ಅದು ಸರ್ ಪಾಸ್. ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಸಾವಿರಾರು ಪರ್ವತಗಳಲ್ಲಿ ಅದೊಂದು. ಸಮುದ್ರ ಮಟ್ಟದಿಂದ ೧೪೦೦೦ ಅಡಿಗಿಂತಲೂ ಎತ್ತರದ ಪರ್ವತ ಪ್ರದೇಶ. ಸುತ್ತಲೂ ಒಂದಕ್ಕಿಂತ ಒಂದು ಎತ್ತರವಾದ ಪರ್ವತ ಶಿಖರಗಳು. ಸಾರ ಉಮ್ಮ್ಗ ಪಾಸ್, ಪಿನ್ ಪಾರ್ವತಿ ಪಾಸ್, ಅನಿಮಲ್ ಪಾಸ್, ಪಾಪಸುರ, ಧರ್ಮಸುರ, ದೇವ್ ಟಿಬ್ಬೇ ಹೀಗೆ ಹಲಾವಾರು ಒಂದಕ್ಕಿಂತ ಒಂದು ಎತ್ತರವಾದ ಹಿಮಾಚ್ಛಾದಿತ ಶಿಖರಗಳು, ಸಾರ ಉಮ್ಮ್ಗ , ಪಾರ್ವತಿ, ಟಿಚು , ಬಡ್ಗಂ, ಪಾರ್ವತಿ ಹೀಗೆ ನೂರಾರು ಜರಿಯುವ ಐಸ್ ಹೊತ್ತ ಗ್ಲೇಶಿಯರ್ ಗಳು, ಗ್ರಹನ್ ನಲ್ಲ, ತೋಷ್ ನಲ್ಲ, ಇವೆರಡೂ ಒಡಗೂಡಿ ಮಂತಲೈ ಸರೋವರದಿಂದ ಹರಿದು ಬರುವ ಭೋರ್ಗರೆದು ಉಕ್ಕಿ ಹರಿವ ಪಾರ್ವತಿ ನದಿ ಹೀಗೆ ಅದೊಂದು ವಿಸ್ಮಯ ವಿಶಿಷ್ಟ ಪ್ರಪಂಚ.
ಸರ್ ಪಾಸ್ ತಲುಪಲು ೪ ದಿನಗಳ ಕಾಲ್ನಡಿಗೆಯ ಕಷ್ಟದ ಹಾದಿ. ಹಲವಾರು ಕೊರೆಯುವ ತೊರೆಗಳನ್ನು ದಾಟಿ, ಕಠಿಣ ಏರುಹಾದಿಯಲ್ಲಿ ನೆಡೆದು ಭೀಕರ ಬಿಸಿಲಿಗೆ ಮೈಯೊಡ್ಡಿ, ಕೊರೆಯುವ ಗಾಳಿಗೆ ಸಿಲುಕಿ, ಹೇಳದೆ ಕೇಳದೆ ಬರುವ ಬಿರುಮಳೆಯಲ್ಲಿ ನೆನೆದು, ಅಚಾನಕ್ಕಾಗಿ ಸುರಿಯುವ ಹಿಮಪಾತಕ್ಕಾಗಿ ಕಾದು ಕೊನೆಗೆ ಸರ್ ಪಾಸ್ ತಲುಪುವಿರಿ.
ದಾರಿಯಲ್ಲಿ ನಿಮಗೆ ಸಿಗುವ ಪ್ರಕೃತಿಯ ಸೌಂದರ್ಯವನ್ನು ಸವಿದು, ಕಾಲು ಜಾರಿ ಬಿದ್ದು, ಅಲ್ಲಲ್ಲಿ ಹಿಮ ಕರಗಿ ಹರಿಯುವ ನೀರು ಕುಡಿದು, ಕೆಲವೊಂದು ಕಡೆ ಹಳ್ಳಿಯವರು ಮಾರುವ ಮ್ಯಾಗಿ ತಿಂದು, ಅಲ್ಲಲ್ಲಿ ಕ್ಯಾಂಪ್ ಮಾಡಿ ಚಳಿಯಲ್ಲಿ ಮುರುಟಿ ಮಲಗಿ, ಕರಡಿಯ ಹೆದರಿಕೆಗೆ ರಾತ್ರಿ ಮೂತ್ರವಿಸರ್ಜನೆಗೆ ಆಚೆ ಹೋಗಲು ಭಯವಾಗಿ, ತಮಾಷೆ ಮಾಡುತ್ತಾ, ಹೆದರುತ್ತಾ ಹಾಗೂ ಹೀಗೂ ಸರ್ ಪಾಸ್ ತಲುಪಿದರೆ ಅಲ್ಲಿಂದ ಕಾಣ ಸಿಗುವ ೩೬೦ ಡಿಗ್ರೀ ನೋಟ ನಯನ ಮನೋಹರ.
ಅಲ್ಲಿನ ಕ್ಯಾಂಪ್ ಸೈಟ್ಗಳೋ ಒಂದಕ್ಕಿಂತ ಒಂದು ಸ್ವರ್ಗ. ಬಿಸ್ಕೇರಿ ಥ್ಯಾಚ್, ಭಂಡಕ್ ಥ್ಯಾಚ್ ವರ್ಣಿಸಲು ಪದಗಳು ಸಾಲದು ಬಿಡಿ. ಭಂಡಕ್ ಥ್ಯಾಚ್ ಬಳಿ ಇರುವ ಜಲಪಾತ ಮುಚ್ಚಿಟ್ಟ ಆಭರಣ.
ಎಲ್ಲಕ್ಕಿಂತ ರೋಚಕ ಅನುಭವ ಸರ್ ಪಾಸ್ ಮೇಲಿಂದ ಐಸ್ ಮೇಲೆ ಜಾರಿ ಬಿಸ್ಕೇರಿ ಥ್ಯಾಚ್ ತಲುಪುವುದು. ಹಲವಾರು ಕಿಲೋಮೀಟರ್ಗಳಷ್ಟು ದೂರ ಜಾರುತ್ತಾ ಉರುಳುತ್ತಾ ಬೀಳುತ್ತಾ ಮೇಲೇಳುತ್ತಾ ಆಂದೊಡ್ಡೆ ಮಾಡಿಕೊಳ್ಳುತ್ತಾ ಮತ್ತೆ ಜಾರುತ್ತಾ ಕ್ಯಾಂಪ್ ತಲುಪಿದಾಗ ನಿಮ್ಮಲ್ಲಿ ಮೂಡುವ ಏನೋ ಕಳೆದುಕೊಂಡ, ಅಯ್ಯೋ ಮುಗಿದು ಹೋಯಿತೆ, ಮನಸ್ಸೆಲ್ಲ ಖಾಲಿ ಆದ ಆ ಭಾವನೆ ನಿಮ್ಮನ್ನು ಕಾಡದೇ ಇರದು.
ಹಿಮಾಲಯದ ಮೇಲೆ ಒಂದು ಎತ್ತರದ ವರೆಗೂ ಮಾತ್ರ ಬೆಳೆಯುವ ಓಕ್ ಅರ್ಥಾತ್ ದೇವದಾರು ಮರಗಳೂ, ಅದರ ಮೊಗ್ಗು, ಆ ಕಾಡು ಸೂಸುವ ಪರಿಮಳ, ಮಳೆ ಇಬ್ಬನಿಗೆ ನೆನೆದು ಇಡೀ ಕಾಡೇ ಒಂದು ಸ್ವರ್ಗ ಸಮಾನ ಅನುಭವ ಕೊಡುತ್ತದೆ. ಪೊದೆಗಳಲ್ಲಿ ಬೆಳೆಯುವ ರೋಡೋಡೆಂಡ್ರೋನ್ ಹೂವಿನ ಪರಿಮಳ, ಅದರಿಂದ ಮಾಡುವ ಪಾನಕದ ರುಚಿ ನಿಮಗೆ ಸಣ್ಣವರಿದ್ದಾಗ ಕುಡಿಯುತ್ತಿದ್ದ ಕೆಮ್ಮಿನ ಔಷದಿಯ ನೆನಪು ತಾರದೆ ಇರದು.
ಗ್ರಹನ್, ಮಿಂಗ್ ಥ್ಯಾಚ್ ಕಡೆಂದ ಹತ್ತಿ ಬಿಸ್ಕೇರಿ , ಭಂಡಕ್ ಥ್ಯಾಚ್ ಕಡೆ ಇಳಿದ ಮೇಲೆ ನಿಮಗೆ ಸಿಗುವ ಮೊದಲ ಊರು ತೋಷ್.
ತೋಷ್ ನ ಬೀದಿ ಬೀದಿಯಲ್ಲಿ ಬೆಳೆಯುವ ವೀಡ್ ವಿಶ್ವ ವಿಖ್ಯಾತ. ಅಲ್ಲಲಿ ಇರುವ ನೂರಾರು ಕೆಫೇ ಗಳಲ್ಲಿ ನಶೆ ಹತ್ತಿ ಕಾಫೀ ಹೀರುತ್ತಾ ಕುಳಿತಿರುವ ನೂರಾರು ಇಸ್ರೇಲೀ ಹಿಪ್ಪಿಗಳು, ಅರ್ಥವಾಗದ ಹಿಬ್ರ್ಯೂ ಭಾಷೆಯಲ್ಲಿ ಬರೆದಿರುವ ಬೋರ್ಡ್‌ಗಳು ನಿಮಗೆ ಬೇರಾವುದೋ ದೇಶಕ್ಕೆ ಬಂದ ಅನುಮಾನ ಮೂಡಿಸದಿದ್ದಾರೆ ಕೇಳಿ.
ಇಲ್ಲಿ ಪಾರ್ವತಿ ನಡಿಗೆ ಅಡ್ಡಲಾಗಿ ಕಟ್ಟಿದ ಬಹು ದೊಡ್ಡಜಲವಿದ್ಯುತ್ ಸ್ಥಾವರ, ಧೂಳು, ಸಾವಿರಾರು ಲಾರಿಗಳು ನಿಮಗೆ ಕಳೆದ ಆರೇಳು ದಿನಗಳ ಸ್ವರ್ಗ ಸಮಾನ ಅನುಭವವನ್ನು ಮರೆಸಿ ಜಗತ್ತಿನ ಕಠಿಣ ಸತ್ಯದ ಅರಿವು ಮೂಡಿಸದೇ ಇರದು.
ಅಲ್ಲಿಂದ ಬಸ್ಸಿನಲ್ಲಿ ಬರುವಾಗ ಸಿಗುವ ಊರು ಮಣಿಕರಣ್. ಇದು ಹಿಂದೂ ಹಾಗೂ ಪಂಜಾಬೀ ಯಾತ್ರಿಕರಿಗೆ ಸಮಾನ ಭಕ್ತಿಯ ಕೇಂದ್ರ. ಇಲ್ಲಿರುವ ದೇವಸ್ತಾನಗಳು ಹಾಗೂ ಗುರುದ್ವಾರ ಇರುವುದು ಬಿಸಿ ನೀರಿನ ಬುಗ್ಗೆಯ ಮೇಲೆ. ಸಲ್ಫರ್ ಮಿಶ್ರಿತ ಈ ನೀರು ಕುದಿಯುತ್ತಾ ಭೂಮಿಯಾಳದಿಂದ ಮೇಲೆ ಉಕ್ಕುವುದ ನೋಡುವುದೇ ಒಂದು ವಿಸ್ಮಯ. ಇಲ್ಲಿ ಬಿಸಿ ನೀರು ಉಕ್ಕುತ್ತಿದ್ದರೆ ಪಕ್ಕದಲ್ಲೇ ಭೋರ್ಗರೆದು ಹರಿಯುವ ಕೊರೆಯುವ ಪಾರ್ವತಿ ನದಿ - ಪ್ರಕೃತಿಯ ಹಲವಾರು ವಿಸ್ಮಯಗಳಲ್ಲಿ ಒಂದು.
ಜೀವನದಲ್ಲಿ ಒಮ್ಮೆಯಾದರೂ ನೋಡಬೇಕಾದ, ಚಾರಣ ಮಾಡಬೇಕಾದ ಪ್ರದೇಶ ಸರ್ ಪಾಸ್. ಆರೇಳು ದಿನಗಳಲ್ಲಿ ಪರ್ವತಗಳು, ಹಸಿರು ಹುಲ್ಲುಗಾವಲು, ಹಿಮ, ಮಳೆ, ಗಾಳಿ, ಗ್ಲೇಶಿಯರ್, ಭೋರ್ಗರೆಯುವ ನದಿ ಇಷ್ಟೆಲ್ಲ ನೋಡಲು ಸಿಗುವ ಅವಕಾಶ ಬೇರೆಲ್ಲೂ ಸಿಗುವುದು ಅನುಮಾನವೇ.

ಭಂಡಕ್ ಥ್ಯಾಚ್

ಬಿಸ್ಕೇರಿ ಥ್ಯಾಚ್

ಬಿಸಿ ನೀರಿನ ಬುಗ್ಗೆ
ಜೀವನದಲ್ಲಿ ಒಮ್ಮೆಯಾದರೂ ನೋಡಬೇಕಾದ, ಚಾರಣ ಮಾಡಬೇಕಾದ ಪ್ರದೇಶ ಸರ್ ಪಾಸ್. ಆರೇಳು ದಿನಗಳಲ್ಲಿ ಪರ್ವತಗಳು, ಹಸಿರು ಹುಲ್ಲುಗಾವಲು, ಹಿಮ, ಮಳೆ, ಗಾಳಿ, ಗ್ಲೇಶಿಯರ್, ಭೋರ್ಗರೆಯುವ ನದಿ ಇಷ್ಟೆಲ್ಲ ನೋಡಲು ಸಿಗುವ ಅವಕಾಶ ಬೇರೆಲ್ಲೂ ಸಿಗುವುದು ಅನುಮಾನವೇ.

Comments
Post a Comment