ಅದು
೨೦೦೯, ನನ್ನ
ಬಳಿ ಒಂದು ಕರೀ ಬಣ್ಣದ ಆಕ್ಟಿವಾ
ಇತ್ತು. ಅದರ
ವರ್ಣನೆ ಈಗಾಗಲೇ ಮಾಡಿದ್ದೇನೆ.
ಏನೇ ಅಂದರೂ
ಅದೊಂದು ನಂಬಿಕಸ್ಥ ಗಾಡಿ.
ಎಲ್ಲೆಂದರಲ್ಲಿಗೆ
ಎಷ್ಟೊತ್ಟಿನಲ್ಲಿ ಎಷ್ಟು ಲೋಡ್
ಹಾಕಿದ್ರೂ ಎಳೆದು ಕೊಂಡು ಹೋಗುತ್ತಿದ್ದ
ಗಾಡಿ ಅದು. ಅದರ
ಮೇಲೆ ಕೂತು ಆಕ್ಸೆಲರೇಟರ್ ಕೊಟ್ರೆ
ರೊಯ್ಯನೆ ನುಗ್ಗಿ ರಸ್ತೆಯಲ್ಲಿರುವ
ಗಾಡಿಗಳನ್ನೆಲ್ಲ ಹಿಂದೆ ಹಾಕುತ್ತಿತ್ತು.
ಆಗತಾನೆ
ನೈಸ್ ರಸ್ತೆ ಓಡಾಟಕ್ಕೆ ತೆರವಾಗಿತ್ತು.
ರಸ್ತೆಯಲ್ಲಿ
ವಾಹನಗಳ ಓಡಾಟ ತೀರಾ ವಿರಳ.
ಎಲ್ಲಿಂದ
ಹೊರಟರೆ ಎಲ್ಲಿಗೆ ಹೋಗತ್ತೆ
ಅನ್ನೋದೇ ಗೊತ್ತಾಗ್ದೇ ಇರೋಷ್ಟು
ಅಪರಿಚಿತ ರಸ್ತೆ ಅದು. ಖಾಲಿ
ರಸ್ತೆಯ ತೆರೆದ ಬಾಹುಗಳ ಅಪ್ಪುಗೆಯ
ಆಸೆಗೆ ಮುನ್ನುಗ್ಗಿ ಬರೋ ವಾಹನಗಳು
ತಿರುವು ತಪ್ಪಿಸಿಕೊಂಡು ಅಲೆಯುತ್ತಿದ್ದ
ದೃಶ್ಯ ಸಾಮಾನ್ಯ. ಬನಶಂಕರಿಯ
ಪಿ ಇ ಎಸ್ ಕಾಲೇಜ್ ಬಳಿ ಶುರುವಾಗುತ್ತಿದ್ದ
ರಸ್ತೆ ಮುಂದೆ ಎಡಕ್ಕೆ ತಿರುಗಿ
ಕನಕಪುರ ರಸ್ತೆ, ಬನ್ನೇರುಘಟ್ಟ
ರಸ್ತೆಯ ಕಡೆ ಅಥವಾ ಬಲಕ್ಕೆ
ತಿರುಗಿದರೆ ಮೈಸೂರು ರಸ್ತೆಯ ಕಡೆ
ಹೊರಳುತ್ತಿತ್ತು. ಈಗ
ಬಿಡಿ ನೀವೆಲ್ಲ ಸಾವಿರಾರು ಬಾರಿ
ಆ ರಸ್ತೆಯಲ್ಲಿ ಒಡಾಡಿರುತ್ತೀರ.
ಆಗ ಆ ರಸ್ತೆ
ಹೊಸದು, ಬೋರ್ಡ್‌ಗಳು
ಕೂಡ ಸರಿಯಾಗಿ ಇರಲಿಲ್ಲ.
ಎಲ್ಲಿ ತಿರುಗು
ಹೇಗೆ ಹೋಗಬೇಕೆಂಬುದೇ ಒಂದು
ಯಕ್ಷಪ್ರಶ್ನೆಯಾಗಿತ್ತು.
ಹೀಗಿರಲು
ಒಂದು ದಿನ ಬನ್ನೇರುಘಟ್ಟ ರಸ್ತೆಯ
ಅಮರ್ ಮನೆಗೆ ಹೊರಟಿದ್ದೆ.
ಸಮಯ ಸುಮಾರು
ರಾತ್ರಿ ೧೦:೩೦
ಇರಬಹುದು. ಅದು
ಮಳೆಗಾಲದ ಒಂದು ರಾತ್ರಿ.
ಬಾನೆಲ್ಲ
ಕಡುಗಪ್ಪಾದ ಮೋಡಗಳಿಂದ ತುಂಬಿ
ಹೋಗಿತ್ತು. ನೆರುತ್ಯದಿಂದ
ರೊಯ್ಯನೆ ಬೀಸುವ ಸುಳಿಗಾಳಿ ರೋಮ
ರೋಮಗಳನ್ನು ನಿಲ್ಲಿಸುತ್ತಿತ್ತು.
ಆಗಲೋ ಈಗಲೋ
ಶುರುವಾಗುವಂತಿದ್ದ ಮಳೆ ಏನೋ
ಯೋಜನೆ ಹಾಕಿದಂತೆ ಹೊಂಚು ಹಾಕಿ
ಕುಳಿತಿತ್ತು. ಬೆಂಗಳೂರಿನ
ಚಳಿಯ ಅಪ್ಪುಗೆ ಅನುಭವಿಸಿದವರಿಗೇ
ಗೊತ್ತು. ಬೇಸಿಗೆಯ
ಸುಡುವ ಹಗಲು ಕೂಡ ಸಂಜೆಯಾಗುತ್ತಿದ್ದಂತೆ
ಅಡಗಿ ಕುಳಿತು ಕೊರೆಯುವ ಚಳಿಯಾಗಿ
ಬದಲಾಗುತ್ತದೆ. ಅದರಲ್ಲೂ
ತೂರಹಳ್ಳಿಯ ಗುಡ್ಡವನ್ನು ಇಬ್ಬಾಗವಾಗಿ
ಸೀಳಿ ಸಾಗುತ್ತಿದ್ದ ರಸ್ತೆ
ಕೊರೆಯುವ ಚಳಿಯೊಂದಿಗೆ ಭೀಕರ
ವಾತಾವರಣ ನಿರ್ಮಿಸುತ್ತಿತ್ತು.
ಮನೆಯಿಂದ
ಹೊರಟು ರಿಂಗ್ ರಸ್ತೆಯ ಮೂಲಕ ನೈಸ್
ರಸ್ತೆ ತಲುಪಿಕೊಂಡ ನಾನು ವೇಗ
ಹೆಚ್ಚು ಮಾಡಿದೆ. ಚಳಿಗೆ
ಹಲ್ಲು ಕಡಿಯಲು ಶುರುವಾಯ್ತು.
ಹೊರಡುವ
ಆತುರದಲ್ಲಿ ಜ್ಯಾಕೆಟ್ ತರಲು
ಮರೆತಿದ್ದೆ. ನನ್ನನ್ನು
ನಾನೇ ಶಪಿಸಿಕೊಳುತ್ತಾ ೨೦ ಕಿಲೋ
ಮೀಟರ್ ಗಳ ಹಾದಿ ಕಳೆಯಲು ನನ್ನ
ನೆಚ್ಚಿನ ಭಾವಗೀತೆ ಗುನುಗಲು
ಶುರು ಮಾಡಿದೆ.
"ನನ್ನ
ಬಾಳಿನ ಇರುಳ
ತಿಳಿಯಾಗಿಸಲು
ಅವಳ
ಕೆಂಪು
ತುಟಿಗಳ ಹವಳ
ಬೆಳಗಲೇ
ಬೇಕು.."
ಹೀಗೆ
ಶುರುವಾಗುತ್ತಿದ್ದ ಗೀತೆ ಮುಂದುವರಿದು
"ಕವಿದಿರುವ
ಮೋಡಗಳ ಸೀಳಿಹಾಕಲು ಅವಳ
ಕಣ್ಣ
ಸುಳಿಮಿಂಚುಗಳು ಹೊಳೆಯಲೇ ಬೇಕು..
"
ಬಾನಿನಲ್ಲಿ
ಕವಿದಿದ್ದ ಮೋಡಗಳು ನಿಜಕ್ಕೂ
ಹಾಡಿಗೆ ತಕ್ಕ ವಾತಾವರಣ ನಿರ್ಮಿಸಿತ್ತು.
ಹಾಡಿಗೆ
ತಕ್ಕಂತೆ ಬೇಕಾಗಿದ್ದದ್ದು
"ಅವಳೊಬ್ಬಳೇ".
ತನ್ಮಯನಾಗಿ
ಹಾಡುತ್ತಿದ್ದ ನಾನು ಮುಂದುವರಿದು
"ಒಣಗಿದ
ಎದೆಯ ನೆಲ
ನೆನೆಯಲು
ನನ್ನವಳ
ಆನಂದ
ಭಾಷ್ಪಗಳ.. " ಎಂದು
ಹಾಡುವಾಗ ಬಾಯಾರಿಕೆ ಆದಂತಾಗಿ
ನಿಲ್ಲಿದೆ. ನನ್ನ
ಹಿಂದಿನಿಂದ ಹೆಣ್ಣು ದನಿಯೊಂದು
"ಮಳೆಯಾಗಬೇಕು.."
ಎಂದು
ಹಾಡಿದ ಹಾಗಾಯ್ತು.
ಹಾಡಿನಲ್ಲಿ
ಮೈ ಮರೆತಿದ್ದ ನಾನು ಇದರ ಕಡೆ ಗಮನ
ಕೊಡದೆ ಸಣ್ಣಗೆ ಶುರುವಾಗ ಮಳೆಯ
ಬಗ್ಗೆ ಗಮನ ಹರಿಸಿದೆ.
ಸಣ್ಣಗೆ
ಶುರುವಾದ ಮಳೆಯ ಹನಿಗಳು ಪಟಪಟನೆ
ಬೀಳಲು ಶುರುವಾಯ್ತು.
ಆಗಸದಲ್ಲಿ
ಮಿಂಚುಗಳ ನರ್ತನ. ಮಳೆ
ಜೋರಾದರೆ ಸಧ್ಯಕ್ಕೆ ಬಿಡುವ
ಲಕ್ಷಣಗಳೇ ಇಲ್ಲ. ಹೀಗೆ
ಯೋಚಿಸಿದ ನಾನು ವೇಗ ಹೆಚ್ಚು
ಮಾಡಿದೆ. ಆಕ್ಟಿವಾದ
ಸ್ಪಿಡೋಮೀಟರ್ ೮೦ ತೋರಿಸುತ್ತಿತ್ತು.
ಈ ವೇಗದಲ್ಲೇ
ಮುಂದುವರಿದರೆ ಬನ್ನೇರುಘಟ್ಟ
ರಸ್ತೆ ತಲುಪಲು ೧೦ ನಿಮಿಷ ಸಾಕೆಂದು
ಹಾಡು ಮುಂದುವರಿಸಿದೆ.
"ನನ್ನ
ಬಾನಿನ ನೀಲಿ
ನನ್ನವಳ
ಕಣ್ಣಾಲಿ.." ಮುಂದೆ
ಚರಣ ಮರೆತು ಹೋಯ್ತು. ಎಷ್ಟು
ಯೋಚಿಸಿದರೂ ಮುಂದಿನ ೨ ಸಾಲು
ನೆನಪಿಗೆ ಬರಲಿಲ್ಲ.
ಮತ್ತೆ
ಮೊದಲಿಂದ ಶುರು ಮಾಡಿದೆ
"ನನ್ನ
ಬಾನಿನ ನೀಲಿ
ನನ್ನವಳ
ಕಣ್ಣಾಲಿ..". ಊಹೂ
ಮುಂದಿನ ಸಾಲು ನೆನಪಾಗುತ್ತಿಲ್ಲ.
ಅಷ್ಟರಲ್ಲಿ
ಹಿಂದಿಂದ ಮತ್ತೆ ಬಂತು ದನಿ.
"ಚಂದ್ರಿಕೆಯ
ಸುಧೆಯಲ್ಲಿ
ತೋಯಲೇ
ಬೇಕು"
ಬೆಚ್ಚಿ
ಬಿದ್ದೆ.
ಬೆನ್ನ
ಹಿಂದೆ ಕಿವಿಯ ಬಳಿ ಉಸುರಿದ ದನಿ
ಯಾವುದಿದು? ಇದು
ಭ್ರಮೆಯಾಗಿರಲು ಸಾಧ್ಯವೇ ಇಲ್ಲ.
ಇದಾಗುತ್ತಿರುವುದು
ಎರಡನೇ ಬಾರಿ. ಮೊದಲು
ಹಿಂದಿನ ಚರಣ ಪೂರ್ಣಗೊಳಿಸಿದ್ದು
ಕೂಡ ಇದೇ ದನಿ. ಹಾಗಾದರೆ
ನನ್ನ ಸ್ಕೂಟರ್ನ ಹಿಂದಿನ ಸೀಟಿನಲ್ಲಿ
ಯಾರಾದರೂ ಕುಳಿತಿದ್ದಾರೆಯೇ?
ನಾನು ಮನಸ್ಸಿನಲ್ಲಿ
ಗುನುಗುತ್ತಿದ್ದ ಹಾಡು ಅವರಿಗೆ
ಕೇಳಿದ್ದಾದರೂ ಹೇಗೆ? ನಾನು
ಎಲ್ಲಿಯೂ ಗಾಡಿ ನಿಲ್ಲಿಸಿ ಯಾರನ್ನೂ
ಹತ್ತಿಸಿಕೊಂಡಿಲ್ಲ. ಮತ್ತೆ
ಹೇಗೆ ಸಾಧ್ಯ? ಸ್ಕೂಟರ್
ಕೂಡ ಹೆಚ್ಚಿನ ಭಾರವಿಲ್ಲದ ಹಾಗೆ
ಮುನ್ನುಗ್ಗುತ್ತಿದೆ.
ಯಾವುದಕ್ಕೂ
ಇರಲಿ ಎಂದು ಹಿಂದೆ ತಿರುಗು ನೋಡಿದೆ.
ಊಹೂಂ ಯಾರಿಲ್ಲ.
ನಾನು ಒಬ್ಬಂಟಿ.
ರಸ್ತೆಯಲ್ಲಿ
ಎಲ್ಲೂ ವಾಹನಗಳ ಓಡಾಟ ಕೂಡ ಇಲ್ಲ.
ಏನು
ನೆಡೆದಿರಬಹುದೆಂದು ಯೋಚಿಸುತ್ತಾ
ಗಾಡಿ ಓಡಿಸುತ್ತಾ ಎದುರು ನೋಡಿದರೆ
ಅಡ್ಡಲಾಗಿ ಗೋಡೆಯೊಂದು ಎದ್ದು
ನಿಂತಿದೆ.
ಅರೆ!
ಇಷ್ಟು ದಿನ
ಇರದ ಗೋಡೆ ರಸ್ತೆಗೆ ಅಡ್ಡಲಾಗಿ
ಇಂದು ಹೇಗೆ? ಇಲ್ಲಿಗೆ
ರಸ್ತೆ ಮುಗಿದು ಹೋಯಿತೆ?
ಅಥವಾ ಯಾರೋ
ರಾತ್ರೋರಾತ್ರಿ ರಸ್ತೆಗೆ ಅಡ್ಡಲಾಗಿ
ಗೋಡೆ ಕಟ್ಟಿದ್ದಾರೆಯೇ?
ಏನೆಂದು
ಅರ್ಥವಾಗಲಿಲ್ಲ. ಗಾಡಿ
ನಿಲ್ಲಿಸಿದೆ. ಸಾವಧಾನವಾಗಿ
ಯೋಚಿಸಿದೆ. ಆಗ
ಹೊಳೆಯಿತು. ಇದು
ರಸ್ತೆಯ ಕೊನೆ. ನಾನು
೨ ಕಿಲೋ ಮೀಟರ್ ಗಳಷ್ಟು ಹಿಂದೆಯೇ
ಎಡಕ್ಕೆ ತಿರುಗಬೇಕಿತ್ತು.
ನೆಡೆದ ವಿಲಕ್ಷಣ
ಘಟನೆಗಳಿಂದ ವಿಚಲಿತನಾಗಿ ಎಡಕ್ಕೆ
ತಿರುಗುವುದು ಮರೆತಿದ್ದೆ.
ಗಾಡಿ
ಹಿಂದೆ ತಿರುಗಿಸಿದೆ.
ಹಿಂದಿರುಗಿ
ಒಂದರ್ಧ ಕಿಲೋ ಮೀಟರ್ ಬಂದಿರಬೇಕು.
ಯಾರೋ ರಸ್ತೆ
ಮಧ್ಯ ನಿಂತು ಕೈ ಅಡ್ಡ ಹಿಡಿದು
ಡ್ರಾಪ್ ಕೇಳುವ ಹಾಗೆ ನಿಂತಿದ್ದರು.
ಅದೊಂದು ಹೆಣ್ಣು
ಈ ಸರಿಹೊತ್ತಿನಲ್ಲಿ ಇಲ್ಲಿ ಹೇಗೆ?
ಹೆಣ್ಣೆಂದರೆ
ನಮ್ಮದು ಕರಗುವ ಮನಸ್ಸಲ್ಲವೇ,
ಗಾಡಿ ನಿಲ್ಲಿಸಿದೆ.
ಅವಳೊಂದು ೨೦-೨೫ರ ಪ್ರಾಯದ ಸುಂದರ ಯುವತಿ.
ಲಕ್ಷಣವಾಗಿ
ಬಟ್ಟೆ ಧರಿಸಿದ್ದಳು. ಅಗಲವಾದ
ಹಣೆ, ತೀಡಿದ
ಮೂಗು, ತೀಕ್ಷ್ಣವಾಗಿ
ದಿಟ್ಟಿಸುವ ಕಣ್ಣುಗಳು.
ಅಬ್ಬಾ!
ಅಂತ ಕಣ್ಣುಗಳನ್ನು
ಜೀವನದಲ್ಲಿಯೇ ನೋಡಿಲ್ಲ ನಾನು.
ಆ ಹೊಳೆಯುವ
ಕಣ್ಣುಗಳ ಸೆಳೆತಕ್ಕೆ ಮಾರುಹೋದೆ
ನಾನು. ಎಲ್ಲಿಗೆಂದು
ಕೇಳಿದೆ. ಕನಕಪುರ
ರಸ್ತೆಯ ತಿರುವಿನ ಬಳಿ ಬಿಟ್ಟರೆ
ಸಾಕೆಂದಳು. ಸ್ಕೂಟರ್
ಹತ್ತಿಸಿಕೊಂಡೆ.
ಗಾಡಿಯಲ್ಲಿ
ಹೋಗುತ್ತಾ ಮಾತು ಶುರು ಮಾಡಿದೆ.
ಅಲ್ಲಿಂದ
ಕನಕಪುರ ರಸ್ತೆಗೆ ಸುಮಾರು ೫
ನಿಮಿಷಗಳ ದಾರಿ. ಸಮಯ
ಸರಿದು ಬಿಡುತ್ತದೆನ್ನುವ ಧಾವಂತ.
ನಿಮ್ಮ ಕಣ್ಣುಗಳು
ಸೆಳೆತಕ್ಕೊಳಗಾಗಿದ್ದೇನೆ,
ಯಾರು ನೀವು
ಎಂದೆ. ಆಕೆ
ಕೊಟ್ಟ ಉತ್ತರ ನನ್ನನ್ನು ಮೂರ್ಛೆ
ಬೀಳಿಸಿತು.
"ನೀವೇ
ಹೇಳಿದಿರಲ್ಲ, ನನ್ನ
ಬಾಳಿನ ನೀಲಿ ನನ್ನವಳ ಕಣ್ಣಾಲಿ
ಚಂದ್ರಿಕೆಯ ಸುಧೆಯಲ್ಲಿ ತೋಯಲೇ
ಬೇಕು" ಎಂದು. ಅದಕ್ಕಾಗಿ
ಬಂದೆ."
ಓಡುತ್ತಿದ್ದ
ಗಾಡಿ ಗಕ್ಕನೆ ನಿಲ್ಲಿಸಿದೆ.
ದೀಪ ಆರುತ್ತಿದ್ದ
ಹಾಗೆ ಕಗ್ಗತ್ತಲು ಆವರಿಸಿತು. ಸ್ಕೂಟೆರ್‌ನಿಂದ ಕೆಳಗಿಳಿದ ಅವಳು ಮೆಲ್ಲನೆ ನನ್ನೆದುರು ಬಂದು ನಿಂತಳು. ಹೊಳೆಯುತ್ತಿದ್ದ ಆ ಕಣ್ಣುಗಳ ಕಾಂತಿ ಆ ಕಗ್ಗತ್ತಲ ರಾತ್ರಿಯಲ್ಲೂ ಸುತ್ತೆಲ್ಲ ಬೆಳಕು ಬೀರತೊಡಗಿತು. ಕ್ಷಣಕ್ಷಣಕ್ಕೂ ತೀವ್ರವಾಗುತ್ತಾ ಹೋದ ಆ ಬೆಳಕು ಬೆಳದಿಂಗಳಂತೆ ರಸ್ತೆಯೆಲ್ಲಾ ಚೆಲ್ಲಾಡಿತು. ಚಂದ್ರಿಕೆಯ ಸುಧೆಯಲ್ಲಿ ತೋಯಬೆಕಿದ್ದ ನಾನು ಬೆವರಿನಲ್ಲಿ ತೋಯ್ದುಹೊದೆ. ಅವಳ ಕಣ್ಣಿನಿಂದ ಸೂಸುತ್ತಿದ್ದ ಆ ಬೆಳಕು ನನ್ನನಾವರಿಸಿದಂತೆ, ನನ್ನನ್ನು ಸೆಳೆದುಕೊಂಡಂತೆ ದೇಹವೆಲ್ಲ ಕಂಪಿಸತೊಡಗಿತು. ಯಾವುದೋ ಅತೀಂದ್ರಿಯ ಶಕ್ತಿಯೊಂದು ನನ್ನನ್ನು ಎತ್ತಿ ಎಸೆದಂತೆ ಭಾಸವಾಯಿತು. ಏನೆಂದು ಅರ್ಥವಾಗುವುದರೊಳಗೆ ಮೂರ್ಛೆ ಹೋದೆ.
- ಸಶೇಷ
- ಸಶೇಷ
ಅದ್ಭುತ ಆರಂಭ ಮರೆ ! Fantastic. ಶೇಷ ಭಾಗಕ್ಕೆ ಕಾಯ್ತಿದೀನಿ :)
ReplyDelete