ಟೆಂಟಿನ
ಬಲ ಮೂಲೆಯಲ್ಲಿ ಮಲಗಿದ್ದ ನಾನು
ಧಡಕ್ಕನೆ ಎದ್ದು ಕುಳಿತೆ.
ಹೊರಗೆ ಕೇಳಿಸಿದ
ವಿಚಿತ್ರ ಶಬ್ದ ನನ್ನನ್ನು
ಎಚ್ಚರಿಸಿತ್ತು. ಕೈ ನಲ್ಲ್ಲಿ ಕಟ್ಟಿದ್ದ ವಾಚ್ ನೋಡಿಕೊಂಡೆ,
ಸಮಯ ೩ರ ಮುಂಜಾವು.
ಹೊರಗೆ
ಸುರಿಯುತ್ತಿದ್ದ ತುಂತುರು ಮಳೆಯಿಂದ
ಟೆಂಟ್ನ ಮುಂಭಾಗದಲ್ಲೇ ಹಾಕಿದ್ದ
ಕ್ಯಾಂಪ್ ಫೈರ್ ಇನ್ನೇನು ಆರುವ
ಸ್ಥಿತಿಯಲ್ಲಿತ್ತು. ಆದರೂ
ಏನೋ ಸಂದೇಹ, ಶಬ್ದ
ಕೇಳಿದ್ದು ನಿಜವಾ ಅಥವಾ ನಿದ್ದೆಗಣ್ಣಿನ
ಭ್ರಮೆಯಾ ಅಂಥ. ಪಕ್ಕದಲ್ಲಿ
ಮಲಗಿದ್ದ ಅಮರ್ ನ ಕಡೆ ತಿರುಗಿ
ನೋಡಿದೆ, ಅವನು
ಕಣ್ಣು ಬಿಟ್ಟು ನನ್ನನ್ನೇ
ನೋಡುತ್ತಿದ್ದ. ಆ
ವಿಚಿತ್ರ ಶಬ್ದ ಅವನನ್ನೂ ಎಬ್ಬಿಸಿತ್ತು.
ಆದರೆ ಮಾತಾಡುವ
ಧ್ಯರ್ಯ ಸಾಲದೇ ನನ್ನನ್ನೇ
ನೋಡುತ್ತಿದ್ದ. ನಾನು
ಅವನನ್ನು ನೋಡುತ್ತಿದ್ದಂತೆಯೇ
ಎದ್ದು ಕುಳಿತ. ಇಬ್ಬರ
ಮುಖದಲ್ಲೂ ಭಯ ಮಿಶ್ರಿತ ಕುತೂಹಲ.
ಅಷ್ಟರೊಳಗೆ
ಅಮರ್ ಪಕ್ಕ ಮಲಗಿದ್ದ ಫಣಿ ಹಾಗೂ
ವಿನಯ್ ಎದ್ದು ಕುಳಿತರು.
ಅವರ ಮುಖದಲ್ಲಿ
ಆಶ್ಚರ್ಯ, ನಾವಿಬ್ಬರೂ
ಮಾತನಾಡದೆ ಒಬ್ಬರ ಮುಖ ಇನ್ನೊಬ್ಬರು ನೋಡುತ್ತಾ ಕುಳಿತಿರುವುದ
ಕಂಡು ಹಾಗೆ ಕುಳಿತರು.
ಏನೆಂದು ಕೇಳುವ
ಧ್ಯರ್ಯವಿಲ್ಲ, ಏಕೆಂದರೆ
ನಾವು ಹಾಗೆ ಸುಮ್ಮನೆ ಕೂರುವ
ಹುಡುಗರೇ ಅಲ್ಲವಲ್ಲ.
ಸುಮ್ಮನಿದ್ದರೆ
ಏನೋ ಆಗಿದೆ ಎಂದೇ ಅರ್ಥ.
ಟೆಂಟ್
ನ ಮೇಲೆ ಪಟ ಪಟ ಬೀಳುತ್ತಿರುವ
ತುಂತುರು ಹನಿಗಳು, ರೊಯ್ಯನೆ
ಬೀಸುತ್ತಿರುವ ಗಾಳಿ ಇದರ ಮಧ್ಯೆ
ನಮ್ಮ ಬಿಸಿಯುಸಿರು. ಇದಿಷ್ಟೇ
ಶಬ್ದ ಬಿಟ್ಟರೆ ಬೇರೇನೂ ಇಲ್ಲ.
ಹಳದಿ ಟೆಂಟ್ನ
ಪರದೆಯ ಮೂಲಕ ಮಸುಕು ಮಸುಕಾಗಿ
ಕಾಣುತ್ತಿರುವ ಆಚೆಯ ಅರ್ಧ ನಂದಿಹೋದ
ಬೆಂಕಿ. ಆಗ
ಕೇಳಿ ಬಂದಿತ್ತು ಆ ಶಬ್ದ ಮತ್ತೊಮ್ಮೆ.
ನಮ್ಮ ಟೆಂಟ್ನ
ಎದುರು ೫೦ ಅಡಿ ದೂರದಲ್ಲಿದ್ದ
ಭೀಕರ ದಟ್ಟ ಕಾಡಿನ ಅಂಚಿನಿಂದ
ಕೇಳಿಬಂದ ಶಬ್ದ.
ನಾವು
ಹೋಗಿದ್ದು ಕೊಡಚಾದ್ರಿಯ ಚಾರಣಕ್ಕೆಂದು.
ಆಗೆಲ್ಲ ಚಾರಣ
ಯುವಜನರ ಹೊಸ ಕ್ರೇಜ್. ೨೦೦೯ರ
ಜನವರಿ. ನಮ್ಮ
ಅದೃಷ್ಟಕ್ಕೋ ದುರಾದೃಷ್ಟಕ್ಕೋ
ಬಂಗಾಳ ಕೊಲ್ಲಿಯಲ್ಲಿ ಎದ್ದ
ಚಂಡಮಾರುತ ಪಶ್ಚಿಮ ಕರಾವಳಿಯ
ಕೊಡಚಾದ್ರಿಗೂ ತುಂತುರು ಮಳೆ
ತಂದಿತ್ತು.
ಕಷ್ಟಪಟ್ಟೋ
ಇಷ್ಟಪಟ್ಟೋ ೧೦ ಕಿಲೋಮೀಟರ್ಗಳ
ಏರಿಳಿತದ ದಾರಿ, ಬೆಟ್ಟ,
ಕಾಡು,
ಹರಿಯುವ ತೊರೆ
ಇದೆಲ್ಲ ದಾಟಿ ಸಂಜೆಯ ವೇಳೆಗೆ
ಕೊಡಚಾದ್ರಿಯ ತುತ್ತ ತುದಿ
ತಲುಪಿದ್ದೆವು. ಇರುವ
ಪುಟ್ಟ ಜಾಗದಲ್ಲೇ ಸಮತಟ್ಟಾದ ನೆಲ
ಹುಡುಕಿ ಟೆಂಟ್ ಹಾಕಿದ್ದೆವು.
ಮೋಡ ಕವಿದ
ವಾತಾವರಣ, ಆಗಲೋ
ಈಗಲೋ ಶುರುವಾಗುವಂತಿದ್ದ ಮಳೆ,
ಮಳೆ ಸುರಿಯುವ
ಮೊದಲು ಚಳಿ ಕಾಯಿಸಲು ಬೆಂಕಿ ಮಾಡೋಣ
ಎಂದು ಫಣಿ ಕತ್ತಿ ಹಿಡಿದು ಮರ
ಕಡಿಯಲು ಹೊರಟಿದ್ದ. ಎದುರಿಗೆ
ಇಳಿಜಾರಿನಲ್ಲಿ ಮರ ಕಡಿಯ ಹೋದವನು
ಎಷ್ಟು ಹೊತ್ತಾದರೂ ವಾಪಸು ಬರದಿರಲು
ಅಮರ್ ಅವನನ್ನು ಹುಡುಕ ಹೋಗಿದ್ದ.
ಇನ್ನೇನು
ಕತ್ತಲೆ ಆವರಿಸುವಷ್ಟರಲ್ಲಿ
ಇಬ್ಬರೂ ವಾಪಾಸ್ ಬಂದು ಅಗ್ಗಿಷ್ಟಿಕೆ
ಹಾಕಲು ಶುರು ಮಾಡಿದ್ದರು.
ಆಗ ಫಣಿ
ಕಾಡಿನಲ್ಲಿ ನೋಡಿದ ವಿಚಿತ್ರವೊಂದನ್ನು
ಹೇಳಿದ್ದ.
ಸಿಡಿಲು
ಬಡಿದು ಸತ್ತು ಒರಗಿದ್ದ ಮರವೊಂದನ್ನು
ಕಡಿಯುವಾಗ ಒಣಗಿದ ಎಲೆಗಳ
ಮೇಲೆ ಕಾಲಿಟ್ಟು ಜಾರಿ ಬಿದ್ದಿದ್ದ.
ಏಳುವಾಗ ಸಿಕ್ಕ
ಕೋಲೊಂದನ್ನು ಹಿಡಿದು ಎಳೆದಾಗ
ಎಲೆಗಳ ಅಡಿಯಲ್ಲಿ
ಹಳೆಯ ವಿಗ್ರಹವೊಂದು ಕಂಡಿತ್ತು.
ತಲೆ ಕೆಡಿಸಿಕೊಳ್ಳದ
ಫಣಿ ಒಂದಷ್ಟು ತರಗಲೇ, ರೆಂಬೆ
ಕೊಂಬೆಗಳನ್ನು ಒಟ್ಟು ಮಾಡಿ ಹಾಗೆ
ಮುಂದಕ್ಕೆ ನೆಡೆದಿದ್ದ.
ಅಲ್ಲೆಲ್ಲೋ
ಮರದ ಮೇಲೆ ಬೆಳೆದಿದ್ದ ಒಣಗಿದ
ಪಾಚಿ ಕೀಳುವಾಗ ಬಂಡೆಯ ಮೇಲೆ
ಕೆತ್ತಿದ್ದ ಅಕ್ಷರ ಹಾಗು ಚಿತ್ರಗಳು
ಅವನ ಕಣ್ಣು ಸೆಳೆದು ಓದಲು ತೊಡಗಿದ.
ಯಾವುದೋ ಶತಮಾನದ
ಶೀಲಾ ಶಾಸನದಂತಿದ್ದ ಅದರ ಮೇಲೆ
ಮೂಡಿದ್ದ ಅಕ್ಷರಗಳು ಅವನಿಗೆ
ಅರ್ಥವಾಗುವ ಹಾಗಿರಲಿಲ್ಲ.
ಮಸುಕು ಮಸುಕಾದ
ಕನ್ನಡವಲ್ಲದ ಬೇರೆ ಲಿಪಿಯಲ್ಲಿದ್ದ
ಅಕ್ಷರಗಳು ಅವನ ಕುತೂಹಲಕ್ಕೆ
ನೀರೆರೆಚಿದ್ದವು. ಆದರೆ
ಅದೇ ಬಂಡೆಯ ಮೇಲೆ ಕೆತ್ತಿದ್ದ
ಕೆಲವು ಚಿತ್ರಗಳು ಅವನ ಧ್ಯರ್ಯ
ಕುಸಿಯುವಂತೆ ಮಾಡಿದವು.
ಅವನು ಕೆಲ
ಕ್ಷಣಗಳ ಮುಂಚೆ ಕಂಡ ಆ ವಿಗ್ರಹದ
ಚಿತ್ರ, ಕಣ್ಣು,
ಭರ್ಜಿ,
ಈಟಿ,
ಹಾಗು ನಾಲಗೆ
ಆಚೆ ಬಂದಿರುವ ಅರ್ಧ ಕಡಿದ ತಲೆಯ
ಕೆತ್ತನೆ.
ಇದ
ನೊಡಿ ಬೆವರಿದ ಫಣಿ ಸಿಡಿಲು ಬಡಿದಂತೆ
ನಿಂತಿದ್ದ. ಆಗ
ನೋಡಿದ್ದ ಅದೇ ವಿಗ್ರಹದ
ಚಿತ್ರ, ಭರ್ಜಿ,
ಈಟಿ,
ತಲೆ ಕಡಿದ
ಚಿತ್ರ ಇವೆಲ್ಲ ನೋಡಿ ತನಗೇನೋ
ಆಪತ್ತು ಕಾದಿದೆ ಎಂದು ಯೋಚಿಸುವಾಗ
ಹಿಂದಿನಿಂದ ಬಂದ ಅಮರ್ ತಮಾಷೆ
ಮಾಡಲು ಅವನ ಕಾಲಿಗೆ ಹಾವು ಕಡಿದಂತೆ
ಮಾಡಲು ಬೆಚ್ಚಿ ಬಿದ್ದ ಫಣಿ
ಹೌಹಾರಿದ್ದ. ಕೊನೆಗೆ
ಇಬ್ಬರೂ ನೆಡೆದದ್ದೆಲ್ಲವನ್ನೂ
ಮಾತಾಡಿಕೊಳ್ಳುತ್ತಾ ಕಡಿದ
ಉರುವಲುಗಳನ್ನು ತೆಗೆದು ಕೊಂಡು
ಬಂದಿದ್ದರು.
ಇದೆ
ಸಮಯದಲ್ಲಿ ಯಾರೋ ಕೆಳಗಿನ ವಾಲೂರಿನ
ಹಳ್ಳಿಯ ಜನ ಬೆಟ್ಟದ ಮೇಲೆ ಬಂದಿದ್ದವರು
ವಿನಯ್ ಬಳಿ ಯಾರು ಯಾಕೆ ಬಂದಿದ್ದು
ಎಂದು ಉಭಯ ಕುಶಲೋಪರಿ ಮಾಡುತ್ತಾ
ಮಳೆಗಾಲದಲ್ಲಿ ನಡೆದ ಘಟನೆಯ ಬಗ್ಗೆ
ಹೇಳಿದ್ದರು. ಕಳೆದ
ಮುಂಗಾರಿನ ಶುರುವಿನಲ್ಲಿ ಅಲ್ಲೇ
ಇದ್ದ ದೊಡ್ಡ ಮರದ ಬಳಿ ಯಾವುದೋ
ವಿಗ್ರಹ ಸಿಕ್ಕು ಅದನ್ನು ಎತ್ತಿಕೊಂಡು
ಬರಲು ಹೋದಾತನಿಗೆ ಅಲ್ಲೇ ಸಿಡಿದು
ಬಡಿದು ಮರಣ ಹೊಂದಿದ್ದ.
ಸಿಡಿಲು
ಬಡಿದಿದ್ದ ಆ ಮರ ಇನ್ನೊಂದು ಮಳೆಗಾಲ
ತಾಳುವುದಿಲ್ಲವೆಂಬಂತೆ ಒಣಗಿ
ಈಗಲೋ ಆಗಲೋ ಬೀಳುವಂತಿತ್ತು.
ಇಷ್ಟು ಹೇಳಿದ
ಆ ಪುಣ್ಯಾತ್ಮ ಆ ಮರದ ಬಳಿ
ಸುಳಿಯಬೇಡಿರೆಂದು ಹೇಳುತ್ತಾ
ಅಲ್ಲಿ ಭೂತ ಪ್ರೇತದ ಕಾಟವಿದೆ
ಎಂದು ಹೆದರಿಸಿದ್ದ.
ಇಷ್ಟೆಲ್ಲ
ಮಾತನಾಡುತ್ತಾ ಹೆದರಿದ್ದ ಫಣಿಗೆ
ಇದೆಲ್ಲ ಕಾಕತಾಳೀಯ, ಸಾವಿರಾರು
ವರ್ಷಗಳ ಹಿಂದೆ ಶಂಕರಾಚಾರ್ಯರು
ತಪಸ್ಸು ಮಾಡಿದ ನೆಲವಿದು ಹೆದರಬೇಡವೆಂದು
ಸಾಂತ್ವನ ಹೇಳುತ್ತಾ, ತಮಾಷೆ
ಮಾಡುತ್ತಾ ಅಡುಗೆ ಮಾಡಿ ಮುಗಿಸಿದ್ದೆ.
ಜೋಳ ಹಾಕಿದ
ಉಪ್ಪಿಟ್ಟು, ಟೊಮೇಟೊ
ಸೂಪ್, ಕೆಂಡದಲ್ಲಿ
ಸುಟ್ಟ ಜೋಳ ಇವೆಲ್ಲವನ್ನೂ ಮೆದ್ದು
ಮಾತನಾಡುತ್ತ ಕುಳಿತಿರಲು ತುಂತುರು
ಶುರುವಾಗಿತ್ತು. ಇಷ್ಟು
ಹೊತ್ತಿನವರೆಗೂ ಪ್ರಕಾಶಮಾನವಾಗಿ
ತಿಳಿ ಬೆಳದಿಂಗಳು ಬೀರುತ್ತಿದ್ದ
ಚಂದ್ರ ಮೋಡದ ಮರೆಯಲ್ಲಿ ಅಡಗಿ
ಕುಳಿತಿದ್ದ, ಸುತ್ತಲೂ
ಗಾಢಾಂಧಕಾರ. ಚಾರಣದ
ಆಯಾಸ ನಮ್ಮನು ನಿದ್ದೆಗೆ ಸೆಳೆದಿತ್ತು.
ಕೊರೆಯುವ
ಚಳಿ, ಗಾಳಿ,
ತುಂತುರು
ಮಳೆಯಲ್ಲಿ ಹಾಕಿದ್ದ ಬೆಂಕಿ
ಬೆಳಗಿನವರೆಗೂ ಆರದಂತೆ ಕಡಿದು
ತಂದಿದ್ದ ಕಟ್ಟಿಗೆಯೆಲ್ಲವನೂ
ಒಟ್ಟುಗೂಡಿ ಬೆಂಕಿ ಕೊಟ್ಟು ಟೆಂಟ್ನ
ಒಳಗೆ ಮಲಗಲೆಂದು ಬಂದೆವು.
ನಮ್ಮ
ಟೆಂಟ್ ಇದ್ದ ಜಾಗ ಬೆಟ್ಟದ ತುತ್ತ
ತುದಿಯಲ್ಲಿತ್ತು. ಟೆಂಟ್
ನ ಹಿಂದೆ ಮತ್ತು ಎಡಭಾಗಕ್ಕೆ ೨೦೦೦
ಅದು ಆಳದ ಪ್ರಪಾತ. ಟೆಂಟ್
ನ ಬಲಕ್ಕೆ ಕೆಳಗೆ ಇಳಿದು ಹೋಗುವ
ದಾರಿ ಹಾಗು ಎದುರಿಗೆ ಸುಮಾರು ೫೦
ಅಡಿ ದೂರದಿಂದ ಶುರುವಾಗಿ ಘಟ್ಟದ
ಕೆಳಗಿನವರೆಗೂ ಹಬ್ಬಿದ್ದ ದಟ್ಟ
ಮೂಕಾಂಬಿಕಾ ಅರಣ್ಯ. ಪೂರ್ವದಿಂದ
ಬೀಸುತ್ತಿದ್ದ ಮಾರುತಕ್ಕೆ ನಮ್ಮ
ಟೆಂಟು ಪಟಪಟನೆ ಬಡಿಯುತ್ತಿತ್ತು.
ಟೆಂಟ್ ಹಾರಿಹೋಗುವ
ಭಯ ನಮಗಿದ್ದರೂ ಸರಿಯಾಗಿ ಕಟ್ಟಿದ್ದರಿಂದ
ಏನೂ ಆಗುವುದಿಲ್ಲವೆಂಬ ನಂಬಿಕೆ.
ಹಾಗೂ ಹೀಗೋ
ಮಾತನಾಡುತ್ತಾ ಎಲ್ಲರೂ ನಿದ್ದೆಗೆ
ಜಾರಿದ್ದೆವು.
ಆಗ
ಕೇಳಿದ್ದು ಆ ಶಬ್ದ. ಲಟಲಟನೆ
ಮರ ಮುರಿದ ಶಬ್ದ, ಯಾರೋ
ಕಿರುಚಿ ಓಡಿದ ಹಾಗೆ,
ಟೆಂಟ್ ನ ಬಳಿ
ನೆಡೆದಾಡಿದ ಹಾಗೆ. ಬೆಚ್ಚಿ
ಬಿದ್ದು ಎದ್ದು ಕುಳಿತಿದ್ದೆ.
ನನ್ನೊಡನೆ
ಅಮರ್ ಕೂಡ ಎದ್ದು ಕುಳಿತಿದ್ದ.
ಸ್ವಲ್ಪ
ಹೊತ್ತಿನ ನಂತರ ಎದ್ದು ಕುಳಿತ
ಫಣಿ ಹಾಗು ವಿನಯ್ ಗೆ ಏನೆಂದು
ಅರ್ಥವಾಗುವ ಮೊದಲೇ ಮತ್ತೆ ಕೇಳಿತ್ತು
ಶಬ್ದ. ಟೆಂಟ್
ನ ಮೇಲೆ ಬೀಳುವ ಮಳೆಯ ಸದ್ದು,
ಬೀಸುವ ಗಾಳಿಯ
ಸದ್ದು, ಇವೆಲ್ಲದರ
ಮಧ್ಯೆಯೂ ಸ್ಪಷ್ಟವಾಗಿ ಕೇಳಿತ್ತು.
ಟೆಂಟ್ನಿಂದ
ಸುಮಾರು ೫೦ ಅಡಿ ದೂರದಲ್ಲಿ ಬಂದ
ಶಬ್ದವೆಂದು ಖಾತ್ರಿಯಾಗಿತ್ತು.
ಹೊರಹೋಗಲು
ಭಯ. ಹೊರಗೆ
ಬೆಂಕಿ ಉರಿಯುತ್ತಿದ್ದರೂ
ಹೊರಗೆ ಹೋದರೆ ಮತ್ತೆ ಒಳ ಬರುವ
ನಂಬಿಕೆ ಇಲ್ಲ. ಕೂತಲ್ಲಿಯೇ
ಬೆವರು ಹರಿಯಲು ಶುರುವಾಗಿತ್ತು.
ತುಂಬಾ ಹೊತ್ತಿನ
ನಂತರ ಧ್ಯರ್ಯ ತಂದುಕೊಂಡು
ಪಿಸುಮಾತಿನಲ್ಲಿ ಮಾತನಾಡಲು ಶುರು
ಮಾಡಿದೆವು.
ಫಣಿ
ತಾನು ನೋಡಿದ ಮತ್ತು ವಿನಯ್ ಕೇಳಿದ
ವಿಷಯವವನ್ನೆಲ್ಲವನೂ ಒಟ್ಟುಮಾಡಿ
ಇದು ಯಾವುದೋ ಕಾಣಲಾಗದ ಶಕ್ತಿಯ
ಕೆಲಸವೆಂದು ಖಚಿತವಾಗಿ ಹೇಳಿದ.
ಬಿಳುಚಿಕೊಂಡ
ವಿನಯ್ ಮುಖ ಆ ಕತ್ತಲಲ್ಲೂ ಸ್ಪಷ್ಟವಾಗಿ
ಕಾಣುತ್ತಿತ್ತು. ನನಗೆ
ಅತಿ ಮಾನವ ಶಕ್ತಿಯ ಬಗ್ಗೆ ನಂಬಿಕೆ
ಇಲ್ಲದ್ದಿದ್ದರೂ ಹೊತ್ತು ಕಳೆಯಲು
ಕಥೆಯೊಂದನ್ನು ಶುರು ಮಾಡಿದೆ.
ನನ್ನೂರು
ಹಾಲ್ಮತ್ತೂರು, ಅಲ್ಲಿಯ
ದೇವಸ್ಥಾನ ಇರುವುದು ಸುಮಾರು ೧೯
ಅಡಿ ಎತ್ತರದ ಹುತ್ತಕ್ಕೆ.
ಒಂದಾನೊಂದು
ಕಾಲದಲ್ಲಿ ಆಳಿದ ಲಿಂಗಾಯತ ರಾಜರು
ಕಟ್ಟಿದ ದೇವಸ್ಥಾನವಿದು.
ದೇವಸ್ಥಾನದ
ಸುತ್ತ ಇರುವುದು
ರಕ್ತೇಶ್ವರಿ, ಚೌಡಿ,
ಬ್ರಹ್ಮ ಹಾಗು
ನಾಗನ ಬನ. ಅಲ್ಲಿ
ಇರುವ ಶಾಸನವೊಂದು ರಾಜರ ಬಗ್ಗೆ
ಕಥೆ ಹೇಳುತ್ತದೆ. ದೇವಸ್ಥಾನಕ್ಕೆ
ಸೇರಿದ ೩ ಕೊಪ್ಪರಿಗೆ ಚಿನ್ನ
ದೇವಸ್ಥಾನದ ಹಿಂದಿನ ಕಾಡಿನಲ್ಲಿದೆಯೆಂದೂ,
ಅದನ್ನು ಕಾಯಲು
ದೈವಗಳು ಇವೆಯೆಂದೂ ಊರಿನ ಜನ
ನಂಬುತ್ತಾರೆ. ಪ್ರತಿ
ವರ್ಷ ಏಪ್ರಿಲ್ ನಲ್ಲಿ ನಡೆಯುವ
ಜಾತ್ರೆ ಮುಗಿದ ಮೇಲೆ ೨ ದಿನ ಯಾರು
ದೇವಸ್ಥಾನಕ್ಕೆ ತಲೆ ಹಾಕುವುದಿಲ್ಲ.
ಆ ಊರಿನಲ್ಲಿ
ಆಳ್ವಿಕೆ ನೆಡೆಸಿದ ರಾಣಿ ಶ್ವೇತಾ
ಅಶ್ವಾರೂಢಳಾಗಿ ದೇವಸ್ಥಾನದಿಂದ
ಹೊರಟು ಗ್ರಾಮ ಸಂಚಾರ ಮಾಡುತ್ತಾಳೆಂದು
ಹೇಳುತ್ತಾರೆ. ನನ್ನಜ್ಜ
ಕೂಡ ಇದು ನಿಜ, ತಾನು
ಕಣ್ಣಾರೆ ಕಂಡದ್ದಾಗಿ ಹೇಳಿದ
ನೆನಪು.
ಹಾಗಾಗಿ
ಇಲ್ಲಿ ಯಾವುದೊ ನಮ್ಮ ಎಣಿಕೆಗೆ
ನಿಲುಕದ ಅನುಭವಕ್ಕೂ ಬಾರದ ಅತಿಮಾನವ
ಶಕ್ತಿ ಇದ್ದರೂ ಇರಬಹುದು ಎಂದು
ಕಥೆ ಮುಗಿಸಿದೆ. ಮೊದಲೇ
ಹೆದರಿದ್ದ ಹುಡುಗರು ಮತ್ತೂ ಹೆದರಿ
ನನಗೆ ಹಿಡಿಶಾಪ ಹಾಕಲು ನನಗೋ
ಒಳಗೊಳಗೇ ನಗು.
ಚಂಡಮಾರುತದ
ಮಳೆ ಮುಂದಿವರಿದಿರಲು ಸಮಯ
ಸರಿಯುತ್ತಿರಲು ನಿಧಾನವಾಗಿ
ಬೆಳಕು ಮೂಡಲು ಶುರು ಅಯ್ತು.
ಕಪ್ಪಗಿದ್ದ
ಆಕಾಶ ಬೂದು ಬಣ್ಣಕ್ಕೆ ತಿರುಗಲು
ನಮ್ಮ ಮನದಲ್ಲಿದ್ದ ದುಗುಡ ನಿಧಾನವಾಗು
ಕಡಿಮೆ ಅಯ್ತು. ಪೂರ್ವದಿಂದೆದ್ದ
ಸೂರ್ಯ ಮೋಡಗಳ ಸೆರೆಯಿಂದ ಮೇಲೆ
ಬಂದು ಕಿರುನಗೆ ಬೀರಲು ಶುರು
ಮಾಡಿದ. ತುಂತುರು
ಮಳೆ ಕೂಡ ನಿಂತು ಹೊರಗೆ ಹೋಗುವ
ಧ್ಯರ್ಯ ಮಾಡಿದೆವು. ನೀ
ಮೊದಲು ನಾ ಕೊನೆಗೆ ಎಂದು ಕಿತ್ತಾಡುತ್ತಾ
ಕೊನೆಗೆ ಎಲ್ಲರೂ ಒಟ್ಟಿಗೆ ಆಚೆ
ಹೋಗುವುದೆಂದು ತೀರ್ಮಾನ ಮಾಡಿ
ಹೊರ ನೆಡೆದೆವು.
ಸುತ್ತಲೂ
ಕವಿದಿದ್ದ ಮಂಜು, ಎಳೆಯ
ಮೇಲೆ ಬಿದ್ದ ಮಳೆಯ ಹನಿಗಳ ಮೇಲೆ
ಸೂರ್ಯನ್ ಬೆಳಕು ಪ್ರತಿಫಲಿಸಿ
ಬೇರೊಂದು ಮಾಯಾಲೋಕ ಸೃಷ್ಟಿಸಿತ್ತು.
ರಾತ್ರಿಯ
ಮಳೆಗೆ ಆರಿ ಹೋಗಿದ್ದ ಬೆಂಕಿಗೆ
ಮತ್ತಷ್ಟು ಪೆಟ್ರೋಲ್ ಸುರಿದು
ಫಣಿ ಬೆಂಕಿ ಹಚ್ಚಿಸಿದ. ಚಳಿ
ಕಾಯಿಸಿಕೊಳ್ಳುತ್ತಾ ಟೆಂಟ್ ಮಡಚಿ
ಅಲ್ಲಿಂದ ಮೊದಲು ಕಾಲು ಕೀಳುವ
ಆಲೋಚನೆ ನಮ್ಮದು.
ನಾವು
ಟೆಂಟ್ ಮಡಚುತ್ತಿರಲು ಸುಮಾರು
೨ ಕಿಲೋಮೀಟರು ಕೆಳಗಿದ್ದ ದೇವಸ್ಥಾನದ
ಬಳಿಯ ಮನೆಯ ಜನ ಮೇಲೆ ನಮ್ಮನ್ನು
ಹುಡುಕಿ ಬಂದರು. ಏನೆಂದು
ಕೇಳಲು ರಾತ್ರಿ ಯಾರೋ ಗಟ್ತಿಯಾಗಿ
ಕೂಗಿದ, ಓಡಿ
ಬಂದ ಶಬ್ದವೆಲ್ಲ ಕೇಳಿ ನಮ್ಮಲ್ಲಿ
ಯಾರಿಗೋ ಏನೋ ಆಪತ್ತು ಸಂಭವಿಸಿದೆ
ಎಂದು ಭಾವಿಸಿ ಬೆಳಕು ಹರಿಯುತ್ತಿದ್ದಂತೆ
ಓಡಿ ಬಂದಿದ್ದರು.
ನಾವು
ಕೂಡ ಎದುರಿನ ಕಾಡಿನಲ್ಲಿ ಏನೋ
ಕಿರುಚಿದ, ಮರ
ಮುರಿದ, ಓಡಾಡಿದ
ಶಬ್ದ ಕೇಳಿದೆವು ಎಂದು
ಹೇಳಲು ಅವರು ನಾಲ್ಕು ಜನ,
ನಾವು ನಾಲ್ಕು
ಜನ ಕಾಡಿಗೆ ದಾಂಗುಡಿ ಇಟ್ಟೆವು.
ಕಾಡಿನ ಅಲ್ಲಲ್ಲಿ
ಒದ್ದೆ ನೆಲದಲ್ಲಿ ಮೂಡಿದ ಹೆಜ್ಜೆ
ಗುರುತುಗಳು ರಾತ್ರಿ ಅಲ್ಲೇನೋ
ನೆಡೆದ ಕಥೆ ಸಾರಿ ಸಾರಿ ಹೇಳುತ್ತಿದ್ದವು.
ಹೆಜ್ಜೆ
ಗುರುತು ಸ್ಪಷ್ಟವಾಗಿ ಮೂಡಿದ್ದರೂ
ಅದೇನೆಂದು ಹೇಳುವ ಛಾತಿ
ಅಲ್ಯಾರಿಗೂ ಇರಲಿಲ್ಲ. ನಾವೋ
ಮೊದಲೇ ಸಿಟಿ ಹುಡುಗರು.
ಮನುಷ್ಯ ಹಾಗು
ನಾಯಿಯ ಹೆಜ್ಜೆ ಗುರುತು ಬಿಟ್ಟು
ಬೇರೆ ಕಂಡವರಲ್ಲ. ಆ
ಹೆಜ್ಜೆಗಳು ಕೂಡ ರಾತ್ರಿಯ ಮಳೆಗೆ
ಅಲ್ಲಲ್ಲಿ ಅಳಿಸಿ ಹೋಗಿದ್ದವು.
ಆಗ ಅಲ್ಲೊಂದು
ಎಲೆಯ ಮೇಲೆ ಕಂಡಿದ್ದು
ಕೆಂಪು ರಕ್ತ. ಇದನ್ನು
ಕಂಡ ವಿನಯ್ ಬೆಚ್ಚಿ ಬಿದ್ದ.
ನಮಗೆಲ್ಲ
ತೋರಿಸಿದ. ಹಾಗೆ
ಮುಂದುವರಿಯಲು ರಕ್ತ ಢಾಳುಢಾಳಾಗಿ
ಬಿದ್ದದ್ದು ಕಾಣಿಸಿತು.
ಅಲ್ಲಿ ಮುರಿದ
ಪೊದೆಗಳು ಬಿದ್ದ ರಕ್ತ ಹಾಗೆ ಮುಂದೆ
ಹೋಗಲು ಕಾಣಿಸಿದ್ದು ಅರ್ಧ ತಿಂದು
ಮಿಕ್ಕಿದ ಕಡವೆಯ ದೇಹ. ರಾತ್ರಿ
ಯಾವುದೊ ಕಾಡು ಪ್ರಾಣಿಯೊಂದು
ಬಂದು ಕಡವೆಯೊಂದನ್ನು ಹಿಡಿದು
ತಿಂದು ಬಿಟ್ಟು ಹೋಗಿತ್ತು.
ಅಲ್ಲಲ್ಲಿ
ಮುರಿದು ಬಿದ್ದ ಪೊದೆ, ಹರಿದ
ರಕ್ತ ರಾತ್ರಿ ನೆಡೆದ ದಾರುಣ
ಕಥೆಯನ್ನು ಸಾರಿ ಸಾರಿ ಹೇಳುತ್ತಿದ್ದವು.
ರಾತ್ರಿ
ನೆಡೆದದ್ದು ಏನೆಂದು
ಗೊತ್ತಾದ ಸಮಾಧಾನದೊಂದಿಗೆ
ಕೆಳಗಿಳಿದು ಬಂದೆವು.. ಆದರೂ
ಮನದಲ್ಲಿ ಕೊರೆಯುತ್ತಿದ್ದ ಪ್ರಶ್ನೆ
ಹಲವು. ಆ
ಹುಲಿಯೋ ಚಿರತೆಯೋ ನಮಗಾಗಿ
ಹೊಂಚು ಹಾಕಿ ಕಾದು
ಕೊನೆಗೆ ಸಿಗದೇ, ಸಿಕ್ಕಿದ
ಕಡವೆಯೊನ್ದನ್ನು
ಕೊಂದಿತ್ತಾ?
ಹಾಗಾದರೆ
ನಮ್ಮ ಜೀವವನ್ನು ಅಂಗೈಯಲ್ಲಿ
ಹಿಡಿದು ರಾತ್ರಿ ಕಳೆದಿದ್ದೆವಾ?
ನಮಗೆ ಬೇರೇನೋ
ಕಿರುಚಿದ, ಮರ
ಮುರಿದ ಸದ್ದು ಕೇಳಿದ್ದರೂ ೨
ಕಿಲೋಮೀಟರು ಕೆಳಗಿದ್ದ ಮನೆಯವರಿಗೆ
ನಾವು ಕಿರುಚಿದ ಓಡಿ ಬಂದ ಶಬ್ದ
ಕೇಳಿದ್ದು ಹೇಗೆ? ಅದೂ
ಕೂಡ ನಾವು ಕಿರುಚದೆ ಓಡದೇ
ಕುಳಿತಿದ್ದರೂ ಸಹಾ. ನಿಜವಾಗಾಲೂ
ಅಲ್ಲೊಂದು ಅತಿ ಮಾನವ ಶಕ್ತಿಯೊಂದಿದ್ದು
ನಮ್ಮನ್ನು ಕಾಪಾಡಿತ್ತಾ ?
ಈ ಪ್ರಶ್ನೆಗಳಿಗೆ
ಉತ್ತರ ಇಂದಿಗೂ ಸಿಕ್ಕಿಲ್ಲ.
ಟ್ರಿಪ್ ಮುಗಿಸಿ
ಕೊನೆಗೆ ವಾಪಾಸ್
ಬರುವಾಗ ರಾತ್ರಿ ಬಸ್ ಹೊಸನಗರದ
ಬಳಿ ಕೆಟ್ಟು ನಿಂತಿದ್ದು,
ನಾವು ಕೆಳಗಿಳಿದು
ಫೋಟೋ ತೆಗೆದು ಕೊಂಡಿದ್ದು,
ಆ ಫೋಟೋ
ಕಂಪ್ಯೂಟರ್ನಲ್ಲಿ ಹಾಕಿ ನೋಡಿದಾಗ
ಫಣಿಯ ತಲೆಯ ಮೇಲೆ ಕಂಡ ಬಿಳಿ ಆಕೃತಿಗೆ
ಏನೆಂದು ಹೇಳುವುದು ? ಇದೆಲ್ಲ
ಕಾಕತಾಳೀಯವೋ ಅಥವಾ...?
Good write up kaaru... Keep writing... Happy to read it..
ReplyDelete