ಕ್ರಿಕೆಟ್
ಆಟದಲ್ಲಿ ಆಕ್ರಮಣಶೀಲತೆಯನ್ನು
ನಾವೆಲ್ಲ ನೋಡಿಯೇ ಇದ್ದೇವೆ.
ಈಗಿನ ಪೀಳಿಗೆಯ
ಆಟಗಾರರ ಆಟವೇ ಆಕ್ರಮಣದ ರೀತಿ.
ವಿರಾಟ್
ಕೊಹ್ಲಿಯಂತಹ ಆಟಗಾರರು ಮೈದಾನದ
ಒಳಗೂ ಹೊರಗೂ ತಮ್ಮ ಈ ಒಂದು
ಆಕ್ರಮಣಾಶೈಲಿಯ ಆಟ, ಮಾತಿನಿಂದಲೇ
ಹೆಸರುವಾಸಿ.
ಒಂದು
ಕಾಲದಲ್ಲಿ ಆಸ್ಟ್ರೇಲಿಯ ಕ್ರಿಕೆಟ್
ತಂಡ ಈ ರೀತಿಯ ಆಕ್ರಮಣಕಾರಿ ಆಟಕ್ಕೆ
ಚಿರಪರಿಚಿತವಾಗಿತ್ತು.
ಎದುರಾಳಿಯ
ತಂಡಕ್ಕೆ ಕಿಚಾಯಿಸುವುದು,
ರೇಗಿಸುವುದು,
ದುರುಗುಟ್ಟಿ
ನೋಡುವುದು, ಕ್ರೀಸ್ನಲ್ಲಿ
ನಿಂತ ಆಟಗಾರರ ಬಗ್ಗೆ ಮಾತನಾಡುವುದು,
ಅವರ ಆಟದ ಮೇಲಿನ
ಹಿಡಿತ ತಪ್ಪುವಂತೆ ಮಾಡುವುದು
ಒಟ್ಟಿನಲ್ಲಿ ಪಂದ್ಯ ಗೆದ್ದರೆ
ಸಾಕು ಎನ್ನು ಮನೋಭಾವ.
ಅಸ್ತ್ರಲಿಯಾದ
ವೇಗಿ ಮರ್ವ್ ಹ್ಯೂಗ್ಸ್ ಇಂಥ
ಆಕ್ರಮಣ ಆಟದಲ್ಲಿ ಎತ್ತಿದ ಕೈ.
ಸ್ಲೆಡ್ಜಿಂಗ್
ಎಂದೇ ಕರೆಯಲಾಗುವ ಈ ರೀತಿಯ
ಕಿಛಾಯಿಸುವ ಮನೋಭಾವ ಅವನಿಗೆ
ಹೊಸದೇನಲ್ಲ. ಕ್ರಿಕೆಟ್ನ
ದಂತಕಥೆ ವಿವ್ ರಿಚರ್ಡ್ಸ್ ಗೆ
ಗುರಾಯಿಸಿ "ಫಕ್
ಆಫ್"ಎಂದು
ಹೇಳಿದ ಮಹಾನುಭಾವನೀತ. ಆತನ
ಮೀಸೆ, ಓಡಿ
ಬರುವ ಶೈಲಿ, ಕೆಂಡದಂತಹ
ದುರುಗುಟ್ಟಿ ನೋಡುವ ಕಣ್ಣುಗಳು,
ಬಾಯಿಂದ
ಪುಂಖಾನುಪುಂಖವಾಗಿ ಉದುರುತ್ತಿದ್ದ
ಬೈಗುಳಗಳು ಆತನಿಗೆ ಈ ಸ್ಲೆಡ್ಜಿಂಗ್
ಪ್ರಪಂಚದಲ್ಲಿ ವಿಶಿಷ್ಟ ಸ್ಥಾನ
ಕೊಟ್ಟಿವೆ.
ಕೆಣಕುತ್ತಿರುವ ಮರ್ವ್ ಹ್ಯೂಗ್ಸ್
ಎಲ್ಲ
ಆಟಗಳಲ್ಲೂ ಎದುರಾಯಿಲಾ ಸ್ಥೈರ್ಯ
ಕುಸಿಯುವಂತೆ ಮಾಡಲು ಕಿಚಾಯಿಸುವುದು,
ರೇಗಿಸುವುದು
ಸಾಮಾನ್ಯ. ಆದರೆ
ರಗ್ಬೀ ಕ್ರೀಡೆಯಲ್ಲಿ ಮಾತ್ರ
ಇದೊಂದು ರೋಮಾಂಚಕ ಅನುಭವ.
ಆಲ್
ಬ್ಲ್ಯಾಕ್ಸ್ ಎಂದೇ ಕರೆಯಲ್ಪಡುವ
ನ್ಯೂ ಜ಼ೀಲ್ಯಾಂಡ್ ನಾ ರಾಷ್ಟ್ರೀಯ
ರಗ್ಬೀ ತಂಡ ತನ್ನ ಪ್ರತಿ ಅಂತರ
ರಾಷ್ಟ್ರೀಯ ಪಂದ್ಯಕ್ಕೂ ಮುನ್ನ
ನೀಡುವ ರಣ ವೀಳ್ಯ ಅಥವಾ ಪಂಥಾಹ್ವಾನ
ಮೈ ನವಿರೇಳಿಸುವಂಥದ್ದು.
ನ್ಯೂ
ಜ಼ೀಲ್ಯಾಂಡ್ ನ ಮೌರಿ ಜನಾಂಗ
ಹಿಂದಿನ ಕಾಲದಲ್ಲಿ ಪ್ರತಿ ಯುದ್ಧಕ್ಕೂ
ಮುನ್ನ ಮಾಡುತ್ತಿದ್ದ ರಣ ಘೋಷ
ಅರ್ಥಾತ್ ಹಾಕ. ಮೌರಿಗಳ
ಆಡುಭಾಷೆಯಲ್ಲಿ ಕೂಗುತ್ತಾ
ಕರೆಯುತ್ತಾ ವಿವಿಧ ಭಂಗಿ,
ಮುಖಭಾವಗಳನ್ನು
ಪ್ರದರ್ಶಿಸುತ್ತಾ ರಣಾಹ್ವಾನ
ನೀಡುತ್ತಿದ್ದ ಪರಿ ರೋಚಕ.
ಹಾಕ ಪ್ರದರ್ಶಿಸುತ್ತಿರುವ ಮೌರಿಗಳ ತಂಡ
ಅದನ್ನೇ
ಮುಂದುವರೆಸಿಕೊಂಡು ಬಂದ ರಗ್ಬೀ
ತಂಡ ತನ್ನ ಪ್ರತಿ ಅಂತರ ರಾಷ್ಟ್ರೀಯ
ಪಂದ್ಯಕ್ಕೂ ಮುನ್ನ ಎದುರಾಳಿ
ತಂಡಕ್ಕೆ ನೀಡುವ ಆಹ್ವಾನ ನೋಡಿಯೇ
ಸವಿಯಬೇಕು. ಮೌರಿ
ಭಾಷೆಯಲ್ಲಿ ಕೂಗುತ್ತಾ,
ಕೈ ಕಾಲು
ಬಡಿಯುತ್ತಾ, ಎದೆ
ತಟ್ಟುತ್ತಾ, ವಿವಿಧ
ಭಾವನೆಗಳನ್ನು ಪ್ರದರ್ಶಿಸುತ್ತಾ
ಬಂದು ಗೆದ್ದು ನೋಡು ಎನ್ನುವ ಈ
ಆಹ್ವಾನ ಎದುರಾಳಿಯ ಎದೆ ನಡುಗಿಸದೆ
ಇರದು.
ಯುದ್ಧಕಾಲದಲ್ಲಿ
ಎದುರಾಳಿಯ ಆತ್ಮಸ್ಥೈರ್ಯ ಕುಸಿಯುವಂತೆ
ಮಾಡಲು, ಹೆದರಿಸಲು,
ತಮ್ಮ ಒಗ್ಗಟ್ಟು
ಪ್ರದರ್ಶಿಸಲು ನೀಡುತ್ತಿದ್ದ ಈ
ಆಹ್ವಾನ ಇಂದಿನ ಕ್ರೀಡೆಯಲ್ಲಿ
ಬಳಕೆಯಾದರೂ ಅದರ ತೀವ್ರತೆ
ಉಳಿಸಿಕೊಂಡಿರುವುದು ವಿಶೇಷ.
ಹಾಕ ಪ್ರದರ್ಶಿಸುತ್ತಿರುವ ಆಲ್ ಬ್ಲ್ಯಾಕ್ಸ್
ಅಂದಹಾಗೆ
ನ್ಯೂ ಜ಼ೀಲ್ಯಾಂಡ್ನ ರಗ್ಬೀ ತಂಡ
ಪ್ರಪಂಚದ ಅತ್ಯುತ್ತಮ ರಗ್ಬೀ
ತಂಡ. ತಾನಾಡಿದ
೫೦೦ಕ್ಕೂ ಹೆಚ್ಚು ಅಂತರ ರಾಷ್ಟ್ರೀಯ
ಪಂದ್ಯಗಳಲ್ಲಿ ೪೦೦ಕ್ಕೂ ಹೆಚ್ಕು
ಪಂದ್ಯ ಗೆದ್ದು ಶೇಖಡಾ ೭೮%
ಗೆಲುವಿನ
ಸರಾಸರಿ ಹೊಂದಿರುವ ಏಕೈಕ ತಂಡ.
ತಾನಾಡಿದ
ಪ್ರತಿ ಎದುರಾಳಿಯಮೇಲೂ ಒಂದಾದರೂ
ಪಂದ್ಯ ಗೆದ್ದ ಪ್ರಥಮ ಮತ್ತು ಏಕೈಕ
ತಂಡ. ರಗ್ಬೀಯಲ್ಲಿ
ಅಷ್ಟೇ ಅಲ್ಲ, ಯಾವುದೇ
ಕ್ರೀಡೆ ಪರಿಗಣಿಸಿದರೂ ಇಷ್ಟು
ಯಶಸ್ವಿಯಾದ ತಂಡ ಮತ್ತೊಂದಿಲ್ಲ.
2011ರ ರಗ್ಬೀ ವಿಶ್ವಕಪ್ ಪಂದ್ಯದಲ್ಲಿ ಫ್ರ್ಯಾನ್ಸ್ ತಂಡಕ್ಕೆ ನೀಡಿದ ಹಾಕ ಅರ್ಥಾತ್ ರಣಾಹ್ವಾನ. ಫ್ರ್ಯಾನ್ಸ್ ನ ತಂಡ ಉತ್ತರಿಸಿದ್ದು ಬಿಲ್ಲಿನ ರೀತಿಯಲ್ಲಿ ತಂಡವನ್ನು ರಚನೆ ಮಾಡಿ.
I die! I die! I live! I live!
I die! I die! I live! I live!
This is the man, so hairy
Because our leader, so strong and masculine,
This is the hairy man
Who fetched the sun
And caused it to shine again
One upward step! Another upward step!
An upward step, another… the sun shines!
ಹೀಗೆ
ಸಾಗುವ ಅವರ ರಣವೀಳ್ಯ ಎದುರಿಸಲು
ಎದುರಾಳಿ ತಂಡಗಳು ಮಾಡುವ
ತಂತ್ರಗಳುಹಲವು. ಪಂದ್ಯಕ್ಕೆ
ಮುನ್ನ ವಾರ್ಮ್ ಅಪ್ ಮಾಡುತ್ತಲೋ,
ಆಲ್ ಬ್ಲ್ಯಾಕ್ಸ್
ತಂಡದತ್ತ ಮುಂದುವರಿಯುತ್ತಲೋ,
ಗಣನೆಗೆ
ತೆಗೆದುಕೊಂಡಿಲ್ಲ ಎಂದು ವರ್ತಿಸುತ್ತಲೋ,
ಅಥವಾ ದುರುಗುಟ್ಟಿ
ನೋಡುತ್ತಲೊ ಆಲ್ ಬ್ಲ್ಯಾಕ್ಸ್
ತಂಡದ ಹಾಕ ಕ್ಕೆ ಉತ್ತರಿಸುವುದು
ಸಾಮಾನ್ಯ. ಆದರೂ
ಇಂತಹ ಭಯಹುಟ್ಟಿಸುವ ರೋಮಾಚಂಕ
ರಣಾಹ್ವಾನ ನೀಡುವ ಮತ್ತೊಂದು
ಕ್ರೀಡೆ, ಮತ್ತೊಂದು
ತಂಡ ಕ್ರೀಡೆಯ ಇತಿಹಾಸದಲ್ಲೇ
ಇಲ್ಲ.



Comments
Post a Comment