ಶರಾವತಿ ನದಿ ಕರ್ನಾಟಕದ ಜೀವ ನದಿಗಳಲ್ಲೊಂದು, ನೀರಾವರಿ, ಮೀನುಗಾರಿಕೆಗಿಂತ ವಿಶಾಲ ಕರ್ನಾಟಕಕ್ಕೆ ವಿದ್ಯುತ್ ಸರಬರಾಜು ಮಾಡುವ ಹಲವಾರು ಜಲವಿದ್ಯುತ್ ಯೋಜನಗಳಿಗೆ ಮೂಲ ಈ ಶರಾವತಿ ನದಿ. ಬಹುಶಃ ಜಲವಿದ್ಯುತ್ ಉತ್ಪಾದನೆಗಾಗಿಯೇ ನಿರ್ಮಿಸಿದ ಹಲವಾರು ದೊಡ್ಡ ಆಣೆಕಟ್ಟೆಗಳಿಗೆ ಮೂಲ ಈ ಶರಾವತಿ.
ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಉಕ್ಕುವ ಶರಾವತಿಯ ಹುಟ್ಟಿನ ಹಿಂದೆ ಒಂದು ಕಥೆಯೇ ಇದೆ. ಸೀತೆಯ ಬಾಯಾರಿಕೆ ತಣಿಸಲು ರಾಮ ಹೂಡಿದ ಬಾಣ ಅರ್ಥಾತ್ ಶರದಿಂದ ಹುಟ್ಟಿದ ಚಿಲುಮೆ ಈ ಶರಾವತಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಜಿಲ್ಲೆಯ ಮೂಲಕ ಹರಿದು ಗೇರುಸೊಪ್ಪೆಯ ಬಳಿ ಉತ್ತರ ಕನ್ನಡ ಜಿಲ್ಲೆಯ ಪ್ರವೇಶ ಮಾಡುವ ಶರಾವತಿ ಸಮುದ್ರ ಸೇರುವುದು ಹೊನ್ನಾವರದ ಬಳಿ. ವಿಶ್ವ ವಿಖ್ಯಾತ ಜೋಗ ಜಲಪಾತದ ಕಾರಣಕರ್ತೆಈ ಶರಾವತಿ.
ಜೋಗದಲ್ಲಿ ೮೩೦ ಅಡಿಗಳಷ್ಟು ಎತ್ತರದಿಂದ ಧುಮುಕುವ ಶರಾವತಿ ಭಾರತದ ಎತ್ತರದ ಸಿಂಗಲ್ ಡ್ರಾಪ್ ಜಲಪಾತ. ಮಳೆಗಾಲದಲ್ಲಿ ಜೋಗದ ವೈಭವ ಪದಗಳಿಗೆ ನಿಲುಕದ್ದು.
ಶರಾವತಿಯ ಪಾತ್ರದ ತುಂಬಾ ತಲೆ ಎತ್ತಿರುವ ಜಲವಿದ್ಯುದಾಗರಗಳು ೩. ಲಿಂಗನಮಕ್ಕಿ ಜಲಾಶಯದ ಘಟಕ, ಜೋಗದ ಉತ್ಪಾದನಾ ಘಟಕ, ಗೇರುಸೊಪ್ಪದ ಉತ್ಪಾದನಾ ಘಟಕ. ಒಟ್ಟು ಉತ್ಪಾದನೆಯಾಗುವ ವಿದ್ಯುತ್ ೧೩೪೦ ಮೆಗಾ ವಾಟ್. ಜೋಗದ ಉತ್ಪಾದನಾ ಘಟಕದ್ದು ಉತ್ಪಾದನೆಯಲ್ಲಿ ಮೇಲುಗೈ. ೧೦೩೫ ಮೆಗಾ ವಾಟ್ ಗಳಷ್ಟು ವಿದ್ಯುತ್ ಉತ್ಪಾದಿಸುವಜೋಗದ ಮಹಾತ್ಮ ಗಾಂಧಿ ವಿದ್ಯುದಾಗರ ಜಲಪಾತದ ಕೆಳಗೆ ಇರುವಂಥದ್ದು.
ಕೇವಲ ೧೨೮ ಕಿಲೋಮೀಟರ್ ಹರಿಯುವ ಈ ನದಿಯಲ್ಲಿ ವರ್ಷಪೂರ್ತಿ ವಿದ್ಯುತ್ ಉತ್ಪಾದನೆ ಹೇಗೆ ಸಾಧ್ಯ? ಅದೂ ಕೇವಲ ಮಳೆಗಾದಲ್ಲಿ ತುಂಬಿ ಹರಿಯುವ ನದಿ ಬೇಸಿಯಲ್ಲಿ ಬರಡು. ಇದಕ್ಕೆಂದೇ ೧೯೪೮ರಲ್ಲಿ ಶರಾವತಿಯ ಉಪನದಿಯಾದ ಎಣ್ಣೆಹೊಳೆಗೆ ಮಡೆನೂರು ಬಳಿಯಲ್ಲಿ ಕಟ್ಟಿದ ಜಲಾಶಯ - ಮಡೆನೂರು ಡ್ಯಾಮ್. ಜೋಗದಿಂದ ೨೦ ಕಿಲೋಮೆಟೆರ್‌ಗಳಷ್ಟು ಹಿಂದೆ ಇದ್ದ ಈ ಜಲಪಾತದ ಏಕೈಕ ಉದ್ದೇಶ ಜೋಗದ ಜಲವಿದ್ಯುದಾಗರಕ್ಕೆ ಸ್ಥಿರವಾದ ನೀರು ಪೊರೈಕೆ.
ನೀರು ಸಾಲದಾದಾಗ ಸರಕಾರ ನಿರ್ಮಿಸಲು ಮುಂದಾದದ್ದು ಲಿಂಗನಮಕ್ಕಿ ಜಲಾಶಯ. ಜೋಗದಿಂದ ಕೇವಲ ೨-೩ ಕಿಲೋಮೆಟೆರ್‌ಗಳಷ್ಟು ಹಿಂದಿದ್ದ ಲಿಂಗನಮಕ್ಕಿ ಊರಿನ ಬಳಿ ಶರಾವತಿ ನದಿಗೆ ನಿರ್ಮಿಸಿದ ಈ ಜಲಾಶಯ ಆಪೋಶನ ತೆಗೆದುಕೊಂಡಿದ್ದು ಅಪಾರ ಭೂಮಿ, ಕಾಡು, ಬೆಟ್ಟ ಗುಡ್ಡ ಮತ್ತು ವನ್ಯ ಸಂಪತ್ತನ್ನು. ಸಮುದ್ರ ಮಟ್ಟದಿಂದ ೧೮೧೯ ಅಡಿಗಳಷ್ಟು ಎತ್ತರದ ಈ ಜಲಾಶಯ ಮುಳುಗಿಸಿದ್ದು ಸುಮಾರು ೩೦೦ ಚದರ ಕಿಲೋಮೀಟರ್ಗಳಷ್ಟು ಭೂಮಿ ಹಾಗೂ ಸಾವಿರಾರು ಜನರ ಬದುಕು. ಮಲೆನಾಡಿನಲ್ಲೇ ಹುಟ್ಟಿ ಬೆಳೆದು ಬಯಲು ಸೀಮೆಗೆ ಗುಳೆಹೊದವರೆಷ್ಟೋ.
ಎಲ್ಲ ೧೧ ಕ್ರಸ್ಟ್ ಗೇಟ್ ತೆರೆದು ನೀರು ಬಿಟ್ಟಾಗ ಜೋಗದಲ್ಲಿ ಉಂಟಾಗುವ ಪ್ರವಾಹ, ಆ ಕೆಂಪು ನೀರಿನ ಭೀಭತ್ಸ ನೋಟ ನಯನ ಮನೋಹರ. ೨೦೧೪ರ ನಂತರ ಲಿಂಗನಮಕ್ಕಿ ಪೂರ್ತಿಯಾಗಿ ನೀರು ಬಿಟ್ಟಿಲ್ಲ.
ಹಾಂ, ಇಂದಿಗೂ ಬಿರುಬೇಸಿಗೆಯಲ್ಲಿ ಲಿಂಗನಮಕ್ಕಿಯ ನೀರು ಇಳಿದಾಗ ನೀರಿನೊಳಗಿನಿಂದ ಮಡೆನೂರು ಜಲಾಶಯ ಎದ್ದು ಬರುತ್ತದೆ. ಆಗಿಂದ ಸೈಫನ್ ಸಿಸ್ಟಮ್ನಲ್ಲಿ ಕಟ್ಟಿದ ಈ ಜಲಾಶಯ ಅದೊಂದು ವಿಸ್ಮಯ. ಯಾವುದೇ ಕ್ರಸ್ಟ್ ಗೇಟ್ ಗಳಿಲ್ಲದೆ ಕೇವಲ ನೀರಿನ ಚಲನ ಶಕ್ತಿಯಿಂದ ಜಲಾಶಯದ ನೀರು ಹೊರಬಿಡುತ್ತಿದ್ದ ಆ ತಂತ್ರಜ್ಞಾನ ಅದೆಷ್ಟು ಸುಂದರ. ಮುಳುಗಿದ ಊರು, ಸಂತೆಮಾಳ ಮುಳುಗಿಹೋದ ಬದುಕಿನ ಕಥೆ ಹೇಳುತ್ತವೆ.
ಮುಂದೆ ಈ ನೀರು ಸಾಲದಾದಾಗ ಕಟ್ಟಿದ ಜಲಾಶಯಗಳು ಮೂರು. ಚಕ್ರ ನದಿಗೆ ಅಡ್ಡಲಾಗಿ ಚಕ್ರ ಜಲಾಶಯ, ಸಾವೇಹಕ್ಳುವಿನ ಹೊಳೆಗೆ ಸಾವೇಹಕ್ಲು ಜಲಾಶಯ ಹಾಗೂ ವಾರಾಹಿ ನದಿಗೆ ಅಡ್ಡಲಾಗಿ ಮಾಣಿ ಜಲಾಶಯ. ಇಂದು ಈ ಮೂರು ಜಲಾಶಯಗಳು ಲಿಂಗನಮಕ್ಕಿಯ ಬ್ಯಾಲೆನ್ಸಿಂಗ್ ಜಲಾಶಯಗಳು ಅರ್ಥಾತ್ ಬೇರೆ ದಿಕ್ಕಿಗೆ ಹರಿಯುತ್ತಿದ್ದ ನೀರನ್ನು ತಡೆದು ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ ಲಿಂಗನಮಕ್ಕಿ ಸೇರುವಂತೆ ಮಾಡಿ ಅಲ್ಲಿನ ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ಈ ಜಲಾಶಯಗಳ ಪಾತ್ರ ಬಲು ದೊಡ್ಡದು.
ಶರಾವತಿಯ ಮೇಲ್ಹರಿವಿನಲ್ಲಿ ಜೋಗದ ಬಳಿ ಇರುವ ಮತ್ತೊಂದು ಜಲಾಶಯ ತಲಕಳಲೆ. ಲಿಂಗನಮಕ್ಕಿಯಿಂದ ಭೂಮಿಯ ಆಳದಲ್ಲಿ ಸುರಂಗ ಕೊರೆದು ಗುಪ್ತಗಾಮಿನಿಯಾಗಿ ಹರಿಯುವಂತೆ ಮಾಡಿ ಶರಾವತಿ ತಲಕಳಲೆ ಸೇರುತ್ತಾಳೆ. ಅಲ್ಲಿಂದ ಮುಂದೆ ಜೋಗದ ವ್ದ್ಯೂತ್ ಉತ್ಪಾದನಾ ಘಟಕಕ್ಕೆ ಹರಿದು ಅಲ್ಲಿಂದ ಮುಂದೆ ಕಣಿವೆಯ ಮೂಲಕ ಗೇರುಸೊಪ್ಪದ ವಿದ್ಯುತ್ ಉತ್ಪಾದನಾ ಘಟಕ.
ಒಟ್ಟಿನಲ್ಲಿ ತನ್ನಪಾಡಿಗೆ ತಾನು ಹರಿಯುತ್ತಿದ್ದ ಎಣ್ಣೆಹೊಳೆ, ಶರಾವತಿ, ಚಕ್ರ, ವಾರಾಹಿ, ಸವೆಹಕ್ಲು ನದಿಗಳಿಗೆ ಅಡ್ಡ ನಿಂತು ನಮ್ಮ ಅಗತ್ಯ ಪೂರೈಸಿಕೊಳ್ಳುತ್ತಿದ್ದೇವೆ. ಇದರಿಂದ ನಷ್ಟವಾದ ಭೂಮಿ, ವನ್ಯ ಸಂಪತ್ತು, ಅರಣ್ಯ ಸಂಪತ್ತು, ಜನರ ಬದುಕು ಎಂದಾದರೂ ಸರಿಯಾದೀತೆ?
ಶರಾವತಿ ಕಣಿವೆ

ಲಿಂಗನಮಕ್ಕಿಯ ೧೧ ಗೇಟ್ ತೆಗೆದು ೫೦೦೦೦ ಕ್ಯೂಸೆಕ್ ನೀರು ಬಿಟ್ಟಾಗಿನ ದೃಶ್ಯ
ಹಾಂ, ಇಂದಿಗೂ ಬಿರುಬೇಸಿಗೆಯಲ್ಲಿ ಲಿಂಗನಮಕ್ಕಿಯ ನೀರು ಇಳಿದಾಗ ನೀರಿನೊಳಗಿನಿಂದ ಮಡೆನೂರು ಜಲಾಶಯ ಎದ್ದು ಬರುತ್ತದೆ. ಆಗಿಂದ ಸೈಫನ್ ಸಿಸ್ಟಮ್ನಲ್ಲಿ ಕಟ್ಟಿದ ಈ ಜಲಾಶಯ ಅದೊಂದು ವಿಸ್ಮಯ. ಯಾವುದೇ ಕ್ರಸ್ಟ್ ಗೇಟ್ ಗಳಿಲ್ಲದೆ ಕೇವಲ ನೀರಿನ ಚಲನ ಶಕ್ತಿಯಿಂದ ಜಲಾಶಯದ ನೀರು ಹೊರಬಿಡುತ್ತಿದ್ದ ಆ ತಂತ್ರಜ್ಞಾನ ಅದೆಷ್ಟು ಸುಂದರ. ಮುಳುಗಿದ ಊರು, ಸಂತೆಮಾಳ ಮುಳುಗಿಹೋದ ಬದುಕಿನ ಕಥೆ ಹೇಳುತ್ತವೆ.
ಮುಂದೆ ಈ ನೀರು ಸಾಲದಾದಾಗ ಕಟ್ಟಿದ ಜಲಾಶಯಗಳು ಮೂರು. ಚಕ್ರ ನದಿಗೆ ಅಡ್ಡಲಾಗಿ ಚಕ್ರ ಜಲಾಶಯ, ಸಾವೇಹಕ್ಳುವಿನ ಹೊಳೆಗೆ ಸಾವೇಹಕ್ಲು ಜಲಾಶಯ ಹಾಗೂ ವಾರಾಹಿ ನದಿಗೆ ಅಡ್ಡಲಾಗಿ ಮಾಣಿ ಜಲಾಶಯ. ಇಂದು ಈ ಮೂರು ಜಲಾಶಯಗಳು ಲಿಂಗನಮಕ್ಕಿಯ ಬ್ಯಾಲೆನ್ಸಿಂಗ್ ಜಲಾಶಯಗಳು ಅರ್ಥಾತ್ ಬೇರೆ ದಿಕ್ಕಿಗೆ ಹರಿಯುತ್ತಿದ್ದ ನೀರನ್ನು ತಡೆದು ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ ಲಿಂಗನಮಕ್ಕಿ ಸೇರುವಂತೆ ಮಾಡಿ ಅಲ್ಲಿನ ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ಈ ಜಲಾಶಯಗಳ ಪಾತ್ರ ಬಲು ದೊಡ್ಡದು.
ಚಕ್ರ ಜಲಾಶಯ
ಸಾವೇಹಕ್ಲು ಜಲಾಶಯ
ಶರಾವತಿಯ ಮೇಲ್ಹರಿವಿನಲ್ಲಿ ಜೋಗದ ಬಳಿ ಇರುವ ಮತ್ತೊಂದು ಜಲಾಶಯ ತಲಕಳಲೆ. ಲಿಂಗನಮಕ್ಕಿಯಿಂದ ಭೂಮಿಯ ಆಳದಲ್ಲಿ ಸುರಂಗ ಕೊರೆದು ಗುಪ್ತಗಾಮಿನಿಯಾಗಿ ಹರಿಯುವಂತೆ ಮಾಡಿ ಶರಾವತಿ ತಲಕಳಲೆ ಸೇರುತ್ತಾಳೆ. ಅಲ್ಲಿಂದ ಮುಂದೆ ಜೋಗದ ವ್ದ್ಯೂತ್ ಉತ್ಪಾದನಾ ಘಟಕಕ್ಕೆ ಹರಿದು ಅಲ್ಲಿಂದ ಮುಂದೆ ಕಣಿವೆಯ ಮೂಲಕ ಗೇರುಸೊಪ್ಪದ ವಿದ್ಯುತ್ ಉತ್ಪಾದನಾ ಘಟಕ.
ತಲಕಳಲೆ ಜಲಾಶಯ
ಒಟ್ಟಿನಲ್ಲಿ ತನ್ನಪಾಡಿಗೆ ತಾನು ಹರಿಯುತ್ತಿದ್ದ ಎಣ್ಣೆಹೊಳೆ, ಶರಾವತಿ, ಚಕ್ರ, ವಾರಾಹಿ, ಸವೆಹಕ್ಲು ನದಿಗಳಿಗೆ ಅಡ್ಡ ನಿಂತು ನಮ್ಮ ಅಗತ್ಯ ಪೂರೈಸಿಕೊಳ್ಳುತ್ತಿದ್ದೇವೆ. ಇದರಿಂದ ನಷ್ಟವಾದ ಭೂಮಿ, ವನ್ಯ ಸಂಪತ್ತು, ಅರಣ್ಯ ಸಂಪತ್ತು, ಜನರ ಬದುಕು ಎಂದಾದರೂ ಸರಿಯಾದೀತೆ?

Comments
Post a Comment