ಸಕಲ ಲೋಕಗಳ ಒಡೆಯನಾದ ಇಂದ್ರನಿಗೆ ಸಿಹಿ ತಿನಿಸು ತಿನ್ನುವ ಬಯಕೆಯಾಗಿ ಶೌನಕಾದಿ ಮಹಾಮುನಿಗಳನ್ನು ಕುರಿತು ಹೀಗೆಂದನು. "ಮುನಿವರ್ಯರೇ, ಬಹುದಿನಗಳಿಂದ ನನಗೆ ಸಿಹಿ ತಿನಿಸು ತಿನ್ನುವ ಬಯಕೆಯಾಗಿದೆ. ಬೆಳಗಿನ ಕನಸಲ್ಲೂ ಸಿಹಿಯದ್ದೇ ಧ್ಯಾನ, ರಾತ್ರಿ ಹಂಸತೂಲಿಕಾ ತಲ್ಪದ ಮೇಲೆ ಮಲಗಿರುವಾಗಲೂ ಸಿಹಿಯದ್ದೇ ಧ್ಯಾನ, ನನಗೆ ಸಿಹಿ ತಿನಿಸು ಬಿಟ್ಟು ಜೀವನದ ಬೇರಾವ ಭೋಗಗಳ ಬಗ್ಗೆಯೂ ಆಸೆ ಹೊರಟು ಹೋಗಿದೆ. ಹೀಗಾಗಿ, ಪ್ರಪಂಚದ ಅತಿ ಸುಮಧುರ ಸವಿಯಾದ ಸಿಹಿ ತಿನಿಸು ಯಾವುದು? ಎಲ್ಲಿ ಸಿಗುತ್ತದೆ, ಮಾಡುವ ವಿಧಾನವನ್ನಾದರೂ ವಿವರಿಸಿ " ಎಂದು ಕೇಳಲು, ಮಹಾಮುನಿಗಳು ಇಂದ್ರನನ್ನು ಕುರಿತು ಹೀಗೆಂದರು.. "
"ಎಲೈ ಇಂದ್ರನೇ ಕೇಳು... ಹಿಂದೆ ದ್ವಾಪರಯುಗದಲ್ಲಿ ಗೊಲ್ಲ ಶ್ರೀ ಕೃಷ್ಣನಿಗೆ ಶ್ಯಮಂತಕ ಮಣಿಯ ಸಾಹಸವೆಲ್ಲ ಮುಗಿದ ಮೇಲೆ ಸಿಹಿ ತಿನಿಸು ತಿನ್ನುವ ಬಯಕೆ ಆಯಿತು. ಆಗ ಆತನು ಸಭದ್ರೆಯೊಡನೆ ಹೀಗೆಂದನು.. ತಂಗಿ, ನನಗೆ ಹಲವಾರು ದಿನಗಳಿಂದ ಕವಿದಿದ್ದ ನೋವು ಅವಮಾನವೆಲ್ಲ ಕರಗಿ ಮನಸ್ಸಿಗೆ ನೆಮ್ಮದಿ ಆಗಿದೆ, ಹೀಗಾಗಿ ಸಿಹಿ ತಿನಿಸು ತಿನ್ನುವ ಬಯಕೆ ಆಗಿದೆ, ನನಗೆ ಸಿಹಿ ಮಾಡಿಕೊಡು ಎಂದು ಹೇಳಲು, ಚಿಂತಾಕ್ರಾಂತಳಾದ ಸುಭದ್ರೆಯು ಅಣ್ಣ ಬಲರಾಮನ ಬಳಿ ಓಡಿದಳು.
ಅಣ್ಣ, ಕೃಷ್ಣನಿಗೆ ಸಿಹಿ ತಿನಿಸು ತಿನ್ನುವ ಬಯಕೆಯಾಗಿದೆ, ಅವನ ಮನಸ್ಸಂತೋಷ ಪಡಿಸುವಂತಹ ಯಾವುದಾದರೂ ಒಂದು ಸಿಹಿ ತಿನಿಸು ಮಾಡಲು ಸಹಾಯ ಮಾಡಬೇಕು, ಎಂದಳು. ಬಲರಾಮನು ಕೂಡ ಯೋಚಿಸುತ್ತ ಅಡುಗೆ ಮನೆಯಲ್ಲಿದ್ದ ಬೆಲ್ಲ ಹಾಗು ಬೆಳೆಯನ್ನು ನೋಡಲು, ಮಿಂಚು ಸಂಚಾರವಾದಂತಾಗಿ ಸುಭದ್ರೆಗೆ ಒಬ್ಬಟ್ಟು ಮಾಡುವ ವಿಧಾನ ಹೇಳಿಕೊಟ್ಟನು. ಸುಭದ್ರೆಯು ಮಾಡಿದ ಒಬ್ಬಟ್ಟಿಗೆ ೪ ಚಮಚೆ ತುಪ್ಪ, ಕಾಯಿಸಿದ ಹಾಲು ಹಾಕಿ ತಿಂದ ಪರಮಾತ್ಮನು ೨ ದಿನ ಮಲಗಿದ ಹಾಸಿಗೆ ಇಂದ ಮೇಲೇಳಲು ಆಲಸ್ಯವಾಗಿ ಅತೀವ ಆನಂದ ಪಟ್ಟನು. "
"ಹೀಗಾಗಿ, ಶ್ರೀ ಕೃಷ್ಣ ಪರಮಾತ್ಮನನ್ನೇ ಮೆಚ್ಚಿಸಿದ ಸಿಹಿ ತಿನಿಸು ಒಂದಿದೆ, ಅದನ್ನು ಮಾಡುವ ಗುಟ್ಟು ನಿನಗೆ ಹೇಳಿ ಕೊಡುವೆನು" ಎಂದು ಮುನಿವರ್ಯರು ಇಂದ್ರನಿಗೆ ತಿಳಿಸಿದರು,
ಆನಂದತುಂದಿಲನಾದ ದೇವಲೋಕದ ಒಡೆಯನು , ಕುಕ್ಕಗುಗಾಲಿನಲ್ಲಿ ಕೂರಲು ಮುನಿವರ್ಯರು ಮುಂದಿವರಿದರು.. "ಈ ಸಿಹಿತಿನಿಸಿಗೆ ಬೇಳೆ ಒಬ್ಬಟ್ಟು ಎಂದು ಹೆಸರು. ಒಳ್ಳೆಯ ಶಿವಲಿಂಗ ಕಡಲೆ ಬೆಳೆಯನ್ನು ತಂದು, ಬೇಯಿಸಿ, ಬೆಲ್ಲದ ಪಾಕದಲ್ಲಿ ಕುದಿಸಬೇಕು, ತುರಿದ ಕೊಬ್ಬರಿ, ಏಲಕ್ಕಿ ಪುಡಿ ಹಾಕಿ ಗಟ್ಟಿಸಬೇಕು.. ತಣ್ಣಗಾದ ನಂತರ ನುಣುಪಾಗಿ ರುಬ್ಬಬೇಕು. ಇದಕ್ಕೆ ಹೂರಣ ಎನ್ನುವರು.
ನಂತರ ಚಿರೋಟಿ ರವೇ ಮತ್ತು ಮೈದಾ ಹಿಟ್ಟು ತೆಗೆದುಕೊಂಡು ಸ್ವಲ್ಪ ನೀರಿನೊಂದಿಗೆ ಕಲಸಿ ನೆನಯಲು ಬಿಡಬೇಕು. ನಂತರ ಅಪಾರವಾದ ಎಣ್ಣೆಯೊಂದಿಗೆ ನಾದುತ್ತಾ ಒಂದು ಹದಕ್ಕೆ ಬಂದ ನಂತರ ಕಣಿಕದ ಉಂಡೆ ಮಾಡಬೇಕು.
ಹೂರಣದ ಉಂಡೆಯನ್ನು ಮಾಡಿ, ಕಣಿಕದ ಉಂಡೆಯೊಳಗಿಟ್ಟು ಲಟ್ಟಿಸಬೇಕು. ಹದವಾದ ಚಪಾತಿ ಆಕಾರಕ್ಕೆ ಬರುವ ವರೆಗೆ ಲಟ್ಟಿಸಿ ಸಣ್ಣ ಉರಿಯಲ್ಲಿ ಕಾವಲಿಯ ಮೇಲೆ ಬೇಯಿಸಬೇಕು. ಆಗ ಒಬ್ಬಟ್ಟು ಸಿದ್ದವಾಗುತ್ತದೆ.
ಹೀಗೆ ಸಿದ್ದವಾದ ಒಬ್ಬಟ್ಟನ್ನು ತುಪ್ಪ ಅಥವಾ ಹಾಲಿನೊಂದಿಗೆ ಸೇವಿಸಬಹದು , ಸೇವಿಸಿದ ನಂತರ ಮಲಗುವುದು ಕಡ್ಡಾಯ" ಎಂದು ತಮ್ಮ ಮಾತನ್ನು ಮುಗಿಸಿದರು.
ಮುನಿವರ್ಯರು ಮಾತನ್ನು ಮುಗಿಸಿದ ಕೂಡಲೇ ಅವರ ಕಾಲಿಗೆ ಬಿದ್ದ ಇಂದ್ರನು, ಪರಿ ಪರಿಯಾಗಿ ಧನ್ಯವಾದ ಹೇಳುತ್ತಾ ಅಡುಗೆ ಮನೆಯ ಕಡೆ ಓಡಿದನು ಎಂಬಲ್ಲಿಗೆ ಸ್ಕಂದ ಪುರಾಣದ ೪ನೆ ಅಧ್ಯಾಯದ ಒಬ್ಬಟ್ಟಿನ ಮಹಾತ್ಮೆ ಎಂಬ ಕಥೆಯು ಸಂಪೂರ್ಣವು.

ಭಾರಿ ಸುಂದರವಾಗಿದೆ ನಿಮ್ಮ ಲೇಖನ
ReplyDelete