ಅಂದು
ಶನಿವಾರ. ನಾವು
ಕೊಡಚಾದ್ರಿಯಿಂದ ವಾಪಸು ಬಂದು
ಸರಿಯಾಗಿ ಆರು ದಿನಗಳು ಕಳೆದಿತ್ತು.
ನಾನು ಮತ್ತೆ
ಫಣಿ ನನ್ನ ಹಳೆಯ ಆಕ್ಟಿವಾ ಹತ್ತಿ
ಅಮರ್ ನ ಮನೆಗೆ ಹೊಗಿದ್ದೆವು.
ಕಳೆದ ವಾರ
ಹೋಗಿ ಬಂದಿದ್ದ ಕೊಡಚಾದ್ರಿಯಲ್ಲಿ
ತೆಗೆದುಕೊಂಡ ಫೋಟೋಸ್ ಗಳನ್ನ
ಕ್ಯಾಮೆರಾ ಇಂದ ಕಂಪ್ಯೂಟರ್ ಗೆ
ವರ್ಗಾಯಿಸಿ ನೋಡಲು ಕುಳಿತಿದ್ದೆವು.
ಒಂದೊಂದೇ
ಫೋಟೋ ನೋಡಿ ಟೀ ಕುಡಿಯುತ್ತಾ ತಮಾಷೆ
ಮಾಡುತ್ತಾ ಆಲ್ಬಮ್ ನ ಕೊನೆಗೆ
ಬಂದಾಗ ಕಣ್ಣು ಸೆಳೆದಿದ್ದು ಕೊನೆಯ
ಚಿತ್ರ.
ಟ್ರೆಕಿಂಗ್
ಮುಗಿದ ದಿನ ಸಂಜೆ ಮರವಂತೆಯ
ಸೂರ್ಯಾಸ್ತ ನೋಡಿ ಕುಂದಾಪುರದಲ್ಲಿ
ಊಟ ಮುಗಿಸಿ ರಾತ್ರಿ ೧೦ರ ಸುಮಾರಿಗೆ
ಬಸ್ಸು ಹತ್ತಿದಾಗ ಕಣ್ಣು ಸೆಳೆಯುವ
ನಿದ್ದೆ. ಚಾರಣದ
ಆಯಾಸ, ಬೀಚ್ನಲ್ಲಿ
ಸುತ್ತಾಡಿದ ಸುಸ್ತು, ಕಣ್ಣು
ಸೆಳೆಯಲು ಇನ್ನೇನು ಬೇಕು?
ಕುಂದಾಪುರದಲ್ಲಿ
ಹೊರಟ ಬಸ್ಸು ಕೊಲ್ಲೂರು,
ಕಾರಿಘಾಟಿ,
ನಿಟ್ಟೂರು,
ನಗರ ದಾಟಿ
ಹೊಸನಗರದ ಬಳಿ ಬರುವಾಗ ಸುಮಾರು
೧೨:೩೦.
ಅಮ್ಮನ ಘಟ್ಟದ
ಬಳಿ ಬಸ್ಸು ಧಡಾರನೆ ನಿಂತಿತು.
ಬಸ್ಸು ನಿಂತ
ಹೊಡೆತಕ್ಕೆ ಎಲ್ಲರಿಗೂ ಎಚ್ಚರ
ಆಯ್ತು. ಒಬ್ಬೊಬ್ಬರೇ
ಕೆಳಗಿಳಿದು ಹೋದೆವು. ನೋಡಿದರೆ
ಡ್ರೈವರ್ ಮತ್ತು ಕ್ಲೀನರ್ ಹೊರಗೆ
ಮಾತಾಡ್ತಾ ನಿಂತಿದ್ರು,
ಹೊರಗೆ ಹೋಗಿ
ಅವರ ಹತ್ತಿರ ಮಾತಾಡ್ತಾ ನಿಂತೆವು.
ಕೊನೆಗೆ
ಡ್ರೈವರ್ ಬಸ್ಸಿಗೆ ಏನಾಗಿದೆ
ಎಂದು ನೋಡಲು ಹೋದ. ಕಗ್ಗತ್ತಲ
ರಾತ್ರಿ. ಹಿಂದಿನ
ದಿನ ಬಂದ ಮಳೆಯಿಂದ ನೆಲವೆಲ್ಲ
ಒದ್ದೆ ಒದ್ದೆ. ತಣ್ಣಗೆ
ಕೊರೆಯುವ ಚಳಿ. ಪಕ್ಕದಲ್ಲಿದ್ದವನ
ಮುಖ ಕಾಣದಷ್ಟು ಕತ್ತಲು.
ಧಡಕ್ಕನೆ
ಎಚ್ಚರವಾದ್ದರಿಂದ ನಿದ್ದೆ ಹೊರಟು
ಹೋಗಿತ್ತು. ಬಸ್ಸಿನ
ಪಕ್ಕ ನಿಂತು ಕೆಯ್ನಲ್ಲಿದ್ದ
ಕ್ಯಾಮೆರದಿಂದ ಫೋಟೋ ತೆಗುದುಕೊಂಡೆವು.
ಆದರೆ ಬಸ್ಸಿಗೆ
ಏನಾಗಿದೆ ಎಂದು ಡ್ರೈವರ್ಗೆ ಕೊನೆಗೂ
ಗೊತ್ತಾಗಲೇ ಇಲ್ಲ. ಕೊನೆ
ಪ್ರಯತ್ನವೆಂಬಂತೆ ಕ್ಲೀನರ್
ಬಸ್ಸು ಸ್ಟಾರ್ಟ್ ಮಡಿದ.
ನಮ್ಮ ಅದೃಷ್ಟ.
ಬಸ್ಸು ಚಾಲು
ಆಯಿತು. ಇಲ್ಲದಿದ್ದರೆ
ಆ ಕೊರೆಯುವ ಚಳಿಯಲ್ಲಿ ಇಡೀ ರಾತ್ರಿ
ಕಳೆಯ ಬೇಕಿತ್ತೇನೋ.
ಆಮೇಲೆ
ಬಸ್ಸು ಹತ್ತಿ ಮನೆ ತಲುಪುವ ವರೆಗೂ
ಅಂತಹ ಮಹತ್ವವಾದದ್ದೇನೂ ನಡೆಯಲಿಲ್ಲ.
ಎಲ್ಲರೂ ತಮ್ಮ
ತಮ್ಮ ಮನೆಗೆ ಹೋದೆವು. ಆದರೆ
ಆ ರಾತ್ರಿಯಿಂದ ಫಣಿಗೆ ವಿಲಕ್ಷಣವಾದ ಘಟನೆಗಳು ಜರುಗತೊಡಗಿದವು.
ಒಂದು ರಾತ್ರಿಯೂ
ಸರಿಯಾಗಿ ನಿದ್ದೆ ಬರಲಿಲ್ಲ.
ಅವನು ಸಾಕಿದ್ದ
ನಾಯಿಯ ಊಳಿಡುವಿಕೆ ಅವನಿಗೆ
ಆಶ್ಚರ್ಯ ತಂದಿತ್ತು. ಅವನ
ಮನೆಯ ಬಳಿ ಏನೇನೋ ಶಬ್ದ.
ಒಂದು ದಿನ
ಕಾಲೇಜಿನಲ್ಲಿ ತಿನ್ನಲು ಹಾಕಿ
ಕೊಟ್ಟಿದ್ದ ಊಟ ಕೇವಲ ೨ ಘಂಟೆ
ಕಳೆಯುವಷ್ಟರಲ್ಲೇ ಹಳಸಿ ಹೋಗಿತ್ತು.
ಅಪ್ಪಿ ತಪ್ಪಿ
ನಿದ್ದೆ ಮಾಡಿದರೆ ಏನೇನೋ ಕೆಟ್ಟ
ಕೆಟ್ಟ ಕನಸುಗಳು.
ಒಟ್ಟಿನಲ್ಲಿ
ಒಂದು ವಾರ ಕಳೆಯುವಷ್ಟರಲ್ಲಿ ಫಣಿ
ಅರೆ ಹುಚ್ಚನಂತಾಗಿದ್ದ.
ಸರಿಯಾಗಿ
ನಿದ್ದೆ ಇಲ್ಲದೆ, ಊಟ
ಮಾಡಲಾಗದೆ ನೆಮ್ಮದಿ ಕಳೆದು
ಕೊಂಡಿದ್ದ.
ಅಮರ್
ಮನೆಯಲ್ಲಿ ಕೂತು ಸಮಾಧಾನ ಹೇಳಿದೆವು,
ಚಾರಣದ ಆಯಾಸದಿಂದ
ಹೀಗಾಗಿರಬಹುದು ಅಂದುಕೊಂಡೆವು.
ಅಂದು ಫೋಟೋ
ನೋಡುವಾಗ ಕಂಡ ಆ ಕೊನೆಯ ಚಿತ್ರ
ನಮ್ಮೆಲ್ಲರ ಕುತೂಹಲ ಕೆರಳಿಸಿತ್ತು.
ಅದರಲ್ಲಿ
ಇದ್ದದ್ದು ನಾನು, ಅಮರ್,
ಫಣಿ ಮತ್ತು
ಬಸ್ಸಿನ ಕ್ಲೀನರ್. ಕೊನೆಯಲ್ಲಿ
ನಿಂತಿದ್ದ ಫಣಿಯ ಮೇಲೆ ಬಿಳಿ ಬಣ್ಣದ
ಆ ಆಕೃತಿಯೊಂದು ಮೂಡಿತ್ತು.
ಎರಡು ಕೈ,
ಎರಡು ಕಾಲು,
ದೇಹ ಹಾಗೂ
ತಲೆ. ಸ್ಪಷ್ಟವಾಗಿ
ಕಂಡ ಅದು ಯಾವುದೋ ಮನುಷ್ಯಾಕೃತಿಯಂತೆ
ಇತ್ತು. ಮೊದಲಿಗೆ
ನೋಡಿ ಹೆದರಿದರೂ ಆಮೇಲೆ ಮೋಡವೋ
ಅಥವಾ ಬೆಳಕಿನ ಪ್ರತಿಫಲನವೋ ಎಂದು
ಸುಮ್ಮನಾದೆವು.
ನಾನು
ಫಣಿ ಅಮರ್ ನ ಮನೆ ಇಂದ ಹೊರಟಾಗ
ರಾತ್ರಿ ಸುಮಾರು ೯ ಘಂಟೆ.
ಗೊಟ್ಟಿಗೆರೆಯಿಂದ
ಉತ್ತರಹಳ್ಳಿಗೆ ಹೋಗುವ ದಾರಿ
ಅಂಜನಾಪುರದ ಬಿ ಡಿ ಎ ಲೇಔಟ್ ಮೂಲಕ
ಹೋಗುತ್ತಿತ್ತು. ಆಗ
ಅದು ಹೊಸದಾಗಿ ನಿರ್ಮಾಣವಾಗಿದ್ದ
ಅತಿ ದೊಡ್ಡ ಬಡಾವಣೆ.
ರಸ್ತೆಯಲ್ಲಿ
ಒಂದೇ ಒಂದು ಬೀದಿ ದೀಪವಿಲ್ಲ,
ಜನರ ಓಡಾಟವಂತೂ
ಮೊದಲೇ ಇಲ್ಲ. ಗಾಡಿಯಲ್ಲಿ
ಇದ್ದದ್ದು ಅರ್ಧ ಲೀಟರ್ ಪೆಟ್ರೋಲ್.
ಅಮರ್ ಮನೆಯಿಂದ
ಹೊರಟಾಗ ನೋಡಿಕೊಂಡು ಮುಂದೆ ಕನಕಪುರ
ರಸ್ತೆಯಲ್ಲಿ ಸಿಗುವ ಪೆಟ್ರೋಲ್
ಬಂಕ್ ನಲ್ಲಿ ತುಂಬಿಸಿಕೊಳ್ಳೋಣ
ಎಂದು ಮಾತಾಡಿಕೊಂಡು ಹೊರಟೆವು.
ಆಗೆಲ್ಲ
ಫಣಿಗೆ ರಸ್ತೆಯಲ್ಲಿ ತಗ್ಗಾದ
ದಾರಿ ಇದ್ದರೆ ಗಾಡಿಯ ಇಗ್ನಿಷನ್
ಆರಿಸಿ ಓಡಿಸುವ ಚಟ. ಅಂದೂ
ಕೂಡ ಅಂಜನಾಪುರದ ಬಡಾವಣೆಯ ಒಳ
ಬರುತ್ತಿದ್ದಂತೆ ಶುರುವಾಗುವ
ತಗ್ಗಿನಲ್ಲಿ ಗಾಡಿ ಆರಿಸಿದ.
ಕತ್ತಲ
ರಾತ್ರಿಯಲ್ಲಿ ತಗ್ಗಿನಲ್ಲಿ
ಗಾಡಿ ೬೦ರ ವೇಗದಲ್ಲಿ ಒಡಲು ಮೊದಲು
ಮಾಡಿತು. ಗಾಡಿ
ಆರಿದ್ದರಿಂದ ದೀಪ ಆರಿತು.
ಸುಮಾರು ಎರಡು
ಕಿಲೋಮೀಟರು ಹಾಗೆ ಬಂದಿರಬೇಕು,
ಏನೋ ತಪ್ಪೆನಿಸಿ
ಫಣಿಗೆ ಗಾಡಿ ನಿಲ್ಲಿಸಲು ಹೇಳಿದೆ.
ಗಾಡಿ ನಿಂತ
ನಂತರ ಮೊಬೈಲ್ ತೆಗದು ನಕ್ಷೆ ನೋಡಣ
ಎಂದು ತೆಗೆದರೆ ನೋ ನೆಟ್ವರ್ಕ್.
ಭರ್ರನೆ
ಬೀಸುತ್ತಿರುವ ಗಾಳಿ, ಸಮಯ
೧೦ ಸಮೀಪಿಸುತ್ತಿತ್ತು.
ಸರಿ ಗಾಡಿ
ಸ್ಟಾರ್ಟ್ ಮಾಡು ವಾಪಾಸ್ ಹೋಗೋಣ
ಎಂದು ಹೇಳಿ ಗಾಡಿ ಸ್ಟಾರ್ಟ್
ಮಾಡಿದರೆ ಊಹ್ಞೂ ಏನು ಮಾಡಿದರೂ
ಗಾಡಿ ಸ್ಟಾರ್ಟ್ ಆಗುತ್ತಿಲ್ಲ.
ನಾವು ಹೋಗುತ್ತಿದ್ದ
ತಗ್ಗು ಮುಗಿದು ಉಬ್ಬು ಶುರು
ಆಗಿತ್ತು. ತಳ್ಳಿ
ಸ್ಟಾರ್ಟ್ ಮಾಡೋಣ ಎಂದರೆ ಎರಡು
ದಿಕ್ಕಿಗೂ ಉಬ್ಬು ರಸ್ತೆ.
ಎಷ್ಟು ಕಿಕ್
ಹೋದರೂ ಗಾಡಿ ಸ್ಟಾರ್ಟ್ ಆಗುತ್ತಿಲ್ಲ.
ಏನೂ ಮಾಡಲು
ತೋಚದೆ ಸುಮ್ಮನೆ ೨ ನಿಮಿಷ ಕೂತೆವು.
ಮೆಲ್ಲನೆ
ಯಾವುದೋ ದನಿ ಕೇಳಿದಂತಾಯ್ತು.
ಸುತ್ತ ಮುತ್ತ
ನೋಡಿದರೆ ಯಾರು ಇಲ್ಲ. ದೂರ
ನೋಡೋಣವೆಂದರೆ ಬೆಳಕಿಲ್ಲ.
ಮೊಬೈಲ್ನಲ್ಲಿ
ಬರುವ ಬೆಳಕು ಯಾವ ಮೂಲೆಗೆ ಸಾಕು.
ನೆನಪಿಡಿ ಅದು
೨೦೦೯, ಈಗಿನಷ್ಟು
ಉತ್ತಮ ಮೊಬೈಲೆಗಳಿರಲಿಲ್ಲ.
ಮೆಲ್ಲನೆ
ಆ ದನಿ ಮಾತಾಗಿ ಬದಲಾಯ್ತು.
ಆದರೆ ಏನೊಂದೂ
ಅರ್ಥವಾಗುತ್ತಿಲ್ಲ.
ಕಿವಿಯಲ್ಲಿ
ಪಿಸುಗುಡುವ ಹಾಗೆ ಕೂಗಿ ಕರೆದ
ಹಾಗೆ, ಒಮ್ಮೆ
ಹತ್ತಿರದಿಂದ ಇನ್ನೊಮ್ಮೆ ದೂರದಿಂದ
ಮಾತಾಡಿದ ಹಾಗೆ, ಮಧ್ಯೆ
ಮಧ್ಯೆ ಯಾವುದೋ ಹೆಣ್ಣು ಧ್ವನಿ.
ಮೊದಲಿಗೆ
ಯಾರೋ ಇದ್ದರೆಂದು ಸಮಾಧಾನವಾದರೂ
ಕೊನೆಗೆ ಇದ್ಯಾಕೋ ವಿಕೋಪಕ್ಕೆ
ಹೋಗುತ್ತಿದೆ ಎಂದು ಅನ್ನಿಸತೊಡಗಿತು.
ಚಳಿಗಾಲದ ಆ
ಚಳಿಯಲ್ಲೂ ಮೈ ಬೆವರಿ ನಾಲಗೆ
ಒಣಗತ್ತೊಂಡಗಿತು. ಮಾತಾಡೋಣವೆಂದರೆ
ಮಾತೆ ಹೊರಡುತ್ತಿಲ್ಲ.
ಒಬ್ಬರ ಮುಖ
ಒಬ್ಬರು ನೋಡಿಕೊಂಡು ಕುಳಿತಿದ್ದೇವೆ.
ಎಚ್ಚೆತ್ತವರಂತೆ
ಗಾಡಿ ತಳ್ಳಿಕೊಂಡೇ ವಾಪಸು ಹೊರಟೆವು.
ಆ ಉಬ್ಬು
ರಸ್ತೆಯಲ್ಲಿ ತಳ್ಳುವಾಗ ಧಾರಾಕಾರ
ಬೆಳಕು ಹರಿಯತೊಡಗಿತು.
ಭಯಕ್ಕೋ
ಸುಸ್ತಿಗೋ ಗೊತ್ತಿಲ್ಲ.
ಸ್ವಲ್ಪ ದೂರ
ತಳ್ಳಿ ಆಮೇಲೆ ೨ ಕಿಕ್ ಹೊಡೆದೆ,
ಗಾಡಿ ಸ್ಟಾರ್ಟ್
ಆಯಿತು. ಎಷ್ಟು
ಮುಂದೆ ಹೋದರು ಅದು ನಾವು ಬಂದ
ದಾರಿಯಲ್ಲ. ಎಡಕ್ಕೆ
ತಿರುಗಿದೆವು, ಬಲಕ್ಕೆ
ತಿರುಗಿದೆವು, ಮುಂದೆ
ಹಿಂದೆ ಹೇಗೆ ಹೋದರು ನಾವು
ಎಲ್ಲಿದ್ದೇವೆಂದು ಗೊತ್ತಾಗುತ್ತಲೇ
ಇಲ್ಲ.
ಒಂದು
ತಿರುವಿನಲ್ಲಿ ನಿಂತು ಹಿಂದೆ
ತಿರುಗಿ ನೋಡಿದರೆ ಅದೇ ಬಿಳಿ
ಆಕೃತಿ, ಸುಮಾರು
೨೦-೨೫
ಅಡಿಗಳ ದೂರದಲ್ಲಿ. ಚಿತ್ರದಲ್ಲಿ
ನೋಡಿದ ಅದೇ ಬಿಳಿ ಬಣ್ಣದ ಎರಡು
ಕೈ ಕಾಲು ಸರಿಯಾಗಿ ಕಾಣುವ ಆಕೃತಿ.
ಅದು ನೆಲದ
ಮೇಲಂತೂ ಇರಲಿಲ್ಲ. ನೆಲದಿಂದ
ಸುಮಾರು ೩-೪
ಅಡಿಗಳ ಎತ್ತರದಲ್ಲಿ ತೇಲಾಡುತ್ತಿದ್ದಂತೆ
ಕಂಡಿತು. ಇಂದಿಗೂ
ಕಣ್ಣು ಮುಚ್ಚಿದರೆ ಆ ದೃಶ್ಯ
ಮರೆಯಲು ಅಸಾಧ್ಯ. ನೋಡಿದ್ದು
ಇಬ್ಬರಿಗೂ ಸರಿಯಾಗಿ ನೆನಪಿದೆ.
ಬೆಚ್ಚಿ
ಬಿದ್ದೆವು. ನಿಲ್ಲಿದ
ಗಾಡಿ ನಿಲ್ಲಿಸಿದಲ್ಲೆ ಬಿಟ್ಟು
ಇಬ್ಬರೂ ಮುಂದೆ ಓಡಿದೆವು.
ಎಷ್ಟು ದೂರಕ್ಕೆ
ಓಡಿದ್ದೆವೋ ಗೊತ್ತಿಲ್ಲ,
ದೂರದಲ್ಲಿ
ಒಂದು ಕಾಂಪೌಡ್ ಕಂಡಿತು.
ಹತ್ತಿರ ಹೋಗಿ
ನೋಡಿದರೆ ಅದು ವಜ್ರಮುನಿ ಎಸ್ಟೇಟ್.
ಪುಣ್ಯಕ್ಕೆ
ಮೊಬೈಲ್ನಲ್ಲಿ ನೆಟ್ವರ್ಕ್
ಬಂದಿತ್ತು. ಅಮರ್
ಗೆ ಫೋನ್ ಮಾಡಿ ಅವನು ಬರುವವರೆಗೂ
ಕಾದಿದ್ದು ಅವನ ಮನೆಗೆ ಹೋದೆವು.
ರಾತ್ರಿಯೆಲ್ಲಾ
ನಿದ್ದೆ ಇಲ್ಲ, ಏನೇನೋ
ಕನಸು, ಕನವರಿಕೆ,
ಯಾರೋ ಬಂದು
ಕರೆದ ಹಾಗೆ, ಎದೆಯ
ಮೇಲೆ ಕೂತ ಹಾಗೆ, ಮೆಲ್ಲನೆ
ಕಾಲೆಳೆದ ಹಾಗೆ, ತಲೆ
ಎತ್ತಿ ನೋಡಿದರೆ ನಮ್ಮನ್ನೇ
ದಿಟ್ಟಿಸಿ ನೋಡುತ್ತಿರುವ ಹಾಗೆ.
ಆ ರಾತ್ರಿ
ಹೇಗೆ ಕಳೆದ್ವೋ ಗೊತ್ತಿಲ್ಲ.
ಮರುದಿನ
ಬೆಳಗ್ಗೆ ಒಂದು ಬಾಟಲಿ ಪೆಟ್ರೋಲ್
ತುಂಬಿಸ್ಕೊಂಡು ಗಾಡಿ ಹುಡುಕ
ಹೊರಟೆವು, ಸುಮಾರು
ಅರ್ಧ ಗಂಟೆ ಹುಡುಕಿದ ಮೇಲೆ ಒಂದು
ತಿರುವಿನಲ್ಲಿ ನಮ್ಮ ಗಾಡಿ
ನಿಂತಿತ್ತು. ಗಾಡಿಯ
ಮೇಲೆ ಬಿಳಿ ಬಣ್ಣದಲ್ಲಿ ಪಟ್ಟೆಪಟ್ಟೆ
ಆಕಾರದ ಚಿತ್ರ ಮೂಡಿತ್ತು.
ಅದೇನೆಂದು
ಅರ್ಥ ಆಗೋದಾದರೂ ಹೇಗೆ?
ಏನಾದರಾಗಲಿ
ಎಂದು ಪೆಟ್ರೋಲ್ ತುಂಬಿಸಿ ಮನೆಗೆ
ಹೋದವರು ಮತ್ತೆ ಆ ದಾರಿಯಲ್ಲಿ
೫-೬
ವರ್ಷ ಓಡಾಡಿದ್ದರೆ ಕೇಳಿ.
ಆದರೆ
ಅಂದಿನಿಂದ ಫಣಿಗೆ ಕಾಡುತ್ತಿದ್ದ
ನಿದ್ರಾ ಹೀನತೆ ನಿಂತು ಹೊಯ್ತು,
ಅವನ ಮನೆಯ
ನಾಯಿ ಊಳಿಡುವುದು ಕೂಡ ನಿಂತು
ಹೊಯ್ತು. ಎಲ್ಲವೂ
ಸಹಜ ಸ್ಥಿತಿಗೆ ಬಂತು.
ಕೊನೆಗೂ
ಅವನು ಅನುಭವಿಸಿದ್ದ ಆ ಯಾತನೆಯಿಂದ
ಮುಕ್ತಿ ದೊರಕಿತು. ಈಗಲೂ
ಯಾವಾಗಲಾದರೂ ಆ ರಸ್ತೆಯಲ್ಲಿ
ಅಪರೋಪಕ್ಕೆ ಹೋದರೆ ಭಯದಿಂದ ಕೂದಲು
ನಿಮಿರುತ್ತದೆ. ಅಂದು
ಆ ರಾತ್ರಿ ಆ ಕತ್ತಲಲ್ಲಿ ಅನುಭವಿಸಿದ
ಅದೇನೆಂದು ಮಾತ್ರ ಇಂದಿಗೂ
ಅರ್ಥವಾಗಿಲ್ಲ. ಮುಂದೆ
ಕೂಡ ಅರ್ಥವಾಗುವುದಾ?
ಗೊತ್ತಿಲ್ಲ.
Comments
Post a Comment