ಮಲೆನಾಡಿನ
ಮಳೆಗಾಲ ಒಂದು ರೀತಿಯ ಹಿತ ಆದ್ರೂ
ಅಲ್ಲಿಯ ಜನಕ್ಕೆ ಕೆಲವೊಮ್ಮೆ
ಕಿರಿಕಿರಿಯೇ.
ಮಳೆ
ಬರ್ಲೇ ಬೇಕು, ಆದ್ರೆ
ಕೆಲವೊಮ್ಮೆ ರೇಜಿಗೆ ಹುಟ್ಟಿಸೋದು
ಇದೆ. ನದಿಯ
ನೀರು ಸೇತುವೆ ಮೇಲೆ ಬಂದು ರಸ್ತೆ
ಮುಚ್ಚಿ ಹೋಗಿ ದಿನಗಟ್ಲೆ ಊರಿನ
ಸಂಪರ್ಕ ಕಡಿದು ಹೋಗಿದ್ದು ಇದೆ.
ನಮ್ಮೂರು
ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕು
ಹಾಗೂ ಶಿವಮೊಗ್ಗದ ತೀರ್ಥಹಳ್ಳಿ
ತಾಲ್ಲೂಕಿನ ಗಡಿಯಲ್ಲಿರೋ ಪುಟ್ಟ
ಹಳ್ಳಿ. ಮಳೆಗಾಲದ
ರಾಜಧಾನಿ ಆಗುಂಬೆಗೆ ಸುಮಾರು 25
ಕಿಲೋಮೀಟರ್
ದೂರ .
ಊರಿನ
ಹೆಸರು ಹಾಲ್ಮುತ್ತೂರು ಸುಮಾರು
100 ಮನೆ
ಇರೋ ಪುಟ್ಟ ಊರು. ಗಂಟೆಗೊಂದು
ಬಸ್ಸು ಕೊಪ್ಪಕ್ಕೆ, ತುಂಗೆ
ಊರಿಂದ 3ಕಿಲೋಮೀಟರ್
ದೂರ ಹರಿತಾಳೆ. ಊರಲ್ಲಿ
ಹರಿಯೋ ಭಾಗಿ ಹಳ್ಳಕ್ಕೆ ಸೇತುವೆ
ನನ್ನ ಮುತ್ತಜ್ಜ ಕಟ್ಟಿಸಿದ್ದು
ಅಂತ ಅಜ್ಜ ಹೇಳ್ತಿರ್ತಾರೆ.
ಎಷ್ಟು ನಿಜವೋ
ಸುಳ್ಳೋ ಗೊತ್ತಿಲ್ಲ.
ಮಾವಿನಕಟ್ಟೆ
ಕಡೆ ಇಂದ ಹರಿದುಬರೊ ಭಾಗಿ ಹಳ್ಳ
ಕುಡಿನಹಳ್ಳಿ ಬಳಿ ತುಂಗೆ ಒಡಲಿಗೆ
ಸೇರತ್ತೆ. ಬೇಸಿಗೆಯಲ್ಲಿ
ಸ್ವಲ್ಪೇ ಸ್ವಲ್ಪ ನೀರಿದ್ರೂ
ಮಳೆಗಾಲದಲ್ಲಿ ಆದರದು ರೌದ್ರಾವತಾರ.
ಅಕ್ಕ ಪಕ್ಕದ
ಗದ್ದೆ ಅಡಿಕೆ ತೋಟಕ್ಕೆಲ್ಲ ನುಗ್ಗಿ
ನೆರೆ ಸೃಷ್ಟಿಸೋದ್ರಲ್ಲಿ ಎತ್ತಿದ
ಕೈ.
ಭಾಗಿಹಳ್ಲದ್ದು
ಈ ಕಥೆ ಆದ್ರೆ ಕೊಂಚ ದೂರ ಹರಿಯೋ
ತುಂಗೆಯ ಅವತಾರವೇ ಬೇರೆ.
ಹರಿಹರಪುರದಲ್ಲಿತುಂಗ
ಸೇತುವೆ ದಾಟಿ ಊರಿಂದ ಮುಂದೆ
ಬಲಕ್ಕೆ ತಿರುಗಿ 13 ಕಿಲೋಮೀಟರ್
ಬಂದ್ರೆ ಹಾಲ್ಮುತ್ತೂರು.
ಮಧ್ಯೆ ಸಿಗೋದು
ಭಂಡಿಗಡಿ, ಹೊಸೂರು
ಎಂಬೋ ಊರುಗಳು. ಭಂಡಿಗಡಿ
ಇದ್ದಿದ್ರಲ್ಲಿ ಸ್ವಲ್ಪ ದೊಡ್ಡ
ಊರು.
ಭಂಡಿಗಡಿಗಿಂತ
ಕೊಂಚ ಮುಂಚೆ ಸಿಗೋ ಊರು ಹೊಳೇಹದ್ದು.
ಇಲ್ಲಿ ಮೈದುಂಬಿ
ಹರಿಯೋ ತುಂಗೆಗೂ ರಸ್ತೆಗೂ ಒಂದು
ಅಡಿಕೆ ತೋಟದ ಅಂತರ. ಶೃಂಗೇರಿಲಿ
ಬಿಟ್ಟೂ ಬಿಡದೆ ಮಳೆ ಆದ್ರೆ ಇಲ್ಲಿ
ತುಂಗೆ ರಸ್ತೆ ಮೇಲೆ ಬಂದು ನಿಲ್ತಾಳೆ.
ತಿರುವಿನಲ್ಲಿ
ಬಂದು ನಿಂತು ನೋಡಿದ್ರೆ ಎದೆ
ಧಸಕ್ಕೆನ್ನೋ ಭಾವ. ನೋಡ್ಲಿಕ್ಕೆ
ರಸ್ತೆ ಎಲ್ಲಿದೆ? ಎಲ್ಲಿ
ನೋಡಿದ್ರು ಕೆಂಪಾದ ನೀರು.
ರಸ್ತೆ ಯಾವ್ದು
ತೋಟ ಯಾವ್ದು ಹೊಳೆ ಯಾವ್ದು ಒಂದೂ
ಗೊತ್ತಾಗದ ಭಾವ.
ಆಗ
ನಮ್ಮೂರಿಗೆ ಇದ್ದದ್ದು ಒಂದೇ
ಬಸ್. ಮುಂಚೆ
ಕೋಲಾರ - ಕಮ್ಮರಡಿ
ಇದ್ದದ್ದು ಆಮೇಲೆ ಕೋಲಾರ -
ಶೃಂಗೇರಿ ಆಗಿ
ಆಮೇಲೆ ಕೇ ಜಿ ಫ್ - ಶೃಂಗೇರಿ
ಆಗಿ ಬದಲಾದ ಕೆಂಪು ಡಬ್ಬ.
ರಾತ್ರಿ 8:45
ಕ್ಕೆ ಬೆಂಗಳೂರು
ಬಿಟ್ರೆ ಬೆಳಗ್ಗೆ 5 ಕ್ಕೆಲ್ಲಾ
ಹಾಲ್ಮುತ್ತೂರು ತಲುಪುತ್ತಿತ್ತು.
ಜೋರು ಮಳೆಗಾಲದ
ಮಳೆ-ಕತ್ತಲ
ಮುಂಜಾವಲ್ಲಿ ಬಯಲು ಸೀಮೆಯ ಬಸ್
ಡ್ರೈವರ್ಗಳು ರಸ್ತೆ ಮೇಲೆ ನೀರು
ಕಂಡಾಕ್ಷಣ ಧಕ್ಕಂತ ಬಸ್ ನಿಲ್ಲಿಸ್ತಿದ್ರು.
ಅಷ್ಟು ಸಣ್ಣ
ಕಾಡ ರಸ್ತೆಯಲ್ಲಿ ಬಸ್ ವಾಪಸ್
ತಿರುಗಿಸೋಕು ಆಗದೆ ಬೈದುಕೊಂಡು
ಹೇಗೋ ಮಾಡಿ ತಿರುಗಿಸಿ ಮಾವಿನಕಟ್ಟೆಯ
ಬಳಿ ಜನರನ್ನ ಇಳಿಸಿ ಹೋಗ್ತಿದ್ರು.
ಎಷ್ಟೋ
ಡ್ರೈವರ್ಗಳು ಮೊದಲೇ ನಾವ್ ಭಂಡಿಗಡಿ
ಕಡೆ ಬರೋದಿಲ್ಲ ಮಾವಿನಕಟ್ಟೆ ಲಿ
ಬಿಡ್ತೀವಿ ಅಂತೇ ಮುಂಚೇನೇ ಹೇಳಿ
ಹೋಗಿದ್ದು ಇದೆ.
ಇದೆಲ್ಲ
ಯಾಕೆ ನೆನಪಾಯ್ತು ಅಂದ್ರೆ ನಾನು
ಊರಿಗೆ ಹೋಗಿ ಒಂದು ವರ್ಷ ಆಗ್ತಾ
ಬಂತು. ಮತ್ತೆ
ಮಳೆಗಾಲ ಶುರು ಆಗೋ ಈ ಹೊತ್ತಲ್ಲಿ
ಇದೆಲ್ಲ ನೆನಪಾಯ್ತು. ಕಳೆದ
ಎರಡು ವರ್ಷ ಕಳಪೆ ಮಳೆಗಾಲದಿಂದ
ಇದೆಲ್ಲ ಮಿಸ್ ಮಾಡ್ಕೊಂಡಿದ್ದು
ಇದೆ. ಈ
ವರ್ಷಾದ್ರೂ ಒಳ್ಳೆ ಮಳೆ ಆಗಿ ಭಾಗಿ
- ತುಂಗೆ
ಭಾಗಿ ಮೈದುಂಬಿ ಹರಿದು ನಮೂರಿನ
ಜನಕ್ಕೂ ನಾಡಿನ ಜನಕ್ಕೂ ಒಳ್ಳೆದು
ಮಾಡ್ಲಿ ಅಂತ ಆಸೆ, ಹಾರೈಕೆ.
Comments
Post a Comment