯ ಎಲ್ಲವನ್ನೂ ಒಟ್ಟಿಗೆ ತಂದೊಡ್ಡುವ ಹೆಸರು ಚಾರ್ಮಾಡಿ . ಚಾರ್ಮಾಡಿ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ಒಂದು ಪುಟ್ಟ ಹಳ್ಳಿ . ಊರಿಗೊಂದು ಬಸ್ ಸ್ಟಾಪ್ , ೨ ಪೆಟ್ಟಿ ಅಂಗಡಿ , 1 ಚಿಕನ್ ಶಾಪ್ , ೨ ಬಾಂಧವರ ಕಾಕಾ ಹೋಟೆಲ್ , ಒಂದಷ್ಟು ಹಸಿರು ಹೊದ್ದ ಮನೆಗಳು . ಚಾರ್ಮಾಡಿ ಊರೆಂದರೆ ಇಷ್ಟೇ . ಆದರೆ ಚಾರ್ಮಾಡಿಗೆ ವಿಶ್ವ ವಿಖ್ಯಾತಿ ಬರಲು ಕಾರಣ ಅಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ೨೩೪ . ಮಂಗಳೂರಿನಿಂದ ಚಿಕ್ಕಮಗಳೂರು ಮಾರ್ಗವಾಗಿ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಎಕ್ಯ್ಕ ದೊಡ್ಡ ರಸ್ತೆ . ಚಾರ್ಮಾಡಿ ಊರಿನಿಂದ ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಶುರುವಾಗುವ ಏರು ರಸ್ತೆ , ತಿರುವುಗಳು , ದಟ್ಟ ಕಾನನ , ಯಾವಾಗಲೂ ಮುಸುಕಿದ ಮಂಜು . ಈ ಘಟ್ಟ ಪ್ರದೇಶಕ್ಕೆ ಚಾರ್ಮಾಡಿ ಘಾಟ್ ಎಂದು ಹೆಸರು ಬರಲು ಈ ಪುಟ್ಟ ಊರೇ ಕಾರಣ . ಸಮುದ್ರದ ಮಟ್ಟದಿಂದ ೫೦೦ ಅಡಿ ಮೇಲಿರುವ ಚಾರ್ಮಾಡಿಯಿಂದ ಶುರುವಾಗುವ ಘಟ್ಟ ಕೊನೆ ಮುಟ್ಟುವುದು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದ ಬಳಿ . ಕೊಟ್ಟಿಗೆಹಾರದ ಎತ್ತರ ಸುಮಾರು ೩೧೦೦ ಅಡಿ . ಕರ್ನಾಟಕದ ಅತಿ ದೊಡ್ಡ ಘಾಟಿ ಈ ಚಾರ್ಮಾಡಿ . ದೊಡ್ಡದು ಮಾತ್ರವಲ್ಲ ಅತ್ಯಂತ ವಿಹಂಗಮ ಕೂಡ . ಕೊಟ್ಟಿಗೆಹಾರದದಿಂದ ಧರ್ಮಸ್ಥಳದ ಕಡೆ ಹೋಗಲು ೨ - ೩ ಕಿಲೋಮೀಟರು ದಾಟುತ್ತಿದ್ದಂತೆ...