ಮೊನ್ನೆತಾನೇ
ನನ್ನೂರು ಹಾಲ್ಮುತ್ತೂರಿನ ಬಗ್ಗೆ
ಬರೆದಿದ್ದೆ. ಈ
ನನ್ನೂರು ಅನ್ನೋದು ಒಂದು ಥರ
ವಿಚಿತ್ರ ಪ್ರಶ್ನೆ. ಯಾವುದು
ನನ್ನೂರು? ನಾನು
ಹುಟ್ಟಿದ ಊರಾ? ಅಪ್ಪನ
ಊರಾ? ಅಮ್ಮನ
ಊರಾ? ನಾ
ಬೆಳೆದ ಊರಾ? ಅಥವಾ
ನಾ ಬದುಕುವ ಊರಾ? ಈ
ಪ್ರಶ್ನೆಗೆ ಉತ್ತರ ಹುಡುಕಿದಷ್ಟು
ಗೊಂದಲದ ಗೂಡಾಗುವುದು ಸಹಜ.
ನನಗೆ ಬುದ್ದಿ
ತಿಳಿದಾಗಿಲಿಂದ ಯಾರಾದರೂ ಈ
ಪ್ರಶ್ನೆ ನನ್ನೆಡೆಗೆ ಎಸೆದರೆ
ಗಲಿಬಿಲಿಗೊಳಗಾಗುತ್ತೇನೆ.
ಆದರೂ ಸಾವರಿಸಿಕೊಂಡು
ಅಪ್ಪನ ಊರಾದ ಹಾಲ್ಮುತ್ತೂರೆ
ನನ್ನೂರು ಎಂದು ಹೇಳುವುದು ರೂಢಿ.
ಎಷ್ಟಾದರೂ
ನಮ್ಮದು ಪುರುಷ ಪ್ರಧಾನ ಸಮಾಜವಲ್ಲವೇ?
ಅಪ್ಪನ ಹೆಸರು,
ಅಪ್ಪನ ಗೋತ್ರ,
ಅಪ್ಪನ ಆಸ್ತಿ
ಕೊನೆಗೆ ಅಪ್ಪನ ಊರು ಕೂಡ.
ಇದರ ಜೊತೆ ಇನ್ನೊಂದು ಕೊಂಕಿದೆ. ನನ್ನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರೋ ಕೊಟ್ಟದಮನೆ ಎಂಬ ಊರು ಎಲ್ಲಿದೆಯೋ, ಹೇಗಿದೆಯೋ ಕಂಡವರಾರು. ೧೫೦ ವರ್ಷದ ಹಿಂದೆ ಹಿರೀಕರು ಬಿಟ್ಟು ಬಂದ ಊರು ಕೊಟ್ಟದಮನೆ. ಹೆಸರೊಂದು ಬಿಟ್ಟು ಬೇರೆ ಏನು ಗೊತ್ತಿಲ್ಲ. ಅದೇ ನನ್ನೂರಾ?
ಇರಲಿ, ಮಾತು ಎಲ್ಲೆಲ್ಲಿಗೋ ಹೊಯ್ತು. ಈಗ ಹೇಳಹೊರಟಿರುವುದು ನನ್ನ ಅಮ್ಮನ ಊರಾದ ಸಿದ್ದಾಪುರದ ಬಗ್ಗೆ. ಇಲ್ಲಿ ಕೂಡ ಮತ್ತದೇ ಪ್ರಶ್ನೆ. ಅಮ್ಮ ಹುಟ್ಟಿ ಬೆಳೆದಿದ್ದು ಕುಂದಾಪುರ ತಾಲ್ಲೂಕಿನ ಶಂಕರಣರಾಯಣದಲ್ಲಿ. ಕೆಲ ಕಾಲವಾದಮೇಲೆ ಇದ್ದ ತೋಟ "ಉಳುವವನೇ ಹೊಲದೊಡೆಯ" ಕಾನೂನಿನ ಪ್ರಕಾರ ಅಲ್ಲಿಯ ಜನರ ಪಾಲಾಗಿ ಅದೇ ಊರಿಂದ ಕೊಂಚ ಮುಂದೆ ಇದ್ದ ಸಿದ್ದಾಪುರದ ಬಳಿ ಕಾಡು ಕೊಂಡು ತೋಟ ಮಾಡಿದ್ರು. ಆಮೇಲೆ ಅಮ್ಮ ಬೆಳೆದಿದ್ದೆಲ್ಲ ಸಿದ್ದಾಪುರದಲ್ಲಿ. ಮದುವೆ ಆದಮೇಲೆ ಇದ್ದಿದ್ದು ಹಾಲ್ಮುತ್ತೂರು. ಕೊನೆಗೆ ಈಗ ಇರೋದು ಬೆಂಗಳೂರು. ಇಲ್ಲಿ ಅಮ್ಮನ ಊರು ಯಾವುದು? ಶಂಕರನಾರಾಯಣವೋ ? ಸಿದ್ಧಾಪುರವೋ? ಹಾಲ್ಮುತ್ತೂರೋ ಅಥವಾ ಬೆಂಗಳೂರೋ? ಅಮ್ಮನಿಗೆ ಈ ಪ್ರಶ್ನೆ ಕೇಳಿದರೆ ಗಲಿಬಿಲಿಗೊಳಗಾಗುವುದು ಖಂಡಿತ. ಆದರೂ ಅವರಮ್ಮ ಅಂದರೆ ನನ್ನ ಅಜ್ಜಿ ಈಗ ಇರೋದು ಸಿದ್ಧಾಪುರವಾದ್ದರಿಂದ ಅವರೂರು ಸಿದ್ದಾಪುರ. ಹಾಗಾಗಿ ನನ್ನಜ್ಜನ ಊರು ಸಿದ್ದಾಪುರ.

ಸಿದ್ದಾಪುರ
ಉಡುಪಿ ಜಿಲ್ಲೆಯ ಕುಂದಾಪುರ
ತಾಲೂಕಿನ ಒಂದು ಗ್ರಾಮ.
ತೀರ್ಥಹಳ್ಳಿ
ಹೊಸನಗರದಿಂದ ಹುಲಿಕಲ್ಲಿನಿಂದ
ಬಾಳೆಬರೆ ಘಾಟಿ ಇಳಿದು ಏಳೆಂಟು
ಮೈಲು ಸಾಗಿದರೆ ಸಿಗುವ ಊರೇ
ಸಿದ್ದಾಪುರ. ಘಟ್ಟದಿಂದ
ಹರಿದು ಬರುವ ವಾರಾಹಿ ನದಿಗೆ
ಆಣೆಕಟ್ಟು ಕಟ್ಟಿ ವಿದ್ಯುತ್
ಉತ್ಪಾದನೆ ಮಾಡುವ ಸ್ಥಳಕ್ಕೆ
ಹೋಗುವ ದಾರಿ ಇರೋದು ಸಿದ್ದಾಪುರದಲ್ಲಿ.
ಅಜ್ಜನ ಮನೆ
ಎದುರು ನಿಂತರೆ ವಿಶಾಲವಾದ ಪಶ್ಚಿಮ
ಘಟ್ಟಗಳ ದೃಶ್ಯ ನಯನ ಮನೋಹರ.
ಮುಂದೆ
ಸಿದ್ದಾಪುರದಲ್ಲಿ ಕವಲಾಗುವ ದಾರಿ
ಒಂದು ಕುಂದಾಪುರಕ್ಕೂ ಇನ್ನೊಂದು
ಉಡುಪಿಗೂ ಹೋಗುತ್ತೆ.
ಆಗೆಲ್ಲ
ಹಾಲ್ಮುತ್ತೂರಿಂದ ಬರಬೇಕು ಅಂದ್ರೆ
ಅರ್ಧ ದಿನದ ಪ್ರಯಾಸ. ನಾನು
ಆಗೆಲ್ಲ ಎಂಬ ಪದ ಪ್ರಯೋಗಿಸಿದಾಗೆಲ್ಲ
ನೀವು ನಾನು ಬಹಳ ಹಿರಿಯನೆಂದು
ಭಾವಿಸಿರಬೇಕು. ಇದೆಲ್ಲ
ಸುಮಾರು ೧೫ ವರ್ಷದ ಹಿಂದಿನ ಕಥೆ
ಅಷ್ಟೇ. ಇರಲಿ,
ಹಾಲ್ಮುತ್ತೂರಿನಿಂದ
ಬೆಳಗ್ಗೆ ಹೊರಟು ಶಿವಶಂಕರ್ ಬಸ್
ಹತ್ತಿ ತೀರ್ಥಹಳ್ಳಿಗೆ ಬಂದು
ಅಲ್ಲಿ ಅತ್ತೆ ಮನೆಯಲ್ಲಿ ಕಾಲ
ಕಳೆದು, ಆಮೇಲೆ
ಮಧ್ಯಾಹ್ನ ಚಿತ್ರದುರ್ಗದಿಂದ
ಬರುತ್ತಿದ್ದ S.J.M.S ಬಸ್ಸಿಗೆ
ಕಾದು ರಶ್ ಅಲ್ಲಿ ಸೀಟು ಹಿಡಿದು
ಸಿದ್ದಾಪುರಕ್ಕೆ ಹೋಗೋದು ಹರ
ಸಾಹಸ. ಈ
ಬಸ್ಸು ಇಲ್ಲ ಅಂದ್ರೆ ದಿನಕ್ಕೆ
ಮೂರೋ ನಾಲ್ಕೋ ಇದ್ದ ದುರ್ಗಾಂಬ
ಬಸ್ಸಲ್ಲಿ ಹೋಗ್ಬೇಕಿತ್ತು.
S.J.M.S ಬಸ್ಸಿಗೆ
ಸೂಪರ್ ಜಬ್ಬು ಹರಕ ಮೋಟಾರ್ ಸರ್ವಿಸ್
ಅಂತ ಕರೆಯೋಷ್ಟು ನಿಧಾನ ಆ ಬಸ್.
ನಿಲ್ಲಲೂ
ಕೂರಲೂ ಜಾಗವಿಲ್ಲದ ಆ ಬಸ್ಸುಗಳಲ್ಲಿ
ನೇತಾಡಿಕೊಂಡು ಹಾಗೂ ಹೀಗೂ ಊರು
ತಲುಪುತ್ತಿದ್ವಿ. ದಾರ್
ಮಧ್ಯೆ ಸಿಗೋ ಬಾಳೆಬರೆ ಘಾಟಿ,
ಅಲ್ಲಿನ
ದೇವಸ್ಥಾನ, ಹಲವಾರು
ಜಲಪಾತಗಳು ದಾರಿಯ ಪ್ರಯಾಣದ ನೋವನ್ನ
ಮರೆಸುತ್ತಿದ್ವು.
ಘಟ್ಟ
ಇಳಿದ ಹಾಗೆ ಮೈಯಿಂದ ಬೆವರು ಕಿತ್ತು
ಬರಲು ಶುರುವಾಗುತ್ತಿತ್ತು.
ಸೆಕೆ ತಡೆಯಲಾರದೆ
ನಲ್ಲಿಯ ಕೆಳಗೆ ಕೂರುತ್ತಿದ್ದದ್ದು
ನೆನಪಿದೆ. ಇಲ್ಲವಾದರೆ
ಅಣ್ಣನ ಜೊತೆಗೂಡಿ ನೀರಿನ ತೊಟ್ಟಿಗೆ
ಹಾರುತ್ತಿದ್ದದ್ದು ನೆನಪಿದೆ.
ಸೆಕೆ ತಡೆಯಲಾರದೆ
ಅತ್ತಿದ್ದೂ ಉಂಟು.
ಅಜ್ಜನ
ಮನೆ ಊಟ ಅಂದ್ರೆ ಅದೊಂದು ಕಾವ್ಯ.
ಅಜ್ಜನೆ ಕಸೆ
ಕಟ್ಟುತ್ತಿದ್ದ ಮಾವಿನ ಮರದ ಹಣ್ಣಿನ
ಸಾಸಿವೆ, ಗಂಜಿ,
ಅಮಟೆ ಚಟ್ನಿ.
ನನ್ನಜ್ಜನಿಗೆ
ಪ್ರತಿದಿನ ಮಾವಿನ ಹಣ್ಣಿನ ಸಾಸಿವೆ
ಬೇಕೇ ಬೇಕು. ಮಾವಿನ
ಕಾಲದಲ್ಲಿ ಒಂದು ದಿನ ತಪ್ಪಿಸಿದ್ದು
ನನಗೆ ನೆನಪಿಲ್ಲ.
ಅಜ್ಜನ
ಮನೆ ಬರುವ ಕೊಂಚ ಮುಂಚೆ ಒಂದು
ಹಲಸಿನ ಮರವಿತ್ತು. ಕಾಲು
ದಾರಿಯ ಮಧ್ಯದಲ್ಲಿದ್ದ ಆ ಮರದ
ಬುಡದಲ್ಲಿ ನಾನು, ಅಣ್ಣ,
ಸುಧೀರ,
ಶುಭ ಕೂತು ಆಟ
ಆಡುತ್ತಿದ್ದ ನೆನಪು ಇನ್ನೂ ಹಾಗೆ
ಉಳಿದಿದೆ. ಈಗ
ಹಲಸಿನ ಮರೆವೇನೋ ಹಾಗೆ ಇದೆ,
ಆದರೆ ಆ ಕಾಲು
ದಾರಿ ಬದಲಾಗಿ ಮೋಟಾರು ದಾರಿ ಇದೆ.
ದಾರಿಯ ಮಧ್ಯವಿದ್ದ
ಹಲಸಿನ ಮರ ಒಂದು ಬದಿಗೆ ಸರಿದು
ನಿಂತಿದೆ.
ಅಜ್ಜನ
ಮನೇ ಬಳಿ ಇದ್ದ ಮಾಬ್ಲ ಶೆಟ್ಟರ
ಮನೆ ಈಗಲೂ ಹಾಗೆ ಇದೆ. ಆಗ
ಇದ್ದದ್ದು ಮೂರೇ ಮನೆ. ಈಗ
ಸುಮಾರು ಹನ್ನೆರಡು ಮನೆ ಆಗಿವೆ.
ಮಾಬ್ಲ ಶೆಟ್ಟರ
ಅಮ್ಮ ಗಂಗಜ್ಜಿ ಗಟ್ಟಿಗಿತ್ತಿ.
ಕೆದರಿದ ಬಿಳಿ
ಕೂದಲು ಉದುರಿದ ಹಲ್ಲು ಹರುಕಾದ
ಬಟ್ಟೆ ಒಂಟಿ ಗುಡಿಸಲಲ್ಲಿ ಒಬ್ಬಳೇ
ವಾಸ, ಊಟಕ್ಕೆ
ಗಂಜಿ ಮೆಣಸಿನ ಪುಡಿ.
ಒಟ್ಟಿನಲ್ಲಿ
ಕಾಡು ಮನುಷ್ಯರ ರೀತಿ ಬದುಕುತ್ತಿದ್ದ
ಗಂಗಜ್ಜಿಗೆ ಗಂಗೂ ರಾಕ್ಷಸಿ ಅಂತ
ಕರೆಯುತಿದ್ವಿ. ಈಗ
ಎಲ್ಲಿದ್ದಾಳೋ ಕೇಳಬೇಕು.
ಇಂದು
ಬೆಳಗ್ಗೆ ಬಸ್ಸಿಳಿದು ಅಜ್ಜನ
ಮನೆಗೆ ನೆಡೆದು ಕೊಂಡು ಬಂದಾಗ
ನೆನಪುಗಳ ಸರಮಾಲೆಯೇ ನನ್ನನ್ನಾವರಿಸಿ
ಕಣ್ಣಲ್ಲಿ ನೀರು ತುಳುಕಿತು.
ಹೇಗಿದ್ದ
ಸಿದ್ದಾಪುರ ಹೇಗಾಗಿದೆ,
ಅಂದು ಆಡಿ
ನಲಿದಾಡಿಯ ಜಾಗ ಬದಲಾಗಿ ನೆನಪುಗಳು
ಮಾತ್ರ ಉಳಿದಿವೆ. ಬಹುಷಃ
ನಮ್ಮ ಮುಂದಿನ ಪೀಳಿಗೆಗೆ ಈ ನೆನಪುಗಳ
ಕಟ್ಟಿಕೊಳ್ಳಲು ಕೂಡ ಅವಕಾಶವಿಲ್ಲ.
ಮುಂದಿನ ಪೀಳಿಗೆ ? ಮೊದ್ಲು ಮದುವೆ ಮಾಡ್ಕೋ.... 😂😂😂😂
ReplyDelete