ನಮಗೆಲ್ಲ
ತಿಳಿದಿರುವಂತೆ ಪ್ರತಿದಿನವೂ
ಜಗತ್ತಿನ ಒಂದಿಲ್ಲೊಂದು ಕಡೆ
ಭೂಕಂಪ ಸಂಭವಿಸುತ್ತಲೇ ಇರುತ್ತದೆ.
ರಿಕ್ಟರ್
ಮಾಪಕದಲ್ಲಿ ೧ ರಿಂದ ೫ರ ವರೆಗಿನ
ಭೂಕಂಪಗಳು ಸರ್ವೇ ಸಾಮಾನ್ಯ.
೪ ಮ್ಯಾಗ್ನಿಟ್ಯೂಡ್
ಕಿಂತ ಕೆಳಗಿನ ಭೂಕಂಪಗಳು ಮನುಷ್ಯನ
ಅನುಭಕ್ಕೆ ಬರುವುದೇ ಇಲ್ಲ.
ಒಂದು ಲೆಕ್ಕದ ಪ್ರಕಾರ ಒಂದು ವರ್ಷದಲ್ಲಿ ಜರುಗುವ ಭೂಕಂಪಗಳು ಸುಮಾರು ೧೪೦೦೦. ಅಂದರೆ ದಿನಕ್ಕೆ ಸುಮಾರು ೪೦ ಭೂಕಂಪನಗಳು. ಅದರಲ್ಲಿ ಶೇಕಡಾ ೯೮% ಭೂಕಂಪಗಳು ಮನುಷ್ಯನ ಅರಿವಿಗೆ ಬರುವುದೇ ಇಲ್ಲ.
ಭೂಕಂಪನ ಹಾಗೂ ಜ್ವಾಲಾಮುಖಿಗಳು ಪರಸ್ಪರ ಒಂದಕ್ಕೊಂದು ಬೆಸೆದುಕೊಂಡಿವೆ. ಎಲ್ಲೆಲ್ಲಿ ಜ್ವಾಲಾಮುಖಿಗಳಿವೆಯೋ ಅಲ್ಲೆಲ್ಲ ಭೂಕಂಪನ ಸರ್ವೇ ಸಾಮಾನ್ಯ. ಈ ಭೂಕಂಪನ ಹಾಗೂ ಜ್ವಾಲಾಮುಖಿಗಳಿಗೆ ಮುಖ್ಯ ಕಾರಣ ಭೂಮಿ ರೂಪುಗೊಂಡಿರುವ ರೀತಿ. ನಮ್ಮ ಭೂಮಿಯ ಮೇಲ್ಮೈ ಹಲವಾರು ಪ್ಲೇಟ್ಗಳಿಂದ ಮಾಡಲ್ಪಟ್ಟಿದೆ.
ಒಂದು ಲೆಕ್ಕದ ಪ್ರಕಾರ ಒಂದು ವರ್ಷದಲ್ಲಿ ಜರುಗುವ ಭೂಕಂಪಗಳು ಸುಮಾರು ೧೪೦೦೦. ಅಂದರೆ ದಿನಕ್ಕೆ ಸುಮಾರು ೪೦ ಭೂಕಂಪನಗಳು. ಅದರಲ್ಲಿ ಶೇಕಡಾ ೯೮% ಭೂಕಂಪಗಳು ಮನುಷ್ಯನ ಅರಿವಿಗೆ ಬರುವುದೇ ಇಲ್ಲ.
ಭೂಕಂಪನ ಹಾಗೂ ಜ್ವಾಲಾಮುಖಿಗಳು ಪರಸ್ಪರ ಒಂದಕ್ಕೊಂದು ಬೆಸೆದುಕೊಂಡಿವೆ. ಎಲ್ಲೆಲ್ಲಿ ಜ್ವಾಲಾಮುಖಿಗಳಿವೆಯೋ ಅಲ್ಲೆಲ್ಲ ಭೂಕಂಪನ ಸರ್ವೇ ಸಾಮಾನ್ಯ. ಈ ಭೂಕಂಪನ ಹಾಗೂ ಜ್ವಾಲಾಮುಖಿಗಳಿಗೆ ಮುಖ್ಯ ಕಾರಣ ಭೂಮಿ ರೂಪುಗೊಂಡಿರುವ ರೀತಿ. ನಮ್ಮ ಭೂಮಿಯ ಮೇಲ್ಮೈ ಹಲವಾರು ಪ್ಲೇಟ್ಗಳಿಂದ ಮಾಡಲ್ಪಟ್ಟಿದೆ.
ಭೂಮಿಯ
ಮೇಲ್ಮೈ ಸುಮಾರು ೭ ದೊಡ್ಡ ಹಾಗೂ
ಹಲವಾರು ಸಣ್ಣ ಸಣ್ಣ ಟೆಕ್ಟೊನಿಕ್
ಪ್ಲೇಟ್ಗಳಿಂದ ರೂಪುಗೊಂಡಿದೆ,
ನಾವು ನೆಡೆದಾಡುವ
ಈ ಭೂ ಖಂಡಗಳು ಇದೇ ಟೆಕ್ಟೊನಿಕ್
ಪ್ಲೇಟ್ಗಳ ಹೊರಪದರ. ಖಂಡಗಳಷ್ಟೆ
ಅಲ್ಲ, ಸಾಗರಗಳು
ಕೂಡ ಟೆಕ್ಟೊನಿಕ್ ಪ್ಲೇಟ್ ಗಳೇ.
ಈ ಪ್ಲೇಟ್ಗಳ
ನಿರಂತರ ಚಲನೆಯೇ ಭೂಕಂಪನ ಹಾಗೂ
ಜ್ವಾಲಾಮುಖಿಗಳಿಗೆ ಕಾರಣ.
ಈ
ಪ್ಲೇಟ್ಗಳ ಚಲನೆಯಿಂದಲೇ ಹಿಮಾಲಯ
ರೂಪುಗೊಂಡಿದ್ದು ಎಂದರೆ ಹೌಹಾರಬೇಡಿ.
ಒಂದಾನೊಂದು
ಕಾಲದಲ್ಲಿ ಒಟ್ಟಿಗಿದ್ದ ಭಾರತ,
ಆಫ್ರಿಕ ಹಾಗೂ
ಆಸ್ಟ್ರೇಲಿಯಾ ಭೂಖಂಡಗಳು ಒಂದಕ್ಕೊಂದು
ಬೇರೆಯಾಗಿ ಚಲಿಸಿ ಭಾರತ ಭೂಖಂಡ
ಉತ್ತರದಲ್ಲಿದ್ದ ಲಾರೇಶಿಯಾ
ಭೂಖಂಡಕ್ಕೆ ಢಿಕ್ಕಿ ಹೊಡೆದು,
ಅಗಾಧ ಶಕ್ತಿಯೊಂದಿಗೆ
ಲಾರೇಶಿಯಾದ ಕೆಳಗೆ ನುಸಿಯತೊಡಗಿದಾಗ
ರೂಪುಗೊಂಡಿದ್ದೇ ಹಿಮಾಲಯ ಪರ್ವತಗಳು.
ಒಂದಾನೊಂದು
ಕಾಲದಲ್ಲಿ ಭೂಮಿಯಮೇಲೆ ಮೆರೆದಾಡಿದ
ಡೈನೋಸಾರ್ಗಳ ಅವನತಿಗೂ ಈ ಪ್ಲೇಟ್ಗಳ
ಚಲನೆಯೇ ಕಾರಣ ಅಂತ ಒಂದು ಥಿಯರೀ
ಕೂಡ ಇದೆ.
ಆ
ಥಿಯರೀಯ ಪ್ರಕಾರ ಗೊಂಡ್ವಾನ ಸೂಪರ್ ಕಾಂಟಿನೆಂಟ್ ನಿಂದ ಬೇರ್ಪಟ್ಟ ಉತ್ತರಾಭಿಮುಖವಾಗಿ
ಚಲಿಸುತ್ತಿದ್ದ ಭಾರತದ ಭೂಖಂಡ
ಇಂದಿನ ಮ್ಯಾಡಗಾಸ್ಕರ್ ಸಮೀಪದ
ರೀಯೂನಿಯನ್ ದ್ವೀಪಗಳ ಸಮೀಪ
ಭೂಅಂತರಾಳದಲ್ಲಿ ಹುದುಗಿ ಕುಳಿತಿದ್ದ
ಅಪಾರ ಪ್ರಮಾಣದ ಲಾವಾದ ಮೇಲೆ ಚಲಿಸಿ
ಉಂಟಾದ ಒತ್ತಡದಿಂದ ಸುಮಾರು ೫
ಮಿಲಿಯನ್ ವರ್ಷಗಳ ಕಾಲ ಸ್ಪೋಟಿಸಿದ
ಲಾವಾ ಇಂದಿನ ಪಶ್ಚಿಮಘಟ್ಟಗಳ
ಮೂಲ. ಈ
ನಿರಂತರ ಸ್ಪೋಟ, ಲಾವಾದ
ಉಗುಳುವಿಕೆಯಿಂದ ಉಂಟಾದ ಬಿಸಿ,
ಹೊಗೆ ಮತ್ತು
ಹವಾಮಾನ ಬದಲಾವಣೆ ದೈತ್ಯ ಡೈನೋಸಾರ್ಗಳ
ಅವನತಿಗೆ ನಾಂದಿ ಹಾಡಿತು.
ಅದಿರಲಿ,
ಈಗ ಮುಖ್ಯ
ವಿಷಯಕ್ಕೆ ಬರೋಣ. ಭೂಕಂಪದ
ಬಗ್ಗೆ ಹೇಳ ಹೊರಟಿದ್ದೆ.
ಹಾಂ,
ಪೆಸಿಫಿಕ್
ಸಾಗರದ ತೀರಗಳು ಜಗತ್ತಿನ ೯೦%
ಭೂಕಂಪನಗಳಿಗೆ
ಮತ್ತು ೭೫% ಜ್ವಾಲಾಮುಖಿಗಳಿಗೆ
ಮನೆ. ಇಲ್ಲಿ
ಮನೆಮಾಡಿರುವ ಒಟ್ಟೂ ಆಕ್ಟಿವ್
ಜ್ವಾಲಾಮುಖಿಗಳು ೪೫೨.
ಜಗತ್ತಿನೆಲ್ಲೆಡೆ
ನೆಡೆಯುವ ೮೧% ಅಗಾಧ
ಭೂಕಂಪನಗಳು ನೆಡೆಯೋದೆ ಈ ಪೆಸಿಫಿಕ್
ಸಾಗರದ ತೀರಗಳಲ್ಲಿ. ಪೆಸಿಫಿಕ್
ಸಾಗರದ ಒಂದು ಮೂಲೆಯಲ್ಲಿರುವ
ಜಪಾನ್ ಪ್ರಪಂಚದ ಒಟ್ಟೂ
ಜ್ವಾಲಾಮುಖಿಗಳಲ್ಲಿ ೧೦%
ಜ್ವಾಲಾಮುಖಿಗಳ
ತವರು.
ಈ
ಭೂಕಂಪ ಹಾಗೂ ಜ್ವಾಲಾಮುಖಿಗಳ
ಕಾರಣಕ್ಕಾಗಿಯೇ ಪೆಸಿಫಿಕ್ ಸಾಗರದ
ತೀರಗಳ ಈ ಮುಕ್ಕಾಲು ಚಂದ್ರಾಕೃತಿಯ
ಭಾಗಕ್ಕೆ ರಿಂಗ್ ಆಫ್ ಫೈಯರ್ ಎಂದು
ಹೆಸರು.
ಇಂಡೊನೇಷಿಯಾದ
ಕ್ರಕಟೋವ ಜ್ವಾಲಾಮುಖಿಯ ೧೮೮೩ರ
ಸಿಡಿತ ವಿಶ್ವ ವಿಖ್ಯಾತ.
ಸುಮಾರು ೪೦೦೦೦
ಸಾವಿರ ಜನರ ಮರಣಕ್ಕೆ ಕಾರಣವಾದ
ಈ ವಿಸ್ಪೋಟ ಅದಿನ್ನೆಷ್ಟು ಪ್ರಾಣಿ
ಪಕ್ಷಿಗಳ ಬಲಿ ಪಡೆದಿರಬಹುದು.
ಈ ಜ್ವಾಲಾಮುಖಿಯ
ವಿಸ್ಪೋಟದಿಂದ ಉಂಟಾದ ಶಬ್ಧದ
ತರಂಗಗಳು ಹಲವಾರು ಬಾರಿ ಭೂಮಿಯ
ಸುತ್ತಿ ಪ್ರಪಂಚದ ವಿವಿದೆಡೆ
ಸ್ಪೋಟದ ಅನುಭವವಾಗಿತ್ತಂತೆ.
ಈ ಸ್ಪೋಟದಿಂದ
ಎದ್ದ ಧೂಳು ಸೂರ್ಯನನ್ನು ಮುಚ್ಚಿ
ಭೂಮಿಯ ತಾಪಮಾನ ಸುಮಾರು ೧.೨
ಡಿಗ್ರೀಯಷ್ಟು ಕಡಿಮೆ ಮಾಡಿತ್ತಂತೆ.
ಈ ಸ್ಪೋಟದಿಂದ
ಕುಸಿಯುತ್ತಿದ್ದ ಇಡೀ ದ್ವೀಪ
ಸಮುದ್ರದ ನೀರು ಒಳ ನುಗ್ಗಿದಂತೆಲ್ಲ
ಮತ್ತೆ ಮತ್ತೆ ವಿಸ್ಪೋಟಗೊಳ್ಳುತ್ತಾ
ಸುನಾಮಿ ಉಂಟಾಗಿ ಸಹಸ್ರಾರು ಮೈಲು
ದೂರದ ದಕ್ಷಿಣ ಆಫ್ರಿಕಾ ತೀರವನ್ನು
ನಲುಗಿಸಿದ್ದವಂತೆ. ಈ
ಕ್ರಕಟೋವ ಮತ್ತೆ ತಲೆ ಎತ್ತಿ
ನಿಲ್ಲುತ್ತಿದೆ. ಕುಸಿದ
ಇಡೀ ದ್ವೀಪ ಮತ್ತೆ ಸಮುದ್ರದ
ಆಳದಿಂದ ಉದಯಿಸುತ್ತಿದೆ.
ಈ ಕ್ರಕಟೋವ
ಇರುವುದು ಈ ರಿಂಗ್ ಆಫ್ ಫೈಯರ್
ಅರ್ಥಾತ್ ಬೆಂಕಿಯ ಬಲೆಯೊಳಗೆ.
ಮಾರ್ಚ್
೧೧ - ೨೦೧೧
ರಂದು ಜಪಾನ್ ನ ತೊಹೋಕುವಿನಲ್ಲಿ
ಸಂಭವಿಸಿದ ಭೂಕಂಪ ಇಡೀ ಜಪಾನ್
ಅಷ್ಟೇ ಅಲ್ಲ, ಸಂಪೂರ್ಣ
ಏಷಿಯಾವನ್ನೇ ಭಯದಲ್ಲಿ ಮುಳುಗಿಸಿತ್ತು.
ಸಮುದ್ರದ
ಅಂತರಾಳದಲ್ಲಿ ೨೯ಕಿಲೋಮೀಟರ್
ಗಳಷ್ಟು ಭೂ ಗರ್ಭದ ಒಳಗೆ ಸಂಭವಿಸಿದ
ಈ ಭೂಕಂಪದ ತೀವ್ರತೆ ಸುಮಾರು
೯.೧M.
ಪೂರ್ವ ಜಪಾನ್
ನ ಕಡಲ ತೀರದಿಂದ ಸುಮಾರು ೭೦
ಕಿಲೋಮೀಟರುಗಳ ದೂರದಲ್ಲಿ
ಕೇಂದ್ರವನ್ನು ಹೊಂದಿದ್ದ ಈ ಭೂಕಂಪ
ತನ್ನೊಟ್ಟಿಗೆ ಸುನಾಮಿಯನ್ನೂ
ಕರೆತಂದಿತ್ತು. ಸಮುದ್ರದಾಳದಲ್ಲಿ
ಸಂಭವಿಸುವ ಭೂಕಂಪಕ್ಕೆ
ಅಲ್ಲೋಲಕಲ್ಲೋಲವಾಗುವ ಸಮುದ್ರದ
ಮುಂದುವರಿದ ಭಾಗವೇ ಸುನಾಮಿ.
ತೀರಕ್ಕೆ
ಸಮೀಪವಾಗುವವರೆಗೂ ಸಮುದ್ರದ
ಒಡಲಲ್ಲೇ ಸಾಗುವ ಅಲೆಗಳು ತೀರಕ್ಕೆ
ಹತ್ತಿರವಾಗುತ್ತಿದ್ದಂತೆ ಸಮುದ್ರದ
ಮೇಲ್ಮೈ ನಿಂದ ತೀರಕ್ಕೆ ಧಾಳಿ
ಇಡುತ್ತವೆ. ಸುಮಾರು
೪೦ ಮೀಟರ್ಗಳಷ್ಟು ಎತ್ತರಕ್ಕೆ
ಎದ್ದ ಅಲೆಗಳು ಫುಕುಶಿಮಾ-ಡೈಚಿ
ಪರಮಾಣು ವಿದ್ಯುತ್ ಉತ್ಪಾದನಾ
ಕೇಂದ್ರಕ್ಕೆ ಧಾಳಿ ಮಾಡಿ ೩
ರಿಯಾಕ್ಟರ್ ಭಸ್ಮ ಗೊಂಡಿದ್ದವು.
ಈ ಸ್ಪೋಟದಿಂದ
ಹೊಸಸೂಸಿದ ವಿಕಿರಣ ಉಂಟುಮಾಡುವ
ಹಾನಿ ಅಪಾರ. ಸುಮಾರು
೧೦ ಕಿಲೋಮೀಟರ್ಗಳಷ್ಟು ದೂರ
ತೀರದಿಂದ ಒಳನುಗ್ಗಿದ ಅಲೆಗಳು
ಮಾಡಿದ ಹಾನಿ ಊಹೆಗೂ ನಿಲುಕದ್ದು.
ಈ ಭೂಕಂಪನ
ಹಾಗು ಸುನಾಮಿ ಸಂಭವಿಸಿದ್ದು
ಬೆಂಕಿಯ ಬಲೆಯೊಳಗೆ.
ನ್ಯೂಜಿಲಂಡ್
ನ ಮೌಂಟ್ ರೂಪೆಹು ರಿಂಗ್ ಆ ಫೈರ್
ನ ಅತ್ಯಂತ ಜೀವಂತ ಜ್ವಾಲಾಮುಖಿ.
ವರ್ಷಕ್ಕೊಮ್ಮೆಯಾದರೂ
ಲಾವಾ ಹೊರಚೆಲ್ಲುವ ಈ ಜ್ವಾಲಾಮುಖಿ
ಪ್ರತಿ ೪೫-೫೦
ವರ್ಷಕ್ಕೊಮ್ಮೆ ಭಯಾನಕ ಆಸ್ಫೋಟನೆಯಾಗುವ
ಇತಿಹಾಸ ಹೊಂದಿದೆ. ಸುಮಾರು
೯೦೦೦ ಅಡಿಗಳಷ್ಟು ಎತ್ತರವಿರುವ
ಈ ಜ್ವಾಲಾಮುಖಿ ಕಡೆಯಬಾರಿ ಲಾವಾ
ಉಗುಳಿದ್ದು ೧೯೯೫-೯೬
ರರಲ್ಲಿ
ಮೆಕ್ಸಿಕೋ
ದೇಶದ ಪೋಪುಕಟೆಪೇಟಿ ಜ್ವಾಲಾಮುಖಿ
ಪ್ರಪಂಚದ ಜೀವಂತ ಜ್ವಾಲಾಮುಖಿಗಳಲ್ಲೊಂದು.
ಸುಮಾರು ೧೭೮೦೦
ಅಡಿ ಎತ್ತರದ ಈ ಜ್ವಾಲಾಮುಖಿ ೧೫೦೦ರ
ಇಸವಿಯಿಂದ ಸುಮಾರು ೧೫ ಬಾರಿ
ಸ್ಪೋಟಿಸಿದೆ. ಮೆಕ್ಸಿಕೋ
ದೇಶದ ರಾಜಧಾನಿಗೆ ಅತೀ ಸಮೀಪದಲ್ಲೇ
ಇರುವ ಈ ಜ್ವಾಲಾಮುಖಿಯ ಬಳಿ ೨ ಕೋಟಿ
ಜನರ ಭವಿಷ್ಯವಿದೆ.
ಅಷ್ಟೇ
ಏಕೆ ಪ್ರಪಂಚದ ೫ ಅತಿ ದೊಡ್ಡ
ಭೂಕಂಪನಗಳಲ್ಲಿ ೪ ಸಂಭವಿಸಿದ್ದು
ಈ ರಿಂಗ್ ಆಫ್ ಫೈರ್ ನ ಒಳಗೆ.
ಶೇಕಡಾ ೮೦
ರಷ್ಟು ಅತೀ ತೀವ್ರ ಭೂಕಂಪಗಳು
ಸಂಭವಿಸುವುದು ಈ ಬಲೆಯೊಳಗೆ.
ಪ್ರಪಂಚದ
ಅತ್ಯಂತ ಜನನಿಬಿಡ ಪ್ರದೇಶಗಳಾದ
ಫಿಲಿಪೈನ್ಸ್, ನ್ಯೂ
ಜಿಲಂಡ್, ಜಪಾನ್,
ಮೆಕ್ಸಿಕೋ,
ಅಮೆರಿಕಾದ
ಕ್ಯಾಲಿಫೋರ್ನಿಯಾ, ಚಿಲಿ
ಇವೆಲ್ಲ ರಿಂಗ್ ಆಫ್ ಫೈರ್ ನ ಒಳಗೆ
ಅಥವಾ ಪಕ್ಕದಲ್ಲೇ ಇರುವಂತಹವು.
ಈ ಪ್ರದೇಶದ
ಜನರ ಜೀವ ಇತರೆ ಪ್ರದೇಶದ ಜನರ
ಜೀವಕ್ಕಿಂತ ಹೆಚ್ಚು ಅಪಾಯದಲ್ಲಿವೆ.
ಜಗತ್ತಿನ
ಎಲ್ಲೆಡೆ ಸಂಭವಿಸುತ್ತಿರುವ
ಭೂಕಂಪಗಳ ತೀವ್ರತೆ ಮತ್ತು ಸ್ಥಳಗಳ
ಪರಿಚಯ ಬೇಕಾದಲ್ಲಿ ಈ ವಿಳಾಸ ನೋಡಿ.
http://quakes.globalincidentmap.com/
ಕಳೆದ
೧೦೦೦೦ ವರ್ಷಗಳ ಜ್ವಾಲಾಮುಖಿಗಳ
ಇತಿಹಾಸ ಇಲ್ಲಿದೆ. https://www.volcanodiscovery.com/volcanoes.html



Comments
Post a Comment