ಜಗತ್ತಿನ
ಅತ್ಯಂತ ಎತ್ತರದ ಪರ್ವತ ಯಾವುದು?
ಯಾವುದೇ ೫ನೆ
ಕ್ಲಾಸ್ ಮಕ್ಕಳಿಗೆ ಈ ಪ್ರಶ್ನೆ
ಕೇಳಿ, ಥಟ್ಟನೆ
ಬರುವ ಉತ್ತರ - ಮೌಂಟ್
ಎವರೆಸ್ಟ್. ಮುಂದಿನ
ಪ್ರಶ್ನೆ - ಈ
ಪರ್ವತವನ್ನು ಮೊದಲು ಹತ್ತಿದ್ದು
ಯಾರು? ಬರುವ
ಉತ್ತರ - ಎಡ್ಮಂಡ್
ಹಿಲ್ಲರಿ ಮತ್ತು ತೇನ್ ಸಿಂಗ್
ನೋರ್ಗೆ.
೧೯೫೩ರ
ಮೇ ೨೯ ರಂದು ಎವರೆಸ್ಟ್ ನ ತುತ್ತ
ತುದಿಗೆ ಮೊದಲ ಬಾರಿಗೆ ಏರಿದ
ಕೀರ್ತಿ ಇವರೀರ್ವರಿಗೆ ಸಲ್ಲುತ್ತದೆ.
ಸುಮಾರು
೧೯೨೧ರಿಂದ ವಿವಿಧ ತಂಡಗಳ ಹಲವಾರು
ಪ್ರಯತ್ನಗಳು ವಿಫಲವಾಗಿ ಹಲವಾರು
ಜೀವಗಳು ಬಲಿಯಾದ್ದರಿಂದ ಈ ಮೊದಲ
ಏರುವಿಕೆಗೆ ಇರುವ ಬೆಲೆ ಅಪಾರ.
ಆದರೆ
ಜಗತ್ತಿನಿಂದ ಹಲವಾರು ಪರ್ವತಾರೋಹಿಗಳು,
ಇತಿಹಾಸಕಾರರು
ಈ ಮಾತು ನಂಬುವುದಿಲ್ಲ.
ಹಲವರ ಪ್ರಕಾರ
ಇಬ್ಬರು ಪರ್ವತಾರೋಹಿಗಳು ೧೯೨೪ರಲ್ಲೇ
ಎವರೆಸ್ಟ್ ನ ತುತ್ತ ತುದಿಗೇರಿದ್ದರು
ಎಂಬ ಬಲವಾದ ನಂಬಿಕೆ. ಆ
ಇಬ್ಬರು ಪರ್ವತಾರೋಹಿಗಳು -
ಜಾರ್ಜ್
ಮ್ಯಾಲೋರಿ ಮತ್ತು ಆಂಡ್ರೂ ಇರ್ವಿನ್.
ಈ ದಂಡಯಾತ್ರೆಯ
ಕಥೆ ಮುಂದೆ ಓದಿ.
ಅದು,
೧೯೨೪.
ಪ್ರಥಮ ಮಹಾ
ಯುದ್ಧದ ನಂತರದ ಕಾಲ. ೧೯೦೯ರಲ್ಲಿ
ಅಮೆರಿಕಾದ ನಾವಿಕರು ಮೊದಲು ಉತ್ತರ
ದ್ರುವಕ್ಕೆ ಹೆಜ್ಜೆ ಇಟ್ಟಮೇಲೆ
೧೯೧೧ ರ ದಕ್ಷಿಣ ದ್ರುವ ಮೊದಲು
ತಲುಪುವ ಗುರಿ ಹೊತ್ತು ಹೋಗಿದ್ದ
ಬ್ರಿಟಿಷ್ ನಾವಿಕರಿಗೆ ತಿಳಿದು
ಬಂದಿದ್ದು ೫ ವಾರಗಳ ಮುಂಚೆಯೇ
ನಾರ್ವೆಯ ನಾವಿಕರು ದಕ್ಷಿಣ ಧ್ರುವ
ಮುಟ್ಟಿ ಪತಾಕೆ ಹಾರಿಸಿದ್ದಾರೆಂದು.
ಇದರಿಂದ
ಅವಮಾನಿತರಾದ ಬ್ರಿಟಿಷ್ ಸಾಮ್ರಾಜ್ಯಕ್ಕೆ
ತುರ್ತಾಗಿ ಏನಾದರೂ ಸಾಧಿಸಲೇ
ಬೇಕಿತ್ತು. ಆಗ
ಅವರ ಕಾಣಿಸಿದ್ದು ಭೂಮಿಯ ಮೂರನೇ
ಧ್ರುವ ಅರ್ಥಾತ್ ಹಿಮಾಲಯ.
ಅದಾಗಲೇ
ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ
ಬ್ರಿಟೀಷರಿಗೆ ಹಿಮಾಲಯದ ತುತ್ತ
ತುದಿ ಅತೀ ಸಮೀಪದಲ್ಲಿತ್ತು.
೧೮೦೨ರಿಂದ
ಭಾರತವನ್ನು ಅಳೆಯ ಹೊರಟ ಬ್ರಿಟೀಷರಿಗೆ
೧೮೫೬ರ ಹೊತ್ತಿಗೆ ಇಲ್ಲೊಂದು
ಪ್ರಪಂಚದ ಅತೀ ಎತ್ತರದ ಪರ್ವತವಿದೆ
ಎಂದು ತಿಳಿದು ಹೋಗಿತ್ತು.
ಸುಮಾರು ೮೮೪೦
ಮೀಟರ್ಗಳಷ್ಟು ಎತ್ತರವಿದೆ ಎಂದು
ಅಂದಾಜು ಮಾಡಿ ಪೀಕ್ XV ಎಂದು
ಹೆಸರಿಟ್ಟಿದ್ದರು. ನಂತರ
ಬ್ರಿಟಿಷ್ ಸರ್ವೇಯರ್ ಜನರಲ್
ಜಾರ್ಜ್ ಎವರೆಸ್ಟ್ ನ ಹೆಸರು
ಇಡಲಾಯ್ತು.
ಅದಾಗಲೇ
ಪಾಶ್ಚಿಮಾತ್ಯರಿಗೆ ಬಾಗಿಲು
ಹಾಕಿಕೊಂಡಿದ್ದ ನೇಪಾಳ ತನ್ನ
ಮೂಲಕ ಎವರೆಸ್ಟ್ ಗೆ ಇದ್ದ ದಾರಿ
ಬಂದುಮಾಡಿ ಕೂತಾಗಿತ್ತು.
ಬ್ರಿಟೀಷರಿಗೆ
ಉಳಿದಿದ್ದ ಏಕೈಕ ದಾರಿ ಚೀನಾದ
ಮೂಲಕ ಎವರೆಸ್ಟ್ ಏರುವುದು.
೧೯೨೧ರಲ್ಲಿ
ಮೊದಲ ಬಾರಿ ಎವರೆಸ್ಟ್ ಗೆ ದಾರಿ
ಹುಡುಕ ಹೊರಟ ಬ್ರಿಟಿಷ್ ತಂಡದಲ್ಲಿ
ಜಾರ್ಜ್ ಮ್ಯಾಲೋರಿ ಕೂಡ ಒಬ್ಬ.
ಸುಮಾರು
ನಾಲ್ಕೈದು ತಿಂಗಳುಗಳ ಕಾಲ ಅಲೆದು
ಸರ್ವೇ ಮಾಡಿ ಎವರೆಸ್ಟ್ ನ ಬುಡ
ತಲುಪಿದ ತಂಡಕ್ಕೆ ನಾರ್ತ್ ಕೊಲ್
ಮೂಲಕ ಎವರೆಸ್ಟ್ ನ ತುದಿ ತಲುಪಬಹುದು
ಎಂದು ಗೊತ್ತಾಗಿತ್ತು
೧೯೨೧
ರ ಸೆಪ್ಟೆಂಬರ್ ೨೪ ರಂದು ನಾರ್ತ್
ಕೊಲ್ ತಲುಪುವ ಮೂಲಕ ಎವರೆಸ್ಟ್
ನ ಮೇಲೆ ಕಾಲಿಟ್ಟ ಮೊದಲ ಮಾನವನಾದ
ಮ್ಯಾಲೋರಿ. ಸಮುದ್ರ
ಮಟ್ಟದಿಂದ ಸುಮಾರು ೭೦೦೦ ಮೀಟರ್ಗಳಷ್ಟು
ಎತ್ತರವಿದ್ದ ನಾರ್ತ್ ಕೊಲ್ ನಲ್ಲಿ
ಕ್ಯಾಂಪ್ ಮಾಡುವುದಿರಲಿ,
ನಿಲ್ಲಲೂ
ಅಸಾಧ್ಯವಾದ ವಾತಾವರಣ.
ಅಲ್ಲಿ ರಾತ್ರಿ
ಕಳೆಯುವುದು ಸಾಧ್ಯವೇ ಇಲ್ಲ ಎಂದು
ಗೊತ್ತಾದಮೇಲೆ ವಾಪಾಸು ಬಂದಿದ್ದ
ಮ್ಯಾಲೋರಿಯ ಚುರುಕು ಕಣ್ಣಿಗೆ
ಅಲ್ಲಿಂದ ಎವರೆಸ್ಟ್ ನ ತುತ್ತತುದಿಗೆ
ದಾರಿ ಕಂಡಿತ್ತು. ಇಲ್ಲಿಂದ
ಎವರೆಸ್ಟ್ ನ ತುದಿ ತಲುಪಲು ಸಾಧ್ಯ
ಎಂದು ಅರಿತ ಮ್ಯಾಲೋರಿ ಮತ್ತು
ತಂಡ ದಾರ್ಜೀಲಿಂಗ್ ಮೂಲಕ ಭಾರತಕ್ಕೆ
ಆಗಮಿಸಿ ಇಂಗ್ಲೆಂಡ್ ತಲುಪಿತ್ತು.
೧೯೨೨ರಲ್ಲಿ
ಮತ್ತೆ ಜತೆಯಾದ ತಂಡದಲ್ಲಿ ಮ್ಯಾಲೋರಿ
ಕೂಡ ಒಬ್ಬ. ಎವರೆಸ್ಟ್
ನ ತುದಿ ತಲುಪಲು ಮಾಡಿದ ಪ್ರಯತ್ನಗಳು
ಮೂರು.
ಮೊದಲ
ಪ್ರಯತ್ನವಾಗಿ ಮ್ಯಾಲೋರಿ,
ನಾರ್ಟನ್,
ಸೋಮೆರ್ವೆಲ್
ಮತ್ತು ಮೊರ್ಶೆಡ್ ನಾರ್ತ್ ಕೊಲ್
ನ ಮೂಲಕ ತುದಿ ತಲುಪುವ ಯತ್ನ.
೭೦೦೦ ಮೀಟರ್
ಗಳ ನಾರ್ತ್ ಕೊಲ್ ತಲುಪಿ,
ಮರುದಿನ ೭೬೦೦
ಮೀಟರ್ ಎತ್ತರಕ್ಕೆ ಏರಿ ಕ್ಯಾಂಪ್
ಹಾಕಿದ ತಂಡ, ಮರುದಿನ
ಏರುವಿಕೆ ಮುಂದುವರೆಸಿತು.
ಸುಸ್ತಾಗಿದ್ದ
ಮೊರ್ಶೆಡ್ ಮುಂದುವರಿಯಲು ಒಪ್ಪದೇ
ಇರಲು, ಮ್ಯಾಲೋರಿ,
ನಾರ್ಟನ್
ಮತ್ತು ಸೋಮರ್ವೆಲ್ ಮುಂದುವರಿದರು.
ಸುಮಾರು ೮೨೨೫
ಮೀಟರ್ ಗಳ ಎತ್ತರ ತಲುಪಿದಾಗ
ಶುರುವಾದ ಹಿಮಪಾತ ಅವರನ್ನು
ಮುಂದುವರಿಯಲು ಬಿಡದೆ,
ನಾರ್ತ್ ಕೊಲ್
ಮೂಲಕ ಬೇಸ್ ತಲುಪಿದರು.
ಅವತ್ತಿನ
ಮಟ್ಟಿಗೆ ೮೨೨೫ ಮೀಟರ್ ಎತ್ತರಕ್ಕೆ
ಏರಿದ್ದು ವಿಶ್ವ ದಾಖಲೆ.
ಕೆಲವೇ
ದಿನಗಳಲ್ಲಿ ಆ ದಾಖಲೆ ಮುರಿದು
ಬಿದ್ದು ಇದೇ ತಂಡ ಹೊಸ ದಾಖಲೆ
ಬರೆಯಿತು. ಈ
ಬಾರಿ ಆಕ್ಸಿಜನ್ ಸಿಲಿಂಡರ್ನೊಂದಿಗೆ
ಪ್ರಯತ್ನ ಆರಂಭಿಸಿದ ತಂಡದಲ್ಲಿ
ಇದ್ದದ್ದು ಫಿಂಚ್, ಬ್ರೂಸ್
ಮತ್ತು ಗುರ್ಖ ಆಫೀಸರ್ ತೇಜಬೀರ್.
ಮೌಂಟ್ ಎವರೆಸ್ಟ್
ನ ಮೇಲೆ ಸುಪ್ಪ್ಲಿಮೆಂಟರಿ ಆಕ್ಸಿಜನ್
ಪ್ರಯೋಗ ನೆದದ್ದು ಇದೇ ಮೊದಲ ಬಾರಿ.
ಆಕ್ಸಿಜನ್
ನ ಸಹಾಯದಿಂದ ೮೩೨೬ ಮೇಟರ್ಗಳ ಎತ್ತರ
ತಲುಪಿದಾಗ ಆಕ್ಸಿಜನ್ ಸಿಲಿಂಡರ್
ನಲ್ಲಿ ಉಂಟಾದ ದೋಷದಿಂದ ವಾಪಸು
ಹೊರಟ ತಂಡ ಹೊಸ ದಾಖಲೆ ಬರೆದಿತ್ತು.
ನಂತರ
ನಡೆದ ಆ ವರ್ಷದ ಕೊನೆಯ ಪ್ರಯತ್ನ
ದುರಂತದಿಂದ ಕೊನೆಗೊಂಡಿದ್ದು
ವಿಪರ್ಯಾಸ. ಹಲವರ
ವಿರೋಧದ ನಡುವೆಯೂ ಕೊಮೆ ಪ್ರಯತ್ನವೆಂಬಂತೆ
ಹೊರಟು ನಿಂತ ತಂಡದಲ್ಲಿ ಇದ್ದದ್ದು
ಮ್ಯಾಲೋರಿ ಮತ್ತು ನಾಲ್ಕು ಇತರ
ಚಾರಣಿಗರು, ೧೪
ಪೋರ್ಟರ್ಗಳು. ಅವಾಲಾಂಚ್
ಗೆ ಸಿಲುಕಿದ ಪೋರ್ಟರ್ಗಳ ತಂಡದಲ್ಲಿದ್ದ
೭ ಪೋರ್ಟರ್ಗಳು ಮರಣ ಹೊಂದಿದರು.
ಅಲ್ಲಿಗೆ
ಮುಂದುವರೆಯದ ಈ ಯಾತ್ರೆ ವಾಪಾಸಾಯ್ತು.
ಎವರೆಸ್ಟ್
ಗೆ ಮೊದಲ ಬಳಿ ಆ ಏಳು ಶೆರ್ಪಾಗಳು
ಅರ್ಥತ್ ಟೈಗರ್ ಗಳು. ಅಲ್ಲಿಗೆ
೧೯೨೨ ರ ಎವರೆಸ್ಟ್ ದಂಡಯಾತ್ರೆ
೮೩೨೬ ಮೀಟರ್ ಗಳ ಎತ್ತರ ತಲುಪಿದ
ದಾಖಲೆಯೊಂದಿಗೆ ಇಂಗ್ಲೆಂಡ್ ಗೆ
ವಾಪಾಸಾಯ್ತು.
೧೯೨೩ರರಲ್ಲಿ
ಮತ್ತೆ ಎವರೆಸ್ಟ್ ಯಾತ್ರೆ ಕೈಗೊಳ್ಳುವ
ಪ್ರಯತ್ನಗಳು ನೆಡೆದರೂ ಸಮಯಕ್ಕೆ
ಸರಿಯಾಗಿ ದುಡ್ಡು ಹೊಂದದಿದ್ದರಿಂದ
ಯಾತ್ರೆಯನ್ನು ಮುಂದಿನ ವರ್ಷಕ್ಕೆ
ಮುಂದೂಡಲಾಯ್ತು.
೧೯೨೪ರಲ್ಲಿ
ಮತ್ತೆ ಎವರೆಸ್ಟ್ ಏರಲು ಹೊರಟ
ತಂಡದಲ್ಲಿ ಮ್ಯಾಲೋರಿ,
ಬ್ರೂಸ್,
ನೋರ್ಟನ್,
ಸೋಮೆರ್ವಿಲ್,
ಫಿಂಚ್ ಜೊತೆ
ಆಂಡ್ರೂ ಇರ್ವಿನ್ ಕೂಡ ಜೊತೆಯಾಗಿದ್ದ.
ಇಂಜಿನಿಯರಿಂಗ್
ವಿದ್ಯಾರ್ಥಿಯಾಗಿದ್ದ ಇರ್ವಿನ್
ಅಪಾರ ಬುದ್ಧಿಮತ್ತೆಯ ತಂತ್ರಜ್ಞ
ಕೂಡ. ತನ್ನ
ಕುಶಲತೆಯಿಂದ ಆಕ್ಸಿಜನ್ ಸಿಲಿಂಡರ್ನ
ತೂಕ ಕಡಿಮೆ ಮಾಡಿ ಹೊರಲು ಅನುಕೂಲ
ಮಾಡಿದ್ದ. ಅದರೊಂದಿಗೆ
ಆಕ್ಸಿಜನ್ ಸರಬರಾಜು ಮಾಡುವ ಉಪಕರಣ
ಹಾಳಾದಲ್ಲಿ ಸರಿಪಡಿಸುವ ಚಾಣಕ್ಯತೆ
ಕೂಡ ಇತ್ತು. ಇದರಿಂದ
ತಂಡ ಸೇರಿಕೊಂಡ ಇರ್ವಿನ್ ಭಾರತಕ್ಕೆ
ಪ್ರಯಾಣಿಸುವಾಗ ಹಡಗಿನಲ್ಲಿ
ಮ್ಯಾಲೋರಿಯ ಜೊತೆ ಸ್ನೇಹ ಸಂಪಾದಿಸಿದ್ದ.
ಮ್ಯಾಲೋರಿಯ
ನಂಬಿಕೆ ಗಳಿಸಿಕೊಂಡಿದ್ದ ಇರ್ವಿನ್
ಮುಂದೆ ಮ್ಯಾಲೋರಿಯೊಂದಿಗೆ
ಎವರೆಸ್ಟ್ ಹತ್ತುವ ಪ್ರಯತ್ನ
ಮಾಡಿದ್ದ. ಆತ
ಪರ್ವತಾರೋಹಿಯಲ್ಲದೆ ಕೇವಲ
ಇಂಜಿನಿಯರ್ ಆಗಿದ್ದರೂ ಮ್ಯಾಲಾರಿಯೊಂದಿಗಿನ
ಸ್ನೇಹ ಅವನನ್ನು ಎವರೆಸ್ಟ್ ತುದಿ
ಏರಲು ಪ್ರಚೋದಿಸಿತ್ತು.
ಮಾರ್ಚ್
೧೯೨೪ರ ಕೊನೆಯ ವಾರದ ಹೊತ್ತಿಗೆ
ಅವನನ್ನು ಡಾರ್ಜೀಲಿಂಗ್ ತಲುಪಿಕೊಂಡ
ತಂಡ ಸಾಮಾನು ಸರಂಜಾಮು,
ಪೋರ್ಟರ್,
ಕತ್ತೆಗಳೊಂದಿಗೆ
ಎವರೆಸ್ಟ್ ನ ದಾರಿ ಹಿಡಿಯಿತು.
ಏಪ್ರಿಲ್
೨೮ಕ್ಕೆ ರೋಂಗ್ಬುಕ್ ಮೊನಾಸ್ಟ್ರಿ
ತಲುಪಿದ ತಂಡ ಮುಂದಿನ ಕ್ಯಾಂಪ್ಗಳ
ತಯಾರಿ ಹಿಡಿಯಿತು. ಸುಮಾರು
೧೫೦ರಷ್ಟು ಇದ್ದ ಪೋರ್ಟರ್ಗಳು
೩ ಕ್ಯಾಂಪ್ಗಳನ್ನು ತಯಾರು ಮಾಡಿದರು.
೫೪೦೦
ಮೀಟರ್ ಗಳಷ್ಟು ಎತ್ತರದಲ್ಲಿ
ರೋಂಗ್ಬುಕ್ ಗ್ಲೇಸಿಯರ್ ನ
ಪೂರ್ವದಲ್ಲಿ ಮೊದಲ ಕ್ಯಾಂಪ್,
ರೋಂಗ್ಬುಕ್ ನಿಂದ ಕಾಣುವ ಎವರೆಸ್ಟ್ ಹಾಗು ನಾರ್ತ್ ಕೊಲ್
೬೦೦೦
ಮೀಟರ್ ಎತ್ತರದಲ್ಲಿ ಇಂಟರ್ಮೆಡಿಯೇಟ್
ಕ್ಯಾಂಪ್, ೬೪೦೦
ಮೀಟರ್ ಗಳ ಎತ್ತರದಲ್ಲಿ ಅಡ್ವಾನ್ಸಡ್
ಬೇಸ್ ಕ್ಯಾಂಪ್. ಸಾಮಾನು
ಸರಂಜಾಮುಗಳೆಲ್ಲ ಈ ಕ್ಯಾಂಪ್
ತಲುಪುವ ವೇಳೆಗೆ ಮೇ ೧೫ ಬಂದಾಗಿತ್ತು.
ರೋಂಗ್ಬುಕ್
ಮೊನಾಸ್ಟ್ರಿಯ ಲಾಮಾರಿಂದ ಆಶೀರ್ವಾದ
ಪಡೆದ ತಂಡ ಮುಂದಡಿಯಿಡಲು ಶುರು
ಮಾಡಿತು.
ಮೇ
೧೯ಕ್ಕೆ ಅಡ್ವಾನ್ಸಡ್ ಬೇಸ್
ಕ್ಯಾಂಪ್ ತಲುಪಿಕೊಂಡ ತಂಡ ನಾರ್ತ್
ಕೊಲ್ ಗೆ ಏರಲು ಸುಲಭವಾಗಲು ಹಗ್ಗ
ಹಣಿಯಲು ಶುರು ಮಾಡಿತು. ಈ
ಬಾರಿ ಕೂಡ ಎವರೆಸ್ಟ್ ಏರಲು ೩
ಪ್ರಯತ್ನ ಮಾಡುವುದೆಂದು ನಿರ್ಧಾರ
ಮಾಡಲಾಯ್ತು.
ಮೊದಲ
ಪ್ರಯತ್ನದಲ್ಲಿ ಮ್ಯಾಲೋರಿ ಮತ್ತು
ಬ್ರೂಸ್, ಎರಡನೇ
ಪ್ರಯತ್ನದಲ್ಲಿ ಸೋಮೆರ್ವಿಲ್
ಮತ್ತು ನಾರ್ಟನ್. ಮೂರನೇ
ತಂಡ ಮೀಸಲಾಗಿಯೂ, ಟೆಕ್ನಿಕಲ್
ಹೆಲ್ಪರ್ ಗಳಾಗಿಯೂ ಇರುವುದೆಂದು
ತೀರ್ಮಾನವಾಯ್ತು. ಓಡೆಲ್
ಮತ್ತು ಇರ್ವಿನ್ ಮೂರನ ತಂಡದಲ್ಲಿ
ಇದ್ದರು.
ಮೊದಲ
ಪ್ರಯತ್ನಕ್ಕೆ ಹೊರಟ ಮ್ಯಾಲೋರಿ
ಮತ್ತು ಬ್ರೂಸ್ ೮೧೭೦ ಮೇಟರ್ಗಳ
ಎತ್ತರ ತಲುಪಿ ಕ್ಯಾಂಪ್ ಹಾಕಿದರು.
ಪೋರ್ಟರ್ಗಳ
ಮುಂದುವರೆಯಲು ನಿರಾಕರಿಸಿದ್ದರಿಂದ
ಮುಂದುವರಿಯಲಾರದೆ ಹಿಂದಿರುಗಿದ
ಮ್ಯಾಲೋರಿ ಮತ್ತು ಬ್ರೂಸ್ ಗೆ
ಎದುರಾದದ್ದು ೨ನೆ ಪ್ರಯತ್ನಕ್ಕೆ
ಹೊರಟಿದ್ದ ನೋರ್ಟನ್ ಹಾಗು
ಸೋಮೆರ್ವಿಲ್.
೮೧೭೦
ಮೇಟರ್ಗಳ ಕ್ಯಾಂಪ್ ದಾಟಿ ಮುಂದುವರಿದ
ನಾರ್ಟನ್ ಹಾಗು ಸೋಮೆರ್ವಿಲ್
ಇನ್ನೂ ೨೦೦ ಮೀಟರ್ಗಳಷ್ಟು ಎತ್ತರ
ಏರಿದ್ದಾಗ ಸುಸ್ತಾಗಿ ಕುಳಿತ
ಸೋಮೆರ್ವಿಲ್. ಏಕಾಂಗಿಯಾಗಿ
ಮುಂದುವರಿದ ನಾರ್ಟನ್ ೮೫೭೦
ಮೀಟರ್ಗಳ ಎತ್ತರ ತಲುಪಿದ.
ಅತ್ಯಂತ
ಕಡಿದಾಗಿದ್ದ ಪರ್ವತ ಏರಲು
ಅಸಾಧ್ಯವಾದ್ದರಿಂದ ಹಿಂದಿರುಗಿದ.
ಅಂದು ಅವನು
ಏರಿದ ೮೫೭೦ ಮೀಟರ್ ಗಳ ಎತ್ತರ ೨೭
ವರ್ಷಗಳ ಕಾಲ ದಾಖಲೆಯಾಗಿಯೇ
ಉಳಿಯಿತು. ಅವನು
ಹಿಂದಿರುಗಿದ ಆ ಕಡಿದಾದ ಪ್ರದೇಶ
'ನಾರ್ಟನ್
ಕುಲೋಯ್ರ್' ಅಥವಾ
'ನಾರ್ಟನ್
ಗಲ್ಲಿ'ಎಂದೇ
ಹೆಸರು ಪಡೆಯಿತು.
ಇಲ್ಲಿಂದ
ಹಿಂದಿರುಗಿದ ನಾರ್ಟನ್ ಹಾಗು
ಸೋಮೆರ್ವಿಲ್ ಅಡ್ವಾನ್ಸ್ ಬೇಸ್
ಕ್ಯಾಂಪ್ ತಲುಪಿಕೊಂಡರು.
ಜಾರ್ಜ್ ಮ್ಯಾಲೋರಿ ಹಾಗು ಆಂಡ್ರೂ ಇರ್ವಿನ್
ಕೊನೆಯ
ಪ್ರಯತ್ನವಾಗಿ ಮ್ಯಾಲೋರಿ ಮತ್ತು
ಇರ್ವಿನ್ ಎವರೆಸ್ಟ್ ತುತ್ತ
ತುದಿಗೇರಲು ಪ್ರಯತ್ನಿಸುವುದಾಗಿ
ಮ್ಯಾಲೋರಿ ನಿರ್ಧರಿಸಿದ.
ಯಾತ್ರೆಯ
ಲೀಡರ್ ಆಗಿದ್ದ ನಾರ್ಟನ್ನ ಬಳಿ
ಈ ನಿರ್ಧಾರ ಹೇಳಿ ಜೂನ್ ೬ರಂದು
ಎವರೆಸ್ಟ್ ಏರಲು ತೀರ್ಮಾನ ಕೈಗೊಂಡರು.
ಪರ್ವತಾರೋಹಿಯಾಗಿರದೆ
ಕೆಲವ ಇಂಜಿನಿಯರ್ ಆಗಿದ್ದ ಇರ್ವಿನ್
ನ ಜೊತೆಗೆ ಕರೆದೊಯ್ಯಲು ಮ್ಯಾಲೋರಿಯ
ನಿರ್ಧಾರ ಇರ್ವಿನ್ ಗೆ ಆಕ್ಸಿಜನ್
ಉಪಕರಣಗಳ ಮೇಲಿದ್ದ ಅಪಾರ ಕುಶಲತೆಯೇ
ಕಾರಣ. ಭಾರತಕ್ಕೆ
ಬರುವಾಗ ಹಡಗಿನಲ್ಲಿ ಬೆಳೆದ ಗಾಢ
ಗೆಳೆತನ ಹಾಗೂ ನಂಬುಗೆಯೇ ಕಾರಣವಿದ್ದರೂ
ಇರಬಹುದು.
೮೧೭೦
ಮೀಟರ್ ಗಳ ಕ್ಯಾಂಪ್ ೬ ರಿಂದ ಹೊರಡುವ
ಹಿಂದಿನ ದಿನ ನೋಯೆಲ್ಗೆ ಒಂದು
ಲೆಟರ್ ಬರೆದು ಕಳಿಸಿದ್ದ ಮ್ಯಾಲೋರಿ
ಜೂನ್ ೭ ರ ಬೆಳಗ್ಗೆ ೮ ಗಂಟೆಯ
ಸುಮಾರಿಗೆ ಎವರೆಸ್ಟ್ ತುದಿಯ
ಕೆಳಗಿನ ಹಳದಿ ಪಟ್ಟಿಯ ಬಳಿ ಅವರು
ಕಾಣುವುದಾಗಿ ಹೇಳಿ ಕ್ಯಾಮೆರಾದಲ್ಲಿ
ಅವರನ್ನು ಸೆರೆಹಿಡಿಯಲು ಹೇಳಿದ್ದ.
ಅಂತೆಯೇ
ಜೂನ್ ೭ ರಂದು ಬೆಳಗ್ಗೆ ಕ್ಯಾಂಪ್
೩ ರಲ್ಲಿ ಟೆಲಿಸ್ಕೋಪ್ ಹಾಗು
ಕ್ಯಾಮೆರಾ ಹಿಡಿದು ಕುಳಿತ ನೋಯೆಲ್
ಗೆ ಮ್ಯಾಲೋರಿ ಹಾಗು ಇರ್ವಿನ್
ಕಾಣಲೇ ಇಲ್ಲ. ೧೦
ಗಂಟೆಯವರೆಗೂ ಕಾದು ಕುಳಿತ ನೋಯೆಲ್
ಕೊನೆಗೆ ಕ್ಯಾಂಪ್ ೩ ಕ್ಕೆ ಹಿಂದಿರುಗಿದ.
ಇದೇ
ವೇಳೆಗೆ ಕ್ಯಾಂಪ್ ೬ಕ್ಕೆ ಸರ್ವೇಗಾಗಿ
ಹೊರಟಿದ್ದ ಓಡೆಲ್ ಹಳೆಯ ಪಳೆಯುಳಿಕೆಗಾಗಿ
ಹುಡುಕಾಟ ನೆಡೆಸಿದ್ದ.
ಸುಮಾರು ೭೯೦೦
ಮೀಟರ್ಗಳಷ್ಟು ಹತ್ತಿ ನಿಂತು
ನೋಡಿದಾಗ ಮೇಲೆ ಸೆಕೆಂಡ್ ಸ್ಟೆಪ್
ಬಳಿ ಎರಡು ಕಪ್ಪು ಚುಕ್ಕೆ ಮೇಲೇರುತ್ತಾ
ಇರುವುದು ಕಂಡಿತು. ಅದು
ದೂರದಲ್ಲಿ ಏರುತ್ತಿರುವ ಮ್ಯಾಲೋರಿ
ಹಾಗು ಇರ್ವಿನ್ ಎಂದು ಭಾವಿಸಿದ
ಓಡೆಲ್ ಹಾಗೆಯೇ ಡೈರಿಯಲ್ಲಿ
ಬರೆದುಕೊಂಡ. ಕ್ಯಾಂಪ್
೬ಕ್ಕೆ ಹಿಂದಿರುಗಿ ಮ್ಯಾಲೋರಿ
ಹಾಗು ಇರ್ವಿನ್ ಬರುವಿಕೆಗಾಗಿ
ಕಾದು ಕುಳಿತ. ಸಂಜೆ
೬ ಗಂಟೆ ಆದರೂ ಅವರು ಬರದಿರಲು
ಕ್ಯಾಂಪ್ ೪ಕ್ಕೆ ವಾಪಸ್ಸು ಬಂದ
ಓಡೆಲ್.
ಮ್ಯಾಲೋರಿ ಹಾಗು ತಂಡ ಬಳಸಿದ್ದ ದಾರಿ
ಮರುದಿನ
ಕ್ಯಾಂಪ್ ೫ ರಲ್ಲಿ ಹಾಗು ಜೂನ್
೯ರೆಂದು ಕ್ಯಾಂಪ್ ೬ ರಲ್ಲಿ
ಹುಡುಕಾಡಿದರೂ ಮ್ಯಾಲೋರಿ ಹಾಗು
ಇರ್ವಿನ್ ನ ಪತ್ತೆ ಇಲ್ಲದಿರಲು
ಕ್ಯಾಂಪ್ ೩ ಕ್ಕೆ ಸಂಜ್ಞೆಯ ಮೂಲಕ
ಇವರಿಬ್ಬರೂ ಕಳೆದು ಹೋದ ಸುದ್ದಿ
ಮುಟ್ಟಿಸಿ ವಾಪಸು ಹಿಂದಿರುಗಿದರು.
ಮ್ಯಾಲೋರಿ
ಹಾಗು ಇರ್ವಿನ್ ನ ದುರಂತದಿಂದ
ಇಂಗ್ಲೆಂಡ್ ಗೆ ಹಿಂದಿರುಗಿದ ತಂಡ
ಮ್ಯಾಲೋರಿ ಹಾಗು ಇರ್ವಿನ್ ಎವರೆಸ್ಟ್
ನ ತುತ್ತ ತುದಿ ಮುಟ್ಟಿದ್ದರೆಂದು
ಪತ್ರಿಕೆ ಸುದ್ದಿ ಕಳಿಸಿತು.
ಮ್ಯಾಲೋರಿಯ
ಅನುಭವ, ಇರ್ವಿನ್
ನ ತಂತ್ರಗಾರಿಕೆ, ಓಡೆಲ್
ನೋಡಿದನೆಂದು ಹೇಳಲಾದ ಅವರಿಬ್ಬರರೂ
ಕೊನೆಯ ಬಾರಿ ಕಂಡ ಸ್ಥಳ ಹಾಗು ಸಮಯ
ಇವರ ವಾದಕ್ಕೆ ಪುಷ್ಟಿ ಒದಗಿಸಿತು.
೧೯೩೩ರರಲ್ಲಿ
ಎವರೆಸ್ಟ್ ಏರಲು ಹೊರಟ ಬ್ರಿಟಿಷ್
ತಂಡಕ್ಕೆ ೮೫೬೦ ಮೀಟರ್ಗಳ ಎತ್ತರದಲ್ಲಿ
ಮ್ಯಾಲೋರಿಯ ಐಸ್ ಏಕ್ಸ್ ದೊರಕಿತು.
ಅದು ಬಿದ್ದಿದ್ದ
ಜಾಗ ನೆಡೆದಿದ್ದ ದುರಂತದ ಕಥೆ
ಹೇಳುತ್ತಿತ್ತು. ಆದರೂ
ಮ್ಯಾಲೋರಿ ಹಾಗು ಇರ್ವಿನ್ ರ ದೇಹ
ಪತ್ತೆಯಾಗಲೇ ಇಲ್ಲ.
ಮುಂದೆ
೧೯೭೫ರ ವರೆಗೂ ಇವರಿಬ್ಬರ ಬಗ್ಗೆ
ಯಾವುದೇ ಸುದ್ದಿ ಇರಲಿಲ.
೧೯೭೫ರಲ್ಲಿ
ಎವರೆಸ್ಟ್ ಏರಲು ಹೋದ ಚೈನೀಸ್
ತಂಡಕ್ಕೆ ಯಾವುದೋ ಬ್ರಿಟಿಷ್
ಪರ್ವತಾರೋಹಿಯ ದೇಹ ಕಂಡಿತು.
ಈ ಸುದ್ದಿ
ಕೇಳಿದ ಬ್ರಿಟಿಷ್ ಪರ್ವತಾರೋಹಿಗಳ
ತಂಡ ೧೯೮೬ರಲ್ಲಿ ಮ್ಯಾಲೋರಿ ಹಾಗು
ಇರ್ವಿನ್ ರ ದೇಹ ಹುಡುಕಲು ಹೊರಟಿತು.
ಆದರೆ ಕೆಟ್ಟ
ವಾತಾವರಣದ ಪರಿಣಾಮ ಅವರಿಗೆ
ಮುಂದುವರಿಯಲು ಸಾಧ್ಯವಾಗಲಿಲ್ಲ.
೧೯೯೧ರಲ್ಲಿ
ಎವರೆಸ್ಟ್ ಏರಿದ ಸಿಮ್ಮೊನ್ಸ್
ಗೆ ೮೫೬೦ ಮೀಟರ್ ಗಳ ಎತ್ತರದಲ್ಲಿ
ಮ್ಯಾಲೋರಿಯ ಆಕ್ಸಿಜನ್ ಸಿಲಿಂಡರ್
ದೊರಕಿತ್ತು. ೧೯೯೯
ರಲ್ಲಿ ಇರ್ವಿನ್ ನ ಆಕ್ಸಿಜನ್
ಸಿಲಿಂಡರ್ ಕೂಡ ಅಲ್ಲೇ ದೊರಕಿ
ಅವರಿಬ್ಬರೂ ಆ ಎತ್ತರಕ್ಕೆ ಏರಿದ್ದು
ಖಾತ್ರಿಯಾಯ್ತು.
ಆದರೂ
ಜಗತ್ತು ಅವರಿಬ್ಬರೂ ಎವರೆಸ್ಟ್
ಏರಿದ್ದಾರೆಂದು ಒಪ್ಪಲು ತಯಾರಿರಲಿಲ್ಲ.
ಓಡೆಲ್ ಹಾಗು
ನಾರ್ಟನ್ ಹೇಳಿಕೆ ನಂಬಿದರೂ ಅವರ
ಮಾತನ್ನು ಪುಷ್ಟೀಕರಿಸಲು ಯಾವುದೇ
ಪುರಾವೆಗಳಿರಲಿಲ್ಲ.
ಇದರಿಂದ
೧೯೯೯ರ ಮ್ಯಾಲೋರಿ ಹಾಗು ಇರ್ವಿನ್
ಸಂಶೋಧನಾ ಯಾತ್ರೆ ಬಹಳ ಮಹತ್ವ
ಪಡೆದಿತ್ತು. ಸಿಮ್ಮೊನ್ಡ್ಸ್
ಹಾಗು ತಂಡ ಸುಮಾರು ೮೧೫೦ ಮೇಟರ್ಗಳ
ಎತ್ತರದಲ್ಲಿ ಮ್ಯಾಲೋರಿಯ ದೇಹ
ಹುಡುಕಿ ತೆಗೆಯಿತು. ಶೀತಲ
ವಾತಾವರಣಕ್ಕೆ ಒಳಪಟ್ಟು ಸಂರಕ್ಷಿತ
ಸ್ಥಿತಿಯಲ್ಲಿದ್ದ ದೇಹ ಪತ್ತೆಯಾಯ್ತು.
ಬಲಗಾಲು
ಸಂಪೂರ್ಣ ಮುರಿದ ಸ್ಥಿತಿಯಲ್ಲೂ,
ತಲೆ ಬುರುಡೆಯಲ್ಲಿ
ಕಾಸಗಲದ ಗಾಯವೂ ಪತ್ತೆಯಾಯ್ತು.
ಮ್ಯಾಲೋರಿ
ಹಾಕಿದ್ದ ಸ್ವೆಟರ್ ನ ಮೇಲೆ ಅವನ
ಹೆಸರು ಬರೆದಿದ್ದರಿಂದ ಅದು ಅವನದೇ
ದೇಹವೆಂದು ಖಾತ್ರಿಯಾಯ್ತು.
ಅವನ ಸೊಂಟಕ್ಕೆ
ಕಟ್ಟಕೊಂಡ ಹಗ್ಗ ಇರ್ವಿನ್ ನೊಂದಿಗೆ
ಒಟ್ಟಿಗೆ ಆರೋಹಣ ಮಾಡುತ್ತಿದ್ದ
ಅಂಶ ದೃಢಪಡಿಸಿತು. ಆದರೆ
ಹಗ್ಗ ತುಂಡಾದ ಸ್ಥಿತಿಯಲ್ಲಿದ್ದರಿಂದ
ಇರ್ವಿನ್ ನ ದೇಹ ಎಲ್ಲಿರಬಹುದೆಂಬ
ಕುರುಹೂ ಕೂಡ ಸಿಗಲಿಲ್ಲ.
ಇಂದಿಗೂ
ಸಿಕ್ಕಿಲ್ಲ ಕೂಡ.
ಶೈತ್ಯಿಕೃತ ಸ್ಥಿತಿಯಲ್ಲಿ ದೊರಕಿದ ಮ್ಯಾಲೋರಿಯ ದೇಹ
ಅವರು
ಎವರೆಸ್ಟ್ ತುದಿ ಮುಟ್ಟಿದ್ದರೆಂದು
ದೃಢಪಡಿಸುವ ಏಕೈಕ ಸಾಧನ ಇರ್ವಿನ್
ನ ಬಳಿ ಇದ್ದ ಕ್ಯಾಮೆರಾ.
ಅದೊಂದು
ಪತ್ತೆಯಾದರೆ ಹಲವಾರು ಪ್ರಶ್ನೆಗಳಿಗೆ
ಉತ್ತರ ಸಿಗುತ್ತದೆ. ಇರ್ವಿನ್
ನ ಆಕ್ಸಿಜನ್ ಸಿಲಿಂಡರ್ ದೊರಕಿದ್ದು
ಬಿಟ್ಟರೆ ಬೇರೆ ಏನು ಪತ್ತೆಯಾಗೇ
ಇಲ್ಲ. ಆ
ಕ್ಯಾಮೆರಾ ಸಿಗುವವರೆಗೂ,
ಎವರೆಸ್ಟ್
ಮೊದಲು ಏರಿದ ಕೀರ್ತಿ ಎಡ್ಮಂಡ್
ಹಿಲ್ಲರಿ ಹಾಗು ತೇನ್ಸಿಂಗ್ ನೋರ್ಗೆ
ಗೆ ಸಲ್ಲುತ್ತದೆ.
ಆದರೂ
ಮ್ಯಾಲೋರಿ ಹಾಗು ಇರ್ವಿನ್ ತುದಿ
ತಲುಪಿದ್ದರು ಎನ್ನಲು ಇರುವ ಒಂದೇ
ಒಂದು ಕುರುಹು, ಮ್ಯಾಲೋರಿಯ
ಕಿಸೆಯಲ್ಲಿದರ ಆತನ ಹೆಂಡತಿಯ
ಚಿತ್ರಪಟ. ಯಾತ್ರೆಯ
ಪ್ರತಿ ಕ್ಷಣವೂ ಆಕೆಯ ಚಿತ್ರವನ್ನು
ಜಾಕೆಟ್ ನ ಕಿಸೆಯಲ್ಲಿ ಇಟ್ಟುಕೊಂಡು
ಓಡಾಡಿದ್ದ ಮ್ಯಾಲೋರಿ ಅದನ್ನು
ಎವರೆಸ್ಟ್ ನ ತುದಿಯಲ್ಲಿ ಇಡಲು
ಬಯಸಿದ್ದ. ಆತ
ಭದ್ರವಾಗಿ ಇಟ್ಟುಕೊಂಡಿದ್ದ ಆ
ಚಿತ್ರ ಜಾಕೆಟ್ ನ ಒಳಗಿಂದ ಮಾಯವಾಗಿದ್ದು
ಎಲ್ಲಿ? ಹಾಗಾದರೆ
ಅವನು ಆ ಚಿತ್ರವನ್ನು ಎವರೆಸ್ಟ್
ನ ಶಿಖರದಲ್ಲಿ ಇಟ್ಟು ಬಂದಿರಬೇಕು.
ವರ್ಷಕ್ಕೆ
ಸುಮಾರು ೬೦೦ ಜನ ಹತ್ತಿ ಇಳಿಯುವ
ಎವರೆಸ್ಟ್ ಈಗಲೂ ಕೂಡ ಆಧುನಿಕ
ಉಪಕರಣಗಳ ಉಪಯೋಗ ಮಾಡಿ ಕೂಡ
ಕಠಿಣಾತಿಕಠಿಣ ಪರ್ವತಾರೋಹಣಗಳಲ್ಲೊಂದು.
೯೦ ವರ್ಷಗಳ
ಹಿಂದೆಯೇ ಯಾವುದೇ ಉಪಕರಣಗಳಿಲ್ಲದೆ
ಸರಿಯಾದ ಬಟ್ಟೆಗಳಿಲ್ಲದೆ ಹವಾಮಾನದ
ಮುನ್ಸೂಚನೆಗಳಿಲ್ಲದೆ ಮ್ಯಾಲೋರಿ
ಹಾಗು ಇರ್ವಿನ್ ಎವರೆಸ್ಟ್ ನ ತುದಿ
ಮುಟ್ಟಿದ್ದೆ ಆದರೆ ಅದು ಮನುಕುಲದ
ಹೆಮ್ಮೆಯ ಕ್ಷಣಗಳಲ್ಲೊಂದು.
ಹಾಂ,
ಚೀನಾ ೧೯೫೦
ರಲ್ಲಿ ಟಿಬೆಟ್ ಆಕ್ರಮಿಸಿಕೊಂಡಮೇಲೆ
ಎವರೆಸ್ಟ್ ಗೆ ಉತ್ತರದ ದಾರಿ
ಮುಚ್ಚಿ ಹೋಯಿತು. ಆಗ
ನೇಪಾಳ ಎಲ್ಲ ಪಾಶ್ಚಿಮಾತ್ಯರಿಗೆ
ತನ್ನ ಬಾಗಿಲು ತೆರೆಯಿತು.
ಇದಾದ ಮೂರ್
ವರ್ಷಗಳಲ್ಲಿ ಸೌತ್ ಕೊಲ್ ಮೂಲಕ ಎಡ್ಮಂಡ್ ಹಿಲ್ಲರಿ ಹಾಗು ತೇನ್ಸಿಂಗ್
ನೋರ್ಗೆ ಎವರೆಸ್ಟ್ ನ ತುತ್ತತುದಿ
ತಲುಪಿ ದಾಖಲೆ ಬರೆದರು.
೧೯೨೨
ರ ಅವಾಲಾಂಚ್ನಿಂದ ಪ್ರಾಣ ಕಳೆದುಕೊಂಡ
೭ ಶೆರ್ಪಾ ಗಳಿಂದ ಶುರುವಾದಾ ಮರಣ
ಮೃದಂಗ ಇಲ್ಲಿಯವರೆಗೂ ಎವರೆಸ್ಟ್
ನ ಮೇಲೆ ೨೮೮ ಜೀವ ಸೆಳೆದುಕೊಂಡಿದೆ.
ಎವರೆಸ್ಟ್
ಏರುವುದಿರಲಿ, ಒಮ್ಮೆಯಾದರೂ
ಎವರೆಸ್ಟ್ ನ ಕೆಳಗೆ ನಿಂತು ಅದನ್ನು
ಕಣ್ಣುತುಂಬಿಕೊಳ್ಳುವ ಆಸೆ ನನ್ನದು.
-
ಸಶೇಷ





Super.. idella gottirlilla... information siktu ivaga
ReplyDelete